janadhvani

Kannada Online News Paper

ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್‌ಕ್ಲೇವ್ ಸಂಪನ್ನ

ಬೆಳ್ಳಾರೆ, ಸೆ.23: ಬೆಳ್ಳಾರೆ ದಾರುಲ್ ಹಿಕ್ಮ ಸಂಸ್ಥೆಯ ವಿಶೇಷ ಸಭೆ “Darul Hikma Unity Conclave” ಹೆಸರಿನಲ್ಲಿ ಮಂಗಳವಾರ ನಡೆಯಿತು.

ಸಯ್ಯದ್ ಕಾಜೂರು ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ದಾವೂದ್ ಸಹದಿ ಬೆಳ್ಳಾರೆ ಸ್ವಾಗತಿಸಿದರು. ಹಾಫಿಲ್ ಹಮೀದ್ ಮುಸ್ಲಿಯಾರ್ ಉದ್ಘಾಟಿಸಿದರು.

28/08/2022 ರಿಂದ 22/09/2026 ರವರೆಗಿನ ವರದಿಯನ್ನು ಜೊತೆ ಕಾರ್ಯದರ್ಶಿ ಶಂಸುದ್ದೀನ್ Zam Zam ಮಂಡಿಸಿದರು. ಲೆಕ್ಕಪತ್ರವನ್ನು ಹನೀಫ್ ಹಾಜಿ ಇಂದ್ರಾಜೆ ಮಂಡಿಸಿದರು. ಸಭೆಯು ಅನುಮೋದಿಸಿತು.

ಮುಂದಿನ 2 ವರ್ಷದಲ್ಲಿ ಸುಮಾರು 1 ಕೋಟಿ ರೂ. ಯೋಜನೆಯ ಬಗ್ಗೆ ಸಾಲಿಹ್ ಬೆಳ್ಳಾರೆ ವಿವರಿಸಿದರು.

ಅಧ್ಯಕ್ಷೀಯ ಭಾಷಣದಲ್ಲಿ ಸಯ್ಯದ್ ಕಾಜೂರು ತಂಙಳ್ ಮಾತನಾಡಿ, ದಾನಿಗಳು, ಹಿತೈಷಿಗಳ ಸಹಕಾರದಿಂದ ಸಂಸ್ಥೆ ಅಭಿವೃದ್ಧಿ ಹಾದಿಯಲ್ಲಿದೆ. ಇದನ್ನು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಕೇಂದ್ರವಾಗಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ವಿಶೇಷ ಅತಿಥಿ KMJ ರಾಜ್ಯ ಸದಸ್ಯ GM ಮುಹಿಯದ್ದೀನ್ ಕಾಮಿಲ್ ಸಖಾಫಿ ಮಾತನಾಡಿ, ‘ನಾನು’ ಎಂಬ ಅಹಂ ಬಿಟ್ಟು ‘ನಾವು’ ಎಂಬ ಭಾವನೆಯಿಂದ ಕೆಲಸ ಮಾಡಿದರೆ ಸಂಸ್ಥೆಯ ಬೆಳವಣಿಗೆ ಸುಗಮ ಎಂದು ಹೇಳಿದರು.

ನೂತನ ಕೇಂದ್ರ ಸಮಿತಿ:

– *ಅಧ್ಯಕ್ಷರು:* ಅಸ್ಸಯ್ಯದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು

– *ಕಾರ್ಯಾಧ್ಯಕ್ಷರು:* ದಾವೂದ್ ಸಹದಿ ಬೆಳ್ಳಾರೆ

– *ಪ್ರಧಾನ ಕಾರ್ಯದರ್ಶಿ:* ಹನೀಫ್ ಬೆಳ್ಳಾರೆ

– *ಕೋಶಾಧಿಕಾರಿ:* ಹಾಜಿ ಮಹಮೂದ್ BA ಬೆಳ್ಳಾರೆ

– *ಉಪಾಧ್ಯಕ್ಷರು:* ಹಾಜಿ ಹಸನ್ ಸಖಾಫಿ, ಸತ್ತಾರ್ ಸಖಾಫಿ, ಹಸನ್ ಹಾಜಿ ಇಂದ್ರಾಜೆ

– *ಜೊತೆ ಕಾರ್ಯದರ್ಶಿಗಳು:* ಹನೀಫ್ ಹಾಜಿ ಇಂದ್ರಾಜೆ, ಶಂಸುದ್ದೀನ್ Zam Zam, ಮುಸ್ತಾಫ ಮಾಸ್ತಿಕಟ್ಟೆ, ಖಲೀಲ್ ಬಿಸ್ಮಿಲ್ಲಾ

– *GCC ಕೋ-ಆರ್ಡಿನೇಟರ್:* ಯೂಸುಫ್ ಹಾಜಿ ಚೆನ್ನಾರ್

– 6 ಉಪಸಮಿತಿಗಳಿಗೆ 38 ಕಾರ್ಯಕಾರಿ ಸದಸ್ಯರು

ಸ್ಥಳದಾನಿಗಳಾದ ಮರ್ಹೂಂ ಇಸ್ಮಾಯಿಲ್ ಹಾಜಿ ಮಾಸ್ತಿಕಟ್ಟೆ ದಂಪತಿ ಹಾಗೂ ಮೃತಪಟ್ಟ ಎಲ್ಲ ಹಿತೈಷಿಗಳಿಗಾಗಿ ದುವಾ ನೆರವೇರಿಸಲಾಯಿತು. ನೂತನ ಕಾರ್ಯದರ್ಶಿ ಹನೀಫ್ ಬೆಳ್ಳಾರೆ ವಂದಿಸಿ, ಸ್ವಲಾತ್ ನೊಂದಿಗೆ ಸಭೆ ಮುಕ್ತಾಯವಾಯಿತು..

ಇದನ್ನೂ ಓದಿರಿ...