ರಿಯಾದ್: ಕಾನೂನು ಉಲ್ಲಂಘಕರಾದ ವಿದೇಶೀಯರಿಗೆ ಕೆಲಸ ನೀಡುವ ಉದ್ಯೋಗದಾತರಿಗೆ 1 ಲಕ್ಷ ರಿಯಾಲ್ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆ ನೀಡಲಾಗುವುದು ಎಂದು ಪಾಸ್ಪೋರ್ಟ್ ವಿಭಾಗ ಎಚ್ಚರಿಕೆ ನೀಡಿದೆ.
ಕಾನೂನು ಉಲ್ಲಂಘಕರಿಗೆ ಸಹಾಯ ಮಾಡುವ ವಿದೇಶಿಯರನ್ನು ಗಡೀಪಾರು ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೌದಿ ಪಾಸ್ಪೋರ್ಟ್ ಇಲಾಖೆಯು, ಇಖಾಮಾ ಇಲ್ಲದವರು ಮತ್ತು ಕಾರ್ಮಿಕ ಕಾನೂನು ಉಲ್ಲಂಘಿಸಿದವರಿಗೆ ಕೆಲಸ, ಆಶ್ರಯ ನೀಡದಂತೆ ತಿಳಿಸಿದೆ. ನುಸುಳುಕೋರರು, ಉದ್ಯೋಗದಾತರಿಂದ ತಪ್ಪಿಸಿ ಕೆಲಸ ಮಾಡುವವರಿಗೆ, ಪ್ರಯಾಣ, ಕೆಲಸ, ವಾಸದ ಸೌಕರ್ಯಗಳನ್ನು ನೀಡಿ ಸಹಾಯ ಮಾಡುವುದು ಅಪರಾಧ ಎಂದು ಪಾಸ್ಪೋರ್ಟ್ ಡೈರೆಕ್ಟರೇಟ್ ಹೇಳಿದೆ.ಅಂತವರಿಗೆ ಒಂದು ಲಕ್ಷ ರಿಯಾಲ್ ದಂಡ ಮತ್ತು ಆರು ತಿಂಗಳ ಸೆರೆವಾಸ ದೊರೆಯಲಿದೆ.
ಕಾನೂನನ್ನು ಉಲ್ಲಂಘಿಸುವವರಿಗೆ ಸಹಾಯ ನೀಡುವ ವಿದೇಶಿಯರನ್ನು ಶಿಕ್ಷೆಗೆ ಗುರಿಪಡಿಸಿದ ನಂತರ ಗಡಿಪಾರು ಮಾಡಲಾಗುವುದು. ಪ್ರತೀ ಸಂಸ್ಥೆಯಲ್ಲಿ ಕೆಲಸ ಮಾಡುವ ಅಕ್ರಮ ಅಪರಾಧಿಗಳ ಸಂಖ್ಯೆಯ ಅನುಸಾರ ದಂಡದ ಮೊತ್ತ ದ್ವಿಗುಣಗೊಳ್ಳುತ್ತದೆ. ಅಂತಹ ಸಂಸ್ಥೆಗಳ ವ್ಯವಸ್ಥಾಪಕರಿಗೂ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಕಾನೂನು ಉಲ್ಲಂಘಿಸುವವರನ್ನು ನೇಮಕ ಮಾಡುವ ಸಂಸ್ಥೆಗಳಿಗೆ ಐದು ವರ್ಷ ವಿದೇಶೀ ನೌಕರರನ್ನು ನೇಮಕ ಮಾಡಲು ಅನುಮತಿ ನಿಷೇಧಿಸಲಾಗುವುದು. ಉಲ್ಲಂಘಕರ ಬಗ್ಗೆ ವಿದೇಶಿಯರು ಮತ್ತು ದೇಶೀಯರು ತಿಳಿಸುವಂತೆ ಪಾಸ್ಪೋರ್ಟ್ ನಿರ್ದೇಶನಾಲಯವು ಕರೆ ನೀಡಿದೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ನಕಲಿ ದಾಖಲೆ ದೃಢೀಕರಣ ಜಾಲ: ಭಾರತೀಯ ರಾಯಭಾರ ಕಚೇರಿಯಿಂದ ಎಚ್ಚರಿಕೆ
ವಿಮಾನಯಾನ ರದ್ದತಿಯಿಂದ ಅತಂತ್ರರಾದ ಉಮ್ರಾ ಯಾತ್ರಾರ್ಥಿಗಳು- DKSCಯಿಂದ ಮಾನವೀಯ ನೆರವು
ವಲಸಿಗರಿಗೆ ಶುಭ ಸುದ್ದಿ: ಜಿದ್ದಾ–ಕೋಝಿಕ್ಕೋಡ್ ನಡುವೆ ಫ್ಲೈನಾಸ್ ನೇರ ವಿಮಾನ ಸೇವೆ ಆರಂಭ
ರಿಯಾದ್ ವಿಮಾನ ನಿಲ್ದಾಣ ಬಂದ್: ಪರ್ಯಾಯ ಪ್ರಯಾಣ ಮಾರ್ಗದಲ್ಲೂ ಟಿಕೆಟ್ ದರ ಏರಿಕೆ
ಸೌದಿ: ಸಿಲುಕಿರುವ ಯಾತ್ರಿಕರ ವಾಪಸಾತಿಗೆ ರಾಯಭಾರ ಕಚೇರಿ ತೀವ್ರ ಕಾರ್ಯಾಚರಣೆ
ಯುಎಇ : ನಾಲ್ಕು ಪಾಸ್ಪೋರ್ಟ್ ಸೇವಾ ಕೇಂದ್ರಗಳು ಇಂದಿನಿಂದ ಸ್ಥಗಿತ- ರಾಯಭಾರ ಕಚೇರಿ
ಉಮ್ರಾ ಯಾತ್ರಿಕರ ವಾಪಸಾತಿಗೆ ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಬೇಕು- ರಾಯಭಾರ ಕಚೇರಿ
ರಿಯಾದ್, ಜಿದ್ದಾ ವಿಮಾನ ಸೇವೆಗಳು ಅಕ್ಟೋಬರ್ 27ರವರೆಗೆ ಸ್ಥಗಿತ
ಧರ್ಮ ನಿಂದನೆ ದೂರು: ಯುವಕನ ಮರಣದಂಡನೆಯನ್ನು ರದ್ದುಗೊಳಿಸಿದ ಸೌದಿ ಸುಪ್ರೀಂ ಕೋರ್ಟ್
ಸೌದಿ ವಿಮಾನ ಸೇವೆ ಸ್ಥಗಿತ: ವೀಸಾ ಅವಧಿ ಮೀರಿದವರಿಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ- ಭಾರತೀಯ ರಾಯಭಾರ ಕಚೇರಿ