ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಸಮಿತಿಯ ಸಾಮಾಜಿಕ ಕಾರ್ಯಗಳಲ್ಲೊಂದಾದ ಆರ್ಥಿಕತೆಯಲ್ಲಿ ಹಿಂದಿರುವವರಿಗೆ ಗೃಹ ನಿರ್ಮಾಣ ವ್ಯವಸ್ಥೆಯ ಭಾಗವಾಗಿ ದುಬೈ ನಾರ್ತ್ ಝೋನ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಒಂದರಲ್ಲಿ ನಿರ್ಮಿಸಲಾದ ‘ದಾರುಲ್ ಅಮಾನ್’ ಮನೆಯ ಉದ್ಘಾಟನಾ ಸಮಾರಂಭದ ನಿರ್ವಹಣಾ ಸಮಿತಿಯನ್ನು ಪನೀರ್ ಹುಸೈನ್ ಹಾಜಿ ನಿವಾಸದಲ್ಲಿ ಇತ್ತೀಚೆಗೆ ಸೇರಿದ ಸಭೆಯಲ್ಲಿ ಅಸ್ತಿತ್ವಕ್ಕೆ ತರಲಾಯಿತು.
ಕೆಸಿಎಫ್ ದುಬೈ ನಾರ್ತ್ ಝೋನ್ ಅಧ್ಯಕ್ಷ ಇಸ್ಮಾಈಲ್ ಮದನಿನಗರ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕುಡ್ತಮುಗರು ಅಬ್ದುಲ್ಲಾ ಮುಸ್ಲಿಯಾರ್ ಉದ್ಘಾಟಿಸಿದರು. SჄS ದ.ಕ ವೆಸ್ಟ್ ಜಿಲ್ಲಾ ಅಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ಕೆಸಿಎಫ್ ನ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದರು.
ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಅಧ್ಯಕ್ಷ ಮೂಸ ಹಾಜಿ ಬಸರ, ಅಬ್ದುಸ್ಸತ್ತಾರ್ ಸಖಾಫಿ ಅಡ್ಯಾರ್, ಅಬ್ದುಲ್ ಮಜೀದ್ ಹಾಜಿ ಮಂಜನಾಡಿ, ಇ ಕೆ ಇಬ್ರಾಹೀಂ ಕಿನ್ಯ, ಯಾಕೂಬ್ ಅಮಾನಿ ಮೋಂತಿಮಾರ್, ಅಶ್ರಫ್ ಮದನಿನಗರ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ಹುಸೈನ್ ಹಾಜಿ ಪನೀರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಸ್ಸತ್ತಾರ್ ಸಖಾಫಿ ಅಡ್ಯಾರ್, ಕೋಶಾಧಿಕಾರಿಯಾಗಿ ಕೊಳ್ನಾಡ್ ಇಬ್ರಾಹೀಂ ಹಾಜಿ ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಅಬ್ದುಲ್ಲಾ ಮುಸ್ಲಿಯಾರ್ ಕುಡ್ತಮುಗರು, ಮಜೀದ್ ಹಾಜಿ ಮಂಜನಾಡಿ, ಜೊತೆ ಕಾರ್ಯದರ್ಶಿಯಾಗಿ ಇ ಕೆ ಇಬ್ರಾಹೀಂ ಕಿನ್ಯ, ಯಾಕೂಬ್ ಅಮಾನಿ ಮೋಂತಿಮಾರ್, ಸಂಚಾಲಕರಾಗಿ ಮಹ್ಬೂಬ್ ಸಖಾಫಿ ಕಿನ್ಯ, ಕಾಸಿಂ ಮದನಿ ತೆಕ್ಕಾರ್ ಅವರನ್ನು ಆರಿಸಲಾಯಿತು.
ಅಕ್ಬರ್ ಅಲಿ, ಸಿರಾಜ್ ಪೂಂಜಾಲ್ಕಟ್ಟೆ, ಶಮೀರ್ ಫರಂಗಿಪೇಟೆ, ಇಬ್ರಾಹೀಂ ಸಖಾಫಿ ಮಠ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಾಸಿಂ ಮದನಿ ಪ್ರಾರಂಭದಲ್ಲಿ ಸ್ವಾಗತಿಸಿ, ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ