ದುಬೈ: ಗಲ್ಫ್ ರಾಷ್ಟ್ರಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ವಿಮಾನ ಸೇವೆಗಳನ್ನು ಹಂತಹಂತವಾಗಿ ವಿಸ್ತರಿಸುತ್ತಿದೆ. ಇಂದಿನಿಂದ ಗಲ್ಫ್ ವಲಯಕ್ಕೆ ಪ್ರತಿದಿನ 40ಕ್ಕೂ ಹೆಚ್ಚು ವಿಮಾನಗಳು ಸಂಚರಿಸಲಿವೆ ಎಂದು ಸಂಸ್ಥೆಯು ಪ್ರಕಟಿಸಿದೆ.
ಮಂಗಳೂರು, ಬೆಂಗಳೂರು ಹಾಗೂ ಕೇರಳದ ನಾಲ್ಕು ಪ್ರಮುಖ ವಿಮಾನ ನಿಲ್ದಾಣಗಳು ಸೇರಿದಂತೆ ಭಾರತದ ವಿವಿಧ ನಗರಗಳಿಂದ ಕತಾರ್, ಬಹ್ರೇನ್, ಯುಎಇ, ಒಮಾನ್ ಮತ್ತು ಸೌದಿ ಅರೇಬಿಯಾಕ್ಕೆ ವಿಮಾನ ಸೇವೆಗಳನ್ನು ಪುನರಾರಂಭಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಉಂಟಾಗಿದ್ದ ವಿಮಾನ ರದ್ದತಿ ಮತ್ತು ವಿಳಂಬದಿಂದ ತೊಂದರೆಗೀಡಾಗಿದ್ದ ಸಾವಿರಾರು ಅನಿವಾಸಿ ಭಾರತೀಯರಿಗೆ ಈ ನಿರ್ಧಾರವು ದೊಡ್ಡ ಸಮಾಧಾನ ತಂದಿದೆ.
ವಿವಿಧ ನಗರಗಳ ನಡುವಿನ ಸಂಚಾರದ ವಿವರ:
- ದುಬೈ: ಕಣ್ಣೂರು, ತಿರುಚಿರಾಪಳ್ಳಿ, ಮಂಗಳೂರು ಮತ್ತು ಲಕ್ನೋ ನಗರಗಳಿಂದ ದುಬೈಗೆ ವಿಮಾನಗಳು ಸಂಚರಿಸಲಿವೆ.
- ಅಬುಧಾಬಿ: ಕೊಚ್ಚಿ, ಕೋಯಿಕ್ಕೋಡ್, ಮಂಗಳೂರು, ಮುಂಬೈ ಮತ್ತು ದೆಹಲಿಯಿಂದ ಅಬುಧಾಬಿ ಸೇವೆ ಲಭ್ಯವಿದೆ.
- ಶಾರ್ಜಾ: ಕಣ್ಣೂರು, ಕೋಯಿಕ್ಕೋಡ್, ಅಮೃತಸರ, ಜೈಪುರ ಮತ್ತು ವಾರಣಾಸಿಯಿಂದ ಶಾರ್ಜಾಕ್ಕೆ ವಿಮಾನಗಳು ಹಾರಲಿವೆ.
- ರಾಸ್ ಅಲ್ ಖೈಮಾ ಮತ್ತು ಅಲ್ ಐನ್: ರಾಸ್ ಅಲ್ ಖೈಮಾಕ್ಕೆ ಕೊಚ್ಚಿ ಮತ್ತು ಕೋಯಿಕ್ಕೋಡ್‌ನಿಂದ ಸೇವೆ ಇದ್ದರೆ, ಇಂದಿನಿಂದ ಕೋಯಿಕ್ಕೋಡ್‌ನಿಂದ ಅಲ್ ಐನ್‌ಗೆ ವಿಮಾನ ಸಂಚಾರ ಆರಂಭವಾಗಲಿದೆ.
- ಒಮಾನ್ (ಮಸ್ಕತ್): ಕಣ್ಣೂರು, ತಿರುವನಂತಪುರಂ, ಮುಂಬೈ ಮತ್ತು ದೆಹಲಿಯಿಂದ ಮಸ್ಕತ್‌ಗೆ ವಿಮಾನಗಳು ಲಭ್ಯವಿವೆ.
- ಸೌದಿ ಅರೇಬಿಯಾ, ಜಿದ್ದಾ: ಕೋಯಿಕ್ಕೋಡ್, ಮಂಗಳೂರು, ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಸೇವೆ ಪುನರಾರಂಭಗೊಂಡಿದೆ.
- ರಿಯಾದ್: ಕಣ್ಣೂರು ಮತ್ತು ಕೊಚ್ಚಿಯಿಂದ ರಿಯಾದ್‌ಗೆ ವಿಮಾನಗಳು ಸಂಚರಿಸಲಿವೆ.
- ದಮ್ಮಾಮ್: ಕೊಚ್ಚಿ, ಕೋಯಿಕ್ಕೋಡ್ ಮತ್ತು ಮಂಗಳೂರಿನಿಂದ ವಿಮಾನ ಸೇವೆ ಆರಂಭವಾಗಿದೆ.
- ಕತಾರ್ (ದೋಹಾ): ಕೊಚ್ಚಿ ಮತ್ತು ಕೋಯಿಕ್ಕೋಡ್‌ನಿಂದ ದೋಹಾಕ್ಕೆ ಇಂದಿನಿಂದಲೇ ವಿಮಾನ ಸಂಚಾರ ಪುನರಾರಂಭಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ.
















ಇನ್ನಷ್ಟು ಸುದ್ದಿಗಳು
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ
‘ಇಸ್ಲಾಂ ಸ್ವೀಕರಿಸಿದ್ದು ನನ್ನ ಸ್ವಂತ ಇಚ್ಛೆಯಿಂದ’ ; ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ ಆಯುಷ್ ಮಲಿಕ್ (ಮುಹಮ್ಮದ್ ಅಲಿ)