janadhvani

Kannada Online News Paper

ಮೇ.17,ಎಸ್.ವೈ.ಎಸ್ ದಕ ವೆಸ್ಟ್ ಜಿಲ್ಲಾ ವಾರ್ಷಿಕ ಕೌನ್ಸಿಲ್

ಕರ್ನಾಟಕ ರಾಜ್ಯ ಸುನ್ನೀ ಯುವ ಜನ ಸಂಘ ದ.ಕ ವೆಸ್ಟ್ ಜಿಲ್ಲಾ ವಾರ್ಷಿಕ ಕೌನ್ಸಿಲ್ ಜಿಲ್ಲಾಧ್ಯಕ್ಷರಾದ ಮಹ್ಬೂಬ್ ಸಖಾಫಿ ಕಿನ್ಯರವರ ಅಧ್ಯಕ್ಷತೆಯಲ್ಲಿ ಮೇ 17 ಆದಿತ್ಯವಾರ ಮಧ್ಯಾಹ್ನ 2:00 ಗಂಟೆಗೆ ಫರಂಗಿಪೇಟೆ ಸುಲ್ತಾನ್ ಆಡಿಟೋರಿಯಂನಲ್ಲಿ ನಡೆಯಲಿರುವುದು.

ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ರಾಜ್ಯಾಧ್ಯಕ್ಷ ಬಶೀರ್ ಸ ಅದಿ ಬೆಂಗಳೂರು ವೀಕ್ಷಕರಾಗಿ ಆಗಮಿಸಿ ತರಗತಿ ನಡೆಸಲಿದ್ದಾರೆ.ರಾಜ್ಯ ಕೋಶಾಧಿಕಾರಿ ಮನ್ಸೂರು ಕೋಟಗದ್ದೆ ಹಾಗೂ ಜಿಲ್ಲಾ ಉಸ್ತುವಾರಿ ಹಸೈನಾರ್ ಆನೆಮಹಲ್ ಉಪಸ್ಥಿತರಿರುವರು.ಜಿಲ್ಲಾ ವ್ಯಾಪ್ತಿಯ 8 ಝೋನ್ ಗಳಿಂದ ಸುಮಾರು 110 ಕೌನ್ಸಿಲರ್ಸ್ ಭಾಗವಹಿಸಲಿದ್ದಾರೆ ಎಂದು ಎಸ್.ವೈ.ಎಸ್ ದಕ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿರಿ...