janadhvani

Kannada Online News Paper

ದುಬೈ: ‘ಡು’ ವಾಯ್ಸ್ ಓವರ್ ಎಲ್‌ಟಿಇ ಸೇವೆ ಆರಂಭಿಸುತ್ತಿದೆ

ದುಬೈ: ದುಬೈ ಮೂಲದ ಟೆಲಿಕಾಂ ಸೇವೆ ಒದಗಿಸುವ ಡು ವಾಯ್ಸ್ ಓವರ್ ಎಲ್‌ಟಿಇ ಸೇವೆ (ವೋಲ್ಟಿ) ಸೇವೆಯನ್ನು ಪ್ರಾರಂಭಿಸುತ್ತಿದೆ.
ಈ ವರ್ಷದ ಕೊನೆಯ ಅರ್ಧದಲ್ಲಿ ಸೇವೆಗಳನ್ನು ಪ್ರಾರಂಭಿಸಲಾಗುವುದು. ಈ ಸೌಲಭ್ಯವು ನಾಲ್ಕನೇ ತಲೆಮಾರಿನ (4 ಜಿ) ಫೋನ್ ಗಳಲ್ಲಿ ಲಭ್ಯವಿರುತ್ತವೆ.
ಪ್ರಸ್ತುತ, 4G ಡೇಟಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದರೂ, ಧ್ವನಿ ಕರೆಗಳನ್ನು 2G ಮತ್ತು 3G ವ್ಯವಸ್ಥೆಗಳ ಮೂಲಕ ವರ್ಗಾಯಿಸಲಾಗುತ್ತದೆ.

ಹೊಸ ಸಿಸ್ಟಮ್‌ನ ಮೂಲಕ ಉತ್ತಮ ಗುಣಮಟ್ಟದ ಶ್ರೇಷ್ಟ ಶಬ್ದ , ಸ್ಪಷ್ಟತೆ ಮತ್ತು ವೇಗವಾಗಿ ಕರೆಗಳನ್ನು ರವಾನಿಸುವ ಸಾಮರ್ಥ್ಯ ದೊರಕಲಿದೆ. ಸೇವೆಯ ಅಂತಿಮ ಹಂತವು ಪೂರ್ಣಗೊಂಡಿದೆ. ಸೇವೆಗಳ ನೆಟ್ವರ್ಕ್ ಅರ್ಹತೆಗಳನ್ನು ಪರಿಶೀಲಿಸುವುದು ಕೊನೆಯ ಹಂತವಾಗಿದೆ.

ಡು ಟೆಲ್ಕೊ ಇನ್ ಫ್ರಾಸ್ಟ್ರಕ್ಚರ್ ಯೋಜನಾ ಉಪಾಧ್ಯಕ್ಷ ಮರ್ವಾನ್ ಬಿನ್ ಶಕರ್ ಅವರು ಮಾತನಾಡಿ, “ಕೆಲಸದ ಪೂರ್ಣಗೊಳಿಸುವಿಕೆಯು ಟ್ರಾದಿಂದ ಕೊನೆಯ ಅನುಮತಿಯನ್ನು ಪಡೆಯಲು ಮುಂದುವರಿದ ಕ್ರಮಗಳು ಈಗ ನಡೆಯುತ್ತಿದೆ. ವೈಶಿಷ್ಟ್ಯವೆಂದರೆ ಸೆಕೆಂಡುಗಳ ಒಳಗೆ ಫೋನ್ ಕರೆಗಳನ್ನು ಈ ಮೂಲಕ ಮಾಡಬಹುದು. ಸಾಮಾನ್ಯ ಫೋನ್ ನೆಟ್ವರ್ಕ್ ಗೆ ಕರೆಗಳು ಬಂದಾಗ ಇಂಟರ್ನೆಟ್ ಬಳಕೆ ಅಸಾಧ್ಯವಾಗಿದೆ.

ಆದೇ ವೇಳೆ, ವೋಲ್ಟಿ ಮೂಲಕ ಧ್ವನಿ ಕರೆಗಳ ಬಳಕೆಯೊಂದಿಗೆ, ಇಂಟರ್ನೆಟ್ ಬಳಕೆ ಕೂಡ ಸಾಧ್ಯವಿದೆ ಎಂದು ಅವರು ಹೇಳಿದರು. ಅಸ್ತಿತ್ವದಲ್ಲಿರುವ ನೆಟ್ವರ್ಕಿಂಗ್ ವ್ಯವಸ್ಥೆಗಳನ್ನು ನವೀಕರಿಸಿ ವಾಯ್ಸ್ ಓವರ್ ಸೇವೆ ಅಳವಡಿಸುವ ಕ್ರಮಗಳು ಪೂರ್ಣಗೊಳಿಸಲು ತಿಂಗಳುಗಳು ಇನ್ನೂ ಬೇಕಾಗಿವೆ. ಈ ವರ್ಷಾಂತ್ಯದಲ್ಲಿ ಹೊಸ ಸೇವೆಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

error: Content is protected !! Not allowed copy content from janadhvani.com