ನಜಫ್: ಇರಾನ್ನ ಪರಮೋನ್ನತ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿಯವರ ಪಾರ್ಥಿವ ಶರೀರವನ್ನು ಹೊತ್ತ ಯಾತ್ರೆಯು ಇರಾಕ್ನ ಪವಿತ್ರ ನಗರವಾದ ನಜಫ್ನಲ್ಲಿ ಪ್ರಾರಂಭವಾಯಿತು. ಟೆಹ್ರಾನ್ ಮತ್ತು ಖುಮ್ನಲ್ಲಿ ನಡೆದ ವ್ಯಾಪಕ ಶ್ರದ್ಧಾಂಜಲಿ ಸಭೆಗಳ ನಂತರ, ಅಂತ್ಯಕ್ರಿಯೆಯ ವಿಧಿವಿಧಾನಗಳಿಗಾಗಿ ಖಮೇನಿಯವರ ಮೃತದೇಹವನ್ನು ಬುಧವಾರ ಇರಾಕ್ಗೆ ತರಲಾಯಿತು.
ಇರಾಕ್ನ ಪ್ರಮುಖ ಧಾರ್ಮಿಕ ಮತ್ತು ರಾಜಕೀಯ ನಾಯಕರ ವಿನಂತಿಯ ಮೇರೆಗೆ ನಜಫ್ನಲ್ಲಿ ಸ್ಥಳೀಯ ಮಟ್ಟದ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆಯುತ್ತಿವೆ. ನಗರದ ಬೀದಿಗಳು ಜನಸಾಗರವಾಗಿ ಮಾರ್ಪಟ್ಟಿವೆ ಎಂದು ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಖಾಮ್ನಈ ಮತ್ತು ಅವರ ಕುಟುಂಬಸ್ಥರ ಮೃತದೇಹವನ್ನು ಹೊತ್ತ ವಾಹನವು ಇಮಾಮ್ ಅಲಿಯವರ ದರ್ಗಾದತ್ತ (ಮಖ್ಬರಾ) ಸಾಗುತ್ತಿದ್ದಾಗ ಹತ್ತಾರು ಸಾವಿರ ಜನರು ಅದನ್ನು ಹಿಂಬಾಲಿಸಿದರು. ಇಲ್ಲಿ ನಡೆದ ಪ್ರಾರ್ಥನಾ ಸಭೆಯು ತೀವ್ರ ಭಾವುಕತೆಯಿಂದ ಕೂಡಿತ್ತು.
ಇದಕ್ಕೂ ಮೊದಲು ಟೆಹ್ರಾನ್ ಮತ್ತು ಖುಮ್ನಲ್ಲಿ ಸಾರ್ವಜನಿಕ ದರ್ಶನದ ನಂತರ ಪಾರ್ಥಿವ ಶರೀರವನ್ನು ಇರಾಕ್ಗೆ ತರಲಾಗಿತ್ತು. ಯುಎಸ್-ಇಸ್ರೇಲ್ ಸಂಘರ್ಷದ ನಡುವೆ ಫೆಬ್ರವರಿ 28 ರಂದು ನಡೆದ ದಾಳಿಯಲ್ಲಿ ಕೊಲ್ಲಲ್ಪಟ್ಟ ಖಮೇನಿಯವರ ಅಂತ್ಯಕ್ರಿಯೆಯನ್ನು ಯುದ್ಧದ ಪರಿಸ್ಥಿತಿ ಮತ್ತು ಭದ್ರತಾ ಭೀತಿಗಳನ್ನು ಪರಿಗಣಿಸಿ ಮುಂದೂಡಲಾಗಿತ್ತು. ಕಳೆದ ತಿಂಗಳು ನಡೆದ ತಾತ್ಕಾಲಿಕ ಕದನ ವಿರಾಮದ ನಂತರವೇ ಇದೀಗ ಕಾರ್ಯಕ್ರಮಗಳನ್ನು ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಕೆಲವು ದಿನಗಳ ಹಿಂದೆ ಟೆಹ್ರಾನ್ನ ಗ್ರ್ಯಾಂಡ್ ಮುಸಲ್ಲಾದಲ್ಲಿ ನಡೆದ ಪ್ರಾರ್ಥನಾ ಸಭೆಯು ಅತ್ಯಂತ ಭಾವುಕವಾಗಿತ್ತು. ಖಾಮ್ನಈ ಯವರ ಪಾರ್ಥಿವ ಶರೀರದ ಮುಂದೆ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಗ್ಚಿ ಮತ್ತು ಸಂಸತ್ ಸ್ಪೀಕರ್ ಮೊಹಮ್ಮದ್ ಬಾಗರ್ ಘಾಲಿಬಾಫ್ ಅವರು ನಿಯಂತ್ರಣ ಕಳೆದುಕೊಂಡು ಕಣ್ಣೀರಿಟ್ಟ ದೃಶ್ಯವು ಇಡೀ ವೇದಿಕೆಯನ್ನು ಶೋಕಸಾಗರದಲ್ಲಿ ಮುಳುಗಿಸಿತು. ಖಮೇನಿಯವರ ಪುತ್ರ ಮತ್ತು ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿರುವ ಮುಜ್ತಬಾ ಖಮೇನಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಭದ್ರತಾ ಕಾರಣಗಳಿಂದಾಗಿ ಅವರು ದೂರ ಉಳಿದಿದ್ದರು. ತಂದೆ ಕೊಲ್ಲಲ್ಪಟ್ಟ ದಾಳಿಯಲ್ಲಿ ಮುಜ್ತಬಾ ಅವರಿಗೂ ಗಾಯಗಳಾಗಿವೆ ಎಂದು ವರದಿಯಾಗಿದೆ. ದಾಳಿಯ ನಂತರ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.
ಟೆಹ್ರಾನ್ನಲ್ಲಿನ ಕಾರ್ಯಕ್ರಮಗಳ ನಂತರ ಮೃತದೇಹವನ್ನು ಖುಮ್ಗೆ ಕೊಂಡೊಯ್ಯಲಾಯಿತು. ತದನಂತರ ಇರಾಕ್ನ ನಜಫ್ ಮತ್ತು ಕರ್ಬಲಾದಂತಹ ಪವಿತ್ರ ನಗರಗಳ ಯಾತ್ರೆಯ ನಂತರ, ಜುಲೈ 9 ರಂದು ಇರಾನ್ನ ಮಶಾದ್ನಲ್ಲಿರುವ ಇಮಾಮ್ ರಿಜಾ ಮಸೀದಿಯ ಬಳಿ ಅಂತ್ಯಕ್ರಿಯೆ ನಡೆಯಲಿದೆ. ಫೆಬ್ರವರಿ 28 ರ ದಾಳಿಯಲ್ಲಿ ಖಮೇನಿ ಅವರೊಂದಿಗೆ ಅವರ ಪುತ್ರಿ, ಅಳಿಯ, ಚಿಕ್ಕ ಮೊಮ್ಮಗಳು ಮತ್ತು ಸೊಸೆ ಸೇರಿದಂತೆ ಕುಟುಂಬದ ಸದಸ್ಯರು ಸಹ ಕೊಲ್ಲಲ್ಪಟ್ಟಿದ್ದರು. ಇರಾನ್ ಕಳೆದ ಒಂದು ದಶಕದಲ್ಲೇ ಅತ್ಯಂತ ದೊಡ್ಡ ಅಧಿಕೃತ ಅಂತ್ಯಕ್ರಿಯೆಯ ವಿಧಿವಿಧಾನಗಳಿಗೆ ಸಾಕ್ಷಿಯಾಗುತ್ತಿದೆ.















ಇನ್ನಷ್ಟು ಸುದ್ದಿಗಳು
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಒಪ್ಪಂದವನ್ನು ಗಾಳಿಗೆ ತೂರಿ ಇರಾನ್ ಮೇಲೆ ಯುಎಸ್ ದಾಳಿ- ಗಲ್ಫ್ ವಲಯದಲ್ಲಿ ಮತ್ತೆ ಆತಂಕ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ: ನಾಳೆ (ಜುಲೈ 8) ಶಾಲಾ-ಕಾಲೇಜುಗಳಿಗೆ ರಜೆ
ಅಜ್ಜಿನಡ್ಕ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಹಾಸಭೆ : ನೂತನ ಪದಾಧಿಕಾರಿಗಳ ಆಯ್ಕೆ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮರುಪರಿಶೀಲಿಸುವಂತೆ ಕೆಸಿಎಫ್ ಆಗ್ರಹ