ಉಳ್ಳಾಲ: “ರೋಗ ಬಂದ ಮೇಲೆ ಚಿಕಿತ್ಸೆ ನೀಡುವುದಕ್ಕಿಂತ, ರೋಗವೇ ಬರದಂತೆ ಮುನ್ನೆಚ್ಚರಿಕೆ ವಹಿಸುವ ಜನಜಾಗೃತಿ ಕಾರ್ಯಕ್ರಮಗಳು ಸಮಾಜದಲ್ಲಿ ಹೆಚ್ಚು ನಡೆಯಬೇಕು,” ಎಂದು ವಿಧಾನಸಭಾ ಸಭಾಪತಿ ಯು.ಟಿ. ಖಾದರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಕಿನ್ಯದ ಗೋಲ್ಡನ್ ಹೆಲ್ತ್ ಫೌಂಡೇಶನ್ ಆರೋಗ್ಯ ಮತ್ತು ವೈದ್ಯಕೀಯ ಸೇವಾ ಸಂಸ್ಥೆಯ ವತಿಯಿಂದ ಕಿನ್ಯದಲ್ಲಿ ಆಯೋಜಿಸಲಾಗಿದ್ದ ಗ್ರಾಮೀಣ ದತ್ತಿ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.



ಸಂಸ್ಥೆಯ ಜವಾಬ್ದಾರಿ ಮತ್ತು ಸಹಕಾರ
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಣಚೂರು ಮೆಡಿಕಲ್ ಕಾಲೇಜಿನ ಚೇರ್ಮನ್ ಕಣಚೂರು ಮೋನು ಮಾತನಾಡಿ, “ಆರೋಗ್ಯ ಸಂಸ್ಥೆಯನ್ನು ಕಟ್ಟುವುದು ಸುಲಭ, ಆದರೆ ಅದನ್ನು ವ್ಯವಸ್ಥಿತವಾಗಿ ನಿರ್ವಹಿಸುವುದು ದೊಡ್ಡ ಜವಾಬ್ದಾರಿ. ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯರು, ಸುಸಜ್ಜಿತ ಬೆಡ್ಗಳು ಮತ್ತು ತಪಾಸಣಾ ವ್ಯವಸ್ಥೆ ಇರುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಕಿನ್ಯದ ಆರೋಗ್ಯ ಕೇಂದ್ರಕ್ಕೆ ಕಣಚೂರು ಸಂಸ್ಥೆಯು ಪೂರ್ಣ ಸಹಕಾರ ನೀಡಲಿದೆ,” ಎಂದು ಭರವಸೆ ನೀಡಿದರು.

ಸಯ್ಯಿದ್ ಅಮೀರ್ ತಂಙಳ್ ಅವರು ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು. ಕಿನ್ಯ ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಮುಸ್ತಫ ಅನ್ಸಾರಿ ಅವರು ದುಆ ನೆರವೇರಿಸಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಇಕ್ಬಾಲ್ ಕಿನ್ಯ ಮತ್ತು ಡಾ. ಅಫ್ರಾ ಇಸ್ಮಾಯೀಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಪ್ರಮುಖರಾದ ಅಶ್ರಫ್ ಕರ್ನಿರೆ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯ ಕೃಷ್ಣಪ್ಪ ಪೂಜಾರಿ ಮಾತನಾಡಿದರು. ಗೋಲ್ಡನ್ ಹೆಲ್ತ್ ಫೌಂಡೇಶನ್ ಅಧ್ಯಕ್ಷ ಹಾಜಿ ಮೂಸ ಅಬ್ಬಾಸ್ ಕುರಿಯಕಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಯ್ಯಿದ್ ಶಿಹಾಬ್ ತಂಙಳ್ ಅಲ್ ಬುಖಾರಿ, ಆಲಿಕುಞ್ಞಿ ಪಾರೆ, ಅಬ್ದುಲ್ ಹಮೀದ್ (ಎಚ್.ಎನ್. ಗ್ರೂಪ್), ಅಬ್ದುಲ್ ರಝಾಕ್ (ಯೆನೆಪೊಯ), ಯು.ಬಿ. ಮುಹಮ್ಮದ್ ಉಳ್ಳಾಲ, ಹಾಜಿ ಕೆ.ಸಿ. ಇಸ್ಮಾಯೀಲ್ ಕಿನ್ಯ, ಎನ್.ಎಸ್. ಕರೀಂ, ಸಿರಾಜ್ ಕಿನ್ಯ, ರವಿ ಪೂಜಾರಿ, ಝಾಹಿದ್ ಮಲಾರ್, ಜಯಂತ್ ಪೂಜಾರಿ ಸೇರಿದಂತೆ ಹಲವು ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

ಅಬ್ದುಲ್ ಸಮದ್ (ಕಾರ್ಯದರ್ಶಿ, ಗೋಲ್ಡನ್ ಹೆಲ್ತ್ ಫೌಂಡೇಶನ್)ಸ್ವಾಗತಿಸಿದರು. ಹಮೀದ್ ಕಿನ್ಯ (ಸಂಚಾಲಕರು) ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಅಬ್ದುಲ್ ಖಾದರ್ (ಜೊತೆ ಕಾರ್ಯದರ್ಶಿ) ಕೃತಜ್ಞತೆ ಸಲ್ಲಿಸಿದರು.
ಹಿನ್ನೆಲೆ ಮತ್ತು ಉದ್ದೇಶ:
ಗೋಲ್ಡನ್ ಹೆಲ್ತ್ ಫೌಂಡೇಶನ್ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಜನಸಾಮಾನ್ಯರಿಗೆ ವೈದ್ಯಕೀಯ ನೆರವು ನೀಡುತ್ತಾ ಬಂದಿದೆ. ಸ್ಥಳೀಯ ಜನರಿಗೆ ಆರೋಗ್ಯ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗುವಂತೆ ಮಾಡುವ ದೃಷ್ಟಿಯಿಂದ ಈ ನೂತನ ಕಟ್ಟಡ ನಿರ್ಮಾಣ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
















ಇನ್ನಷ್ಟು ಸುದ್ದಿಗಳು
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವೈದ್ಯಕೀಯ ಕ್ಷೇತ್ರಕ್ಕೆ ಗಂಭೀರ ಸವಾಲು : ಎಸ್ಸೆಸ್ಸೆಫ್ ಬೆಂಗಳೂರು
ಕಾನೂನುಬದ್ಧ ಬಲಿದಾನಕ್ಕೆ ಪೊಲೀಸ್ ಸಂರಕ್ಷಣೆ ನೀಡಿ- ಗೃಹ ಸಚಿವರಿಗೆ ಮೌಲಾನಾ ಶಾಫಿ ಸಅದಿ ಮನವಿ
‘ನನ್ನನ್ನು ತಿಹಾರ್ ಜೈಲಿಗೆ ಹಾಕಬಹುದು’; ಆತಂಕ ಹಂಚಿಕೊಂಡ ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ
ವೈದ್ಯರ ನಿರ್ಲಕ್ಷ್ಯದಿಂದ ಯುವಕ ಮೃತ್ಯು: ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಶಾಫಿ ಸಅದಿ ಅವರಿಂದ ಸಚಿವರಿಗೆ ಮನವಿ
ಉಪ್ಪಿನಂಗಡಿ: ಕಂಪ್ಯೂಟರ್ ಕ್ಲಾಸ್ಗೆ ತೆರಳಿದ್ದ 13 ವರ್ಷದ ಬಾಲಕ ನಾಪತ್ತೆ
ಗಲ್ಫ್ ನಾಯಕರ ವಿನಂತಿಗೆ ಮನ್ನಣೆ ; ಇರಾನ್ ಮೇಲಿನ ದಾಳಿ ತಾತ್ಕಾಲಿಕ ರದ್ದು- ಟ್ರಂಪ್
ಮುಂದಿನ 6 ತಿಂಗಳುಗಳು ಅತ್ಯಂತ ಕಠಿಣ, ಹಲವರಿಗೆ ಉದ್ಯೋಗ ನಷ್ಟ- ಟೆಕ್ಸ್ಟೈಲ್ ಸಂಸ್ಥಾಪಕನ ‘ಎಕ್ಸ್’ ಪೋಸ್ಟ್ ವೈರಲ್
ದುಲ್ ಹಜ್ಜ್ ಚಂದ್ರ ದರ್ಶನ : ಗಲ್ಫ್ ರಾಷ್ಟ್ರಗಳಲ್ಲಿ ಮೇ.27 ರಂದು ಈದುಲ್ ಅದ್’ಹಾ
ದುಲ್ ಹಿಜ್ಜಾ ಚಂದ್ರದರ್ಶನವಾಗಿಲ್ಲ: ಮೇ 28 ರಂದು ಬಕ್ರೀದ್- ಖಾಝಿಗಳಿಂದ ಘೋಷಣೆ
ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಭೀಕರ ಅಗ್ನಿ ಅವಘಡ- ಅದೃಷ್ಟವಶಾತ್ ಪ್ರಯಾಣಿಕರು ಪಾರು..!