janadhvani

Kannada Online News Paper

ಕೆಸಿಎಫ್ (KCF) ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸೋಣ

ಕೆಸಿಎಫ್‌ನ ಸೇವಾ ಮನೋಭಾವಕ್ಕೆ ಕೈಜೋಡಿಸಿ – ಇಹ್ಸಾನ್ ಕರ್ನಾಟಕದ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಗಳಿಗೆ ಬೆಂಬಲವಾಗಿ ನಿಲ್ಲೋಣ.

ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ತನ್ನ ಸೇವಾ ಮನೋಭಾವದ ಮೂಲಕ ಕೊಲ್ಲಿ ರಾಷ್ಟ್ರಗಳು ಹಾಗೂ ಯುರೋಪ್ ಸೇರಿದಂತೆ ವಿವಿಧ ವಿದೇಶಿ ರಾಷ್ಟ್ರಗಳಲ್ಲಿ ಕನ್ನಡಿಗರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹೆಮ್ಮೆಯ ಸಂಘಟನೆಯಾಗಿದೆ. ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಗೆ ಆಸರೆಯಾಗಿ, ಅವರ ಶೈಕ್ಷಣಿಕ, ಸಾಮಾಜಿಕ ಹಾಗೂ ಮಾನವೀಯ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಮಹತ್ವದ ಕೊಡುಗೆ ನೀಡುತ್ತಿದೆ.

ಅದೇ ರೀತಿ, ಉತ್ತರ ಕರ್ನಾಟಕದ ಸುನ್ನಿ ಸಂಘ ಕುಟುಂಬದ ಅಧಿಕೃತ ಅಧೀನ ಸಂಸ್ಥೆಯಾದ ಇಶಾನ್ ಕರ್ನಾಟಕ, ಉತ್ತರ ಕರ್ನಾಟಕದ ಮುಸ್ಲಿಂ ಸಮುದಾಯದ ಶೈಕ್ಷಣಿಕ ಮತ್ತು ಸಾಮಾಜಿಕ ಬೆಳವಣಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಹಲವು ಕ್ರಾಂತಿಕಾರಿ ಹೆಜ್ಜೆಗಳನ್ನು ಇಡುವ ಮೂಲಕ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ, ಶಿಕ್ಷಣದ ವಿಸ್ತರಣೆ ಹಾಗೂ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ.

ಇಶಾನ್ ಕರ್ನಾಟಕದ ಈ ಶೈಕ್ಷಣಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳಿಗೆ ಕೆಸಿಎಫ್ ಆರ್ಥಿಕ ಬೆನ್ನೆಲುಬಾಗಿ ನಿಂತಿರುವುದು ಅತ್ಯಂತ ಶ್ಲಾಘನೀಯ. ಈ ಎರಡು ಸಂಘಟನೆಗಳ ನಡುವಿನ ಸೇವಾ ಸಹಕಾರವು ಇನ್ನಷ್ಟು ಬಲಗೊಳ್ಳಬೇಕಾಗಿದೆ.

ಆದ್ದರಿಂದ, ಕೆಸಿಎಫ್‌ನ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ವಿಶೇಷವಾಗಿ ಅನಿವಾಸಿ ಕನ್ನಡಿಗರು ಹಾಗೂ ಮುಸ್ಲಿಂ ಕನ್ನಡಿಗ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗಿ ನೋಂದಾಯಿಸಿಕೊಳ್ಳುವುದರೊಂದಿಗೆ ಕೆಸಿಎಫ್‌ನ ಅಡಿಪಾಯವನ್ನು ಮತ್ತಷ್ಟು ಗಟ್ಟಿಗೊಳಿಸಬೇಕೆಂದು ಹೃತ್ಪೂರ್ವಕವಾಗಿ ವಿನಂತಿಸುತ್ತೇನೆ.

ನಮ್ಮ ಸದಸ್ಯತ್ವವೇ ನಮ್ಮ ಸಂಘಟನೆಯ ಶಕ್ತಿ. ನಮ್ಮ ಒಗ್ಗಟ್ಟೇ ನಮ್ಮ ಸೇವೆಯ ಯಶಸ್ಸು.

ಬನ್ನಿ, ಕೆಸಿಎಫ್ ಸದಸ್ಯತ್ವ ಅಭಿಯಾನದಲ್ಲಿ ಕೈಜೋಡಿಸೋಣ. ಸೇವೆಯ ಈ ಮಹತ್ಕಾರ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯೋಣ.

ಮೌಲಾನಾ ಎನ್ ಕೆ ಎಂ ಶಾಫಿ ಸಅದಿ

ಅಧ್ಯಕ್ಷರು – ಇಹ್ಸಾನ್ ಕರ್ನಾಟಕ

ಉಪಾಧ್ಯಕ್ಷರು – ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್

ಉಪಾಧ್ಯಕ್ಷರು – ಕರ್ನಾಟಕ ಮುಸ್ಲಿಂ ಜಮಾತ್

ಇದನ್ನೂ ಓದಿರಿ...