ರಿಯಾದ್: ಇರಾಕ್ನಲ್ಲಿ ಸಕ್ರಿಯವಾಗಿರುವ ಇರಾನ್ ಬೆಂಬಲಿತ ಭಯೋತ್ಪಾದಕ ಹಾಗೂ ಸಶಸ್ತ್ರ ಗುಂಪುಗಳನ್ನು ಗುರಿಯಾಗಿಸಿಕೊಂಡು ಸೌದಿ ಅರೇಬಿಯಾ ನಡೆಸಿದ ಮಿಲಿಟರಿ ಕಾರ್ಯಾಚರಣೆಗಳು ಇರಾಕಿ ಜನತೆಗಾಗಲಿ ಅಥವಾ ಇರಾಕ್ ಸರ್ಕಾರಕ್ಕಾಗಲಿ ವಿರುದ್ಧವಾದುದಲ್ಲ ಎಂದು ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ. ಸೌದಿಯ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯೊಡ್ಡುವ ಹಾಗೂ ನಾಗರಿಕ ಪ್ರದೇಶಗಳು ಮತ್ತು ಪ್ರಮುಖ ಆರ್ಥಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿರುವ ಸಶಸ್ತ್ರ ಗುಂಪುಗಳ ಕ್ಷಮತೆಯನ್ನು ಧ್ವಂಸಗೊಳಿಸುವುದು ಮಾತ್ರವೇ ಈ ದಾಳಿಗಳ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಗರಿಷ್ಠ ಮಟ್ಟದ ಸಂಯಮವನ್ನು ಕಾಯ್ದುಕೊಂಡ ನಂತರ ಮತ್ತು ಎಲ್ಲಾ ರೀತಿಯ ರಾಜತಾಂತ್ರಿಕ ಹಾಗೂ ರಾಜಕೀಯ ಮಾರ್ಗಗಳನ್ನು ಸಂಪೂರ್ಣವಾಗಿ ಬಳಸಿಕೊಂಡ ನಂತರವೇ ಇಂತಹ ಪ್ರತಿಕ್ರಿಯೆಗೆ ಮುಂದಾಗಿದ್ದೇವೆ ಎಂದು ಸೌದಿ ತಿಳಿಸಿದೆ. ಭಯೋತ್ಪಾದಕ ಸಶಸ್ತ್ರ ಗುಂಪುಗಳು ಇರಾಕ್ನ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮತ್ತು ಇತರ ಅರಬ್-ಇಸ್ಲಾಮಿಕ್ ದೇಶಗಳೊಂದಿಗಿನ ಸಂಬಂಧಗಳಿಗೆ ಧಕ್ಕೆ ತರಲು ಯತ್ನಿಸುತ್ತಿವೆ. ಇವರು ಇರಾಕ್ನ ಭೂಪ್ರದೇಶ ಮತ್ತು ಸಂಪನ್ಮೂಲಗಳನ್ನು ನೆರೆಹೊರೆಯ ದೇಶಗಳ ಮೇಲಿನ ದಾಳಿಗಳಿಗೆ ಹಾಗೂ ಪ್ರದೇಶದಲ್ಲಿ ಸಂಘರ್ಷವನ್ನು ಹೆಚ್ಚಿಸಲು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸೌದಿ ವಿಮರ್ಶಿಸಿದೆ.
ಇರಾಕ್ ಸರ್ಕಾರ ಮತ್ತು ಅಲ್ಲಿನ ಜನರೊಂದಿಗಿನ ಸ್ನೇಹಪರ ಬಾಂಧವ್ಯಕ್ಕೆ ಸೌದಿ ಅರೇಬಿಯಾ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಈ ಹಿನ್ನೆಲೆಯಲ್ಲಿಯೇ ಬೆದರಿಕೆಯೊಡ್ಡುವ ಭಯೋತ್ಪಾದಕ ಸಶಸ್ತ್ರ ಗುಂಪುಗಳ ಕೇಂದ್ರಗಳನ್ನು ಮಾತ್ರವೇ ನಿಖರವಾಗಿ ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಲಾಗಿದೆ. ಕೋಮುವಾದವನ್ನು ಹರಡುವ ಉದ್ದೇಶದಿಂದ ಇರಾಕ್ನ ಒಳಗಿನಿಂದ ಮತ್ತು ಹೊರಗಿನಿಂದ ಕೆಲವು ಕೇಂದ್ರಗಳು ನಡೆಸುತ್ತಿರುವ ಸುಳ್ಳು ಪ್ರಚಾರಗಳು ಇರಾಕ್ನ ವಿವೇಕಯುತ ಜನರ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಸೌದಿ ಮೂಲಗಳು ತಿಳಿಸಿವೆ. ಇರಾಕ್ನ ಭದ್ರತೆ ಮತ್ತು ಸ್ಥಿರತೆಯನ್ನು ಹೆಚ್ಚಿಸುವ ರೀತಿಯಲ್ಲಿ ಸ್ನೇಹಪರ ಬಾಂಧವ್ಯವನ್ನು ನಿರ್ಮಿಸುವುದನ್ನು ತಡೆಯಲು ಬಯಸುವ ವಿಭಾಗಗಳು ಇಂತಹ ಪ್ರಚಾರಗಳ ಹಿಂದೆ ಇವೆ.
ಸೌದಿಯ ಪೆಟ್ರೋಲಿಯಂ ಕೇಂದ್ರಗಳ ಮೇಲೆ ನಡೆದ ದಾಳಿಗಳಲ್ಲಿ ಪಾತ್ರವಿರುವ ಮತ್ತು ಇರಾಕ್ ಅನ್ನು ಕೇಂದ್ರವಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿರುವ ಸಶಸ್ತ್ರ ಗುಂಪುಗಳ ವಿರುದ್ಧ ನಿಖರವಾದ ಮಿಲಿಟರಿ ಮರುದಾಳಿ ನಡೆಸಲಾಗಿದೆಯೆಂದು ರಕ್ಷಣಾ ಸಚಿವಾಲಯ ಅಧಿಕೃತವಾಗಿ ದೃಢಪಡಿಸಿದೆ. ಯು.ಎಸ್. ಸೆಂಟ್ರಲ್ ಕಮಾಂಡ್ (US CENTCOM) ಜೊತೆಗಿನ ಸಮನ್ವಯದೊಂದಿಗೆ ಈ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಪ್ರದೇಶದಲ್ಲಿ ಸಂಘರ್ಷವನ್ನು ಉಲ್ಬಣಗೊಳಿಸಲು ಸೌದಿ ಅರೇಬಿಯಾ ಬಯಸುವುದಿಲ್ಲ, ಆದರೆ ದೇಶದ ಸಾರ್ವಭೌಮತ್ವದ ವಿರುದ್ಧ ನಡೆಯುವ ಯಾವುದೇ ಅತಿಕ್ರಮಣಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಾಲಿಕಿ ಸ್ಪಷ್ಟಪಡಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮರುಪರಿಶೀಲಿಸುವಂತೆ ಕೆಸಿಎಫ್ ಆಗ್ರಹ