ಮಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ಕರ್ನಾಟಕ ಹಜ್ ಕಮಿಟಿ ವತಿಯಿಂದ, ಮಂಗಳೂರಿನ ಬಜ್ಪೆಯಲ್ಲಿ ನಿರ್ಮಿಸಲು ಉದ್ದೇಶಿಸಿದ ಹಜ್ ಭವನ ನಿರ್ಮಾಣದ ಶಿಲಾನ್ಯಾಸ ಸಂಧರ್ಭದಲ್ಲಿ ಜಿಲ್ಲೆಗೆ ಆಗಮಿಸಿದ ವಸತಿ ಸಚಿವ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಅವರು ಖಾಸಗಿ ಪತ್ರಿಕಾ ಸಂದರ್ಶನದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡುವ ಸಂಧರ್ಬದಲ್ಲಿ, ಮಂಗಳೂರಿನ ಹಜ್ ಭವನಕ್ಕೆ ಈ ಹಿಂದೆ ಜಮೀನು ಲಭ್ಯವಾಗಿಸಲು ಮಂಗಳೂರಿನ ಯಾವ ಮುಸ್ಲಿಮರು ಆಸಕ್ತಿ ತೋರಿಲ್ಲ, ಇನಾಯತ್ ಆಲಿ ಅವರು ಮಾತ್ರ ಮಾಡಿ ಕೊಟ್ಟರು ಎಂಬ ರೀತಿಯಲ್ಲಿ ಮಾತನಾಡಿದ್ದಾರೆ.
ಹಜ್ ಭವನ ನಿರ್ಮಾಣಕ್ಕಾಗಿ ಈ ಹಿಂದೆ ಮಂಗಳೂರಿನ ಹತ್ತು ಹಲವು ಮುಖಂಡರು, ಜನ ಪ್ರತಿನಿಧಿಗಳು,. ಸ್ಥಿತಿವಂತರು ಈ ಬಗ್ಗೆ ಪ್ರಯತ್ನ ಪಟ್ಟಿದ್ದಾರೆ ಎಂಬುದನ್ನು ಸಚಿವರು ಅರ್ಥ ಮಾಡಿಕೊಳ್ಳಬೇಕು, ಈ ಹಿಂದೆ ಸರಕಾರದ ಜಮೀನು ಮತ್ತು ಪಕ್ಕದ ಖಾಸಗಿ ಜಮೀನು ಅನ್ನು ಭೂಸ್ವಾಧೀನ ಗೊಳಿಸಿ ಹಜ್ ಭವನ ಜಮೀನಿಗೆ ಪ್ರಯತ್ನ ಪಡಲು ಜಮೀರ್ ಖಾನ್ ಅವರು ಉತ್ಸಾಹ ತೋರಿರಲಿಲ್ಲ ಎಂಬುದನ್ನು ಅವರು ಮರೆಯಬಾರದು.
ಓರ್ವ ಸರಕಾರದ ಸಚಿವರಾಗಿ ಅವರು ಮಂಗಳೂರಿನ ಸ್ಥಿತಿವಂತರ ಬಗ್ಗೆ ಈ ರೀತಿಯಲ್ಲಿ ಸಂಭೋದಿಸಿರುವುದು ಖೇದಕರ. ಇನಾಯತ್ ಆಲಿ ಯವರ ಕೊಡುಗೆಯನ್ನು ಎಲ್ಲರು ಶ್ಲಾಘಿಸ ಬೇಕು, ಆದರೆ ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಏನು ಕೊಡುಗೆ ನೀಡಿಲ್ಲ ಎಂಬ ರೀತಿಯ ಅವರ ಮಾತು ಅಪ್ರಸ್ತುತ. ಮಂಗಳೂರಿನ ಅಸಂಖ್ಯಾತ ಅದೆಷ್ಟೋ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ವಿವಿಧ ರೀತಿಯಲ್ಲಿ ಅದೆಷ್ಟೋ ಕೊಡುಗೆ ನೀಡಿದ್ದನ್ನು ಮರೆಯಲಾಗದು ಎಂಬುದನ್ನು ಸಚಿವರು ಅರಿಯಲಿ.
















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್