ಅಬುಧಾಬಿ: ಸೌದಿ ಮಿತ್ರ ರಾಷ್ಟ್ರಗಳು ಮತ್ತು ಖತರ್ ನಡುವೆ ನೆಲೆನಿಂತಿರುವ ಕಾರ್ಯತಂತ್ರ ತರ್ಕವು ತಾರಕಕ್ಕೇರುತ್ತಿವೆ.
ಸೌದಿ ಅರೇಬಿಯಾ ಮತ್ತು ಯುಎಇಯು, ಖತರ್ ವಾಯುಯಾನ ಗಡಿ ಉಲ್ಲಂಘಿಸಿದೆ ಎಂದು ಆರೋಪಿಸಿ ಇಂಟರ್ ನ್ಯಾಷನಲ್ ಟ್ರಿಬ್ಯೂನಲ್ (ಐಸಿಜೆ) ಸಮೀಪಿಸಲು ತಯಾರಿ ನಡೆಸುತ್ತಿದೆ. ಇದರ ಜೊತೆಗೆ, ಬಹ್ರೈನ್ ಮತ್ತು ಈಜಿಪ್ಟ್ ಕೂಡ ನ್ಯಾಯಾಲಯವನ್ನು ಸಮೀಪಿಸಲು ನಿರ್ಧರಿಸಿದೆ.
ಅಂತರಾಷ್ಟ್ರೀಯ ವಾಯುಯಾನ ಸಂಸ್ಥೆಯಿಂದ (ಐಸಿಎಒ) ವಿವಾದವನ್ನು ಬಗೆಹರಿಸಲಾಗಲಿಲ್ಲ ಆ ಕಾರಣಕ್ಕಾಗಿ ಈ ನಡೆ ಎಂದು ಸೌದಿ ಮತ್ತು ಯುಎಇಯ ಅಧಿಕೃತ ಮಾಧ್ಯಮಗಳು ವರದಿ ಮಾಡಿದೆ.
ಖತರ್ ನ ವಾಯುಯಾನ ಗಡಿ ಉಲ್ಲಂಘನೆಯು ವಿಮಾನಯಾನ ವಲಯಕ್ಕೆ ಬೆದರಿಕೆಯಾಗಿದೆ ಎಂದು ICAOಗೆ ಈಗಾಗಲೇ ಯುಎಇ ಎರಡು ದೂರುಗಳನ್ನು ನೀಡಿದ್ದವು. ಖತರ್ ಯುದ್ದ ವಿಮಾನಗಳನ್ನು ಉಪಯೋಗಿಸಿ ನಾಗರೀಕ ವಿಮಾನಗಳನ್ನು ಮತ್ತು ಹೆಲಿಕಾಪ್ಟರ್‌ನ್ನು ತಡೆದಿದೆ ಎಂದು ಯುಎಇ ಆರೋಪಿದ್ದು, ಇದನ್ನು ಈಗಾಗಲೇ ಕತರ್ ನಿರಾಕರಿಸಿದೆ.
ಈ ಮಧ್ಯೆ, ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿ, ಯುಎಇ ವಿರುದ್ಧ ಐಎಜೆಗೆ ಕತರ್ ಅಪರಾಧ ಪ್ರಕರಣ ದಾಖಲಿಸಿದ್ದು,ಇದರನ್ವಯ ಮೂರು ದಿನಗಳ ಚರ್ಚೆ ಆರಂಭಗೊಂಡಿದೆ. ತ್ವರಿತವಾಗಿ ವಾದವನ್ನು ಆಲಿಸಬೇಕೆಂಬ ಖತರ್‌ನ ಕೋರಿಕೆಯಂತೆ ಈ ನಡೆ ಎನ್ನಲಾಗಿದೆ.
ಕಳೆದ ವರ್ಷ ಜೂನ್ 5 ರಂದು, ಸೌದಿ ಮಿತ್ರರಾಷ್ಟ್ರಗಳು ಕತರ್ ವಿರುದ್ದ ಅದು ಇರಾನ್ ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂಬ ನೆಪವೊಡ್ಡಿ ಸಂಬಂಧವನ್ನು ಕಡಿದು ಕೊಂಡಿತ್ತು. ಆದರೆ, ಆ ಆರೋಪವನ್ನು ಕತರ್ ಅಂದು ನಿರಾಕರಿಸಿತ್ತು.















ಇನ್ನಷ್ಟು ಸುದ್ದಿಗಳು
ಪಶ್ಚಿಮ ಏಷ್ಯಾ ಶಾಂತಿ ಮಾತುಕತೆ: ಇರಾನ್ ತಲುಪಿದ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್
ಅಮೆರಿಕ-ಇರಾನ್ ಸಂಘರ್ಷ: ಕರಗಿದ ಯುದ್ಧದ ಕಾರ್ಮೋಡ – ಪಾಕಿಸ್ತಾನದಲ್ಲಿ ಮತ್ತೆ ಶಾಂತಿ ಮಾತುಕತೆ?
ಹಾರ್ಮುಜ್ ಸಂರಕ್ಷಣೆ: ಅಮೆರಿಕವನ್ನು ಹೊರಗಿಟ್ಟು ಹೊಸ ಮೈತ್ರಿಕೂಟ ರಚಿಸಲು ಯುರೋಪ್ ಸಜ್ಜು
ಅಮೆರಿಕಾ-ಇರಾನ್ ಉದ್ವಿಗ್ನತೆ: ಸಂಘರ್ಷದ ನಡುವೆಯೂ ಮುಂದುವರಿದ ಸಂಧಾನ ಮಾತುಕತೆ
ಮೂರು ಪ್ರಮುಖ ವಿಷಯಗಳಲ್ಲಿ ತೀವ್ರ ಭಿನ್ನಾಭಿಪ್ರಾಯ- ಶಾಂತಿ ಮಾತುಕತೆ ವಿಫಲ
“ಚೆಂಡು ಈಗ ಅಮೆರಿಕದ ಅಂಗಳದಲ್ಲಿದೆ” ಮಾತುಕತೆ ಮುಂದುವರಿಸಲು ಯಾವುದೇ ಆತುರವಿಲ್ಲ- ಇರಾನ್
ಇರಾನ್-ಅಮೆರಿಕ ಮಾತುಕತೆ ವಿಫಲ: ಇಸ್ಲಾಮಾಬಾದ್ನಿಂದ ನಿರ್ಗಮಿಸಿದ ಜೆ.ಡಿ. ವ್ಯಾನ್ಸ್
ಲೆಬನಾನ್ ಮೇಲಿನ ಆಕ್ರಮಣ ನಿಲ್ಲಿಸಿ, ಇಲ್ಲದಿದ್ದರೆ ಕದನ ವಿರಾಮವಿಲ್ಲ: ಇರಾನ್ ಖಡಕ್ ಎಚ್ಚರಿಕೆ
ಲೆಬನಾನ್ ಮೇಲೆ ಇಸ್ರೇಲ್ನ ವಿನಾಶಕಾರಿ ದಾಳಿ: 10 ನಿಮಿಷಗಳಲ್ಲಿ 100 ಕೇಂದ್ರಗಳ ಮೇಲೆ ಬಾಂಬ್ ವರ್ಷ
ಇರಾನ್ ವಿನಾಶವೆಂದ ಟ್ರಂಪ್: ಭಾರತೀಯ ಮಾಧ್ಯಮಗಳಿಂದ ‘ಕೌಂಟ್ಡೌನ್’ ಸಂಭ್ರಮ- ಸಾರ್ವಜನಿಕ ಆಕ್ರೋಶ