janadhvani

Kannada Online News Paper

SSF ತುಂಬೆ ಶಾಖೆ: ಮಾಸಿಕ ಮಹ್’ಳರತುಲ್ ಬದ್ರಿಯಾ ಮಜ್ಲಿಸ್

ತುಂಬೆ: ವಿಶ್ವ ಪ್ರಸಿದ್ಧ ಸುನ್ನೀ ನೇತಾರ ಸುಲ್ತಾನುಲ್ ಉಲಮಾ ಶೈಖುನಾ ಕಾಂತಪುರಂ ಎ.ಪಿ ಉಸ್ತಾದರ ಇಜಾಝತ್ ಪ್ರಕಾರ ದೇಶದಾದ್ಯಂತ ನಡೆಯುತ್ತಿರುವ ಮಹ್’ಳರತುಲ್ ಬದ್ರಿಯಾ ಮಜ್ಲಿಸ್ SSF ತುಂಬೆ ಶಾಖೆ ವತಿಯಿಂದ ಮಾಸಿಕ ಮಹ್’ಳರತುಲ್ ಬದ್ರಿಯಾ ಮಜ್ಲಿಸ್ 1-7-18 ಆದಿತ್ಯವಾರ ಇಶಾ ನಮಾಝಿನ ಬಳಿಕ ತುಂಬೆ ತಾಜುಲ್ ಉಲಮಾ ಮೆಮೋರಿಯಲ್ ಸುನ್ನೀ ಕಲ್ಚರಲ್ ಸೆಂಟರಿನಲ್ಲಿ ನಡೆಯಿತು.

SSF ಕರ್ನಾಟಕ ರಾಜ್ಯ ಸಮಿತಿಯ ಸದಸ್ಯರಾದ ಬಹು!ಹಾಫೀಲ್ ಯಾಕೂಬ್ ಸಹದಿ ಅಲ್-ಅಪ್ಲಲಿ ನಾವೂರ್ ಉಸ್ತಾದರ ನೇತೃತ್ವದಲ್ಲಿ ನಡೆದ ಸ್ವಲಾತ್ ಮಜ್ಲಿಸಿನಲ್ಲಿ ಉಸ್ತಾದರು ನೇರದ ಸಭೆಗೆ ಕಿರು ಉಪದೇಶವನ್ನು ನೀಡಿದರು.ಈ ಸಂದರ್ಭದಲ್ಲಿ ತಾಜುಲ್ ಉಲಮಾ ಮೆಮೋರಿಯಲ್ ಸುನ್ನೀ ಕಲ್ಚರಲ್ ಸೆಂಟರ್ ಇದರ ಗೌರವಾಧ್ಯಕ್ಷರಾದ ಜನಾಬ್|ಅಬ್ದುಲ್ ಹಮೀದ್ ಎಸ್.ಬಿ,SSF ತುಂಬೆ ಶಾಖಾ ಉಪಾಧ್ಯಕ್ಷರಾದ ಹಾಜಿ|ಅಬ್ದುಲ್ ಲತೀಫ್ ಹಿಮಮಿ,ಜನಾಬ್|ಅಬ್ದುಲ್ ಹನೀಫ್ ಎಂ.ಎ,ಸಂಘಟನಾ ಕಾರ್ಯದರ್ಶಿ ಜನಾಬ್|ಆದಂ ಟಿ.ಎ ಹಾಗು ಹಲಾವಾರು ಸಂಘಟನಾ ಕಾರ್ಯಕರ್ತರು,ಊರ ನಾಗರಿಕರು ಉಪಸ್ಥಿತರಿದ್ದರು.ಶಾಖಾ ಪ್ರ.ಕಾರ್ಯದರ್ಶಿ ನೌಶಾದ್ ತುಂಬೆ ವಂದಿಸಿದರು.

error: Content is protected !! Not allowed copy content from janadhvani.com