ಕೋಝಿಕ್ಕೋಡ್ | ಯೆಮನ್ನಲ್ಲಿ ಮರಣದಂಡನೆ ಶಿಕ್ಷೆ ಅನುಭವಿಸುತ್ತಿರುವ ನಿಮಿಷಪ್ರಿಯಾ ಬಿಡುಗಡೆಗೆ ಸಂಬಂಧಿಸಿದಂತೆ ಅನಗತ್ಯ ಚರ್ಚೆಗಳಿಗೆ ತಾನು ಸಿದ್ಧನಿಲ್ಲ ಎಂದು ಶಾಸಕ ಚಾಂಡಿ ಉಮ್ಮನ್ ಹೇಳಿದ್ದಾರೆ. ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವುದಾಗಿ ಹೇಳಿಕೊಳ್ಳುವ ಕೆಎ ಪಾಲ್ ಯಾರೆಂದು ತನಗೆ ತಿಳಿದಿಲ್ಲ ಮತ್ತು ಇನ್ನೂ ಅವರನ್ನು ಭೇಟಿ ಮಾಡಿಲ್ಲ, ಮತ್ತು ಪಾಲ್ ಹಾಗೆ ಮಾಡುವುದನ್ನು ನೋಡಿ ಆಘಾತವಾಯಿತು ಎಂದು ಚಾಂಡಿ ಉಮ್ಮನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಿಮಿಷಪ್ರಿಯಾ ಹೆಸರಿನಲ್ಲಿ ನಕಲಿ ಹಣ ಸಂಗ್ರಹದ ಬಗ್ಗೆ ಸೇವ್ ನಿಮಿಷಪ್ರಿಯಾ ಆಕ್ಷನ್ ಕೌನ್ಸಿಲ್ ಮುಖ್ಯಮಂತ್ರಿಗೆ ದೂರು ನೀಡಿತ್ತು. ನಿಮಿಷಪ್ರಿಯಾ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದ ಕೆ.ಎ. ಪಾಲ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕೋರಿ, ಆಕ್ಷನ್ ಕೌನ್ಸಿಲ್ ಸದಸ್ಯ ಮತ್ತು ಸುಪ್ರೀಂ ಕೋರ್ಟ್ ವಕೀಲರಾದ ಅಡ್ವ. ಸುಭಾಷ್ ಚಂದ್ರನ್ ಅವರು ದೂರು ಸಲ್ಲಿಸಿದ್ದಾರೆ. ವಿದೇಶಾಂಗ ಸಚಿವಾಲಯದ ಖಾತೆಗೆ ಹಣ ನೀಡುವಂತೆ ಕೆ.ಎ. ಪಾಲ್ ಅವರು ಬೇಡಿಕೆ ಮುಂದಿಟ್ಟಿದ್ದರು. ವಿದೇಶಾಂಗ ಸಚಿವಾಲಯವು ಫ್ಯಾಕ್ಟ್ ಚೆಕ್ ಮೂಲಕ ಹಣ ಸಂಗ್ರಹ ನಕಲಿ ಎಂದು ಸ್ಪಷ್ಟಪಡಿಸಿತ್ತು.
ನಿಮಿಷಪ್ರಿಯ ಅವರನ್ನು ಉಳಿಸಲು ಭಾರತ ಸರ್ಕಾರದ ಖಾತೆಗೆ ನೇರ ದೇಣಿಗೆ ನೀಡುವಂತೆ ಡಾ. ಕೆ. ಎ. ಪಾಲ್ ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿಪೋಸ್ಟ್ ಮಾಡಲಾಗಿತ್ತು. ಪೋಸ್ಟ್ನಲ್ಲಿ 8.3 ಕೋಟಿ ರೂ. ಅಗತ್ಯವಿದೆ ಎಂದು ಹೇಳಲಾಗಿತ್ತು. ನಂತರ ವಿದೇಶಾಂಗ ಸಚಿವಾಲಯವು ಇದು ನಕಲಿ ಪೋಸ್ಟ್ ಮತ್ತು ಹಣ ಸಂಗ್ರಹಿಸುವ ಹಗರಣ ಎಂದು ಸ್ಪಷ್ಟಪಡಿಸಿತು.
ಇಂಡಿಯನ್ ಗ್ರ್ಯಾಂಡ್ ಮುಫ್ತಿ ಮಧ್ಯಸ್ಥಿಕೆ
ಕಳೆದ ಜುಲೈ 16 ರಂದು ನಿಗದಿಯಾಗಿದ್ದ ಮರಣದಂಡನೆಯನ್ನು ಕಾಂತಪುರಂ ಉಸ್ತಾದರ ಮಧ್ಯಪ್ರವೇಶ ನಂತರ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.
ನಂತರ ನಡೆದ ಬೆಳವಣಿಗೆಗಳ ಆಧಾರದಲ್ಲಿ, ನಿಮಿಷಪ್ರಿಯ ಅವರ ಮರಣದಂಡನೆಯನ್ನು ರದ್ದುಗೊಳಿಸಲು ಒಪ್ಪಿಗೆ ಲಭಿಸಿರುವುದಾಗಿ ಭಾರತೀಯ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರ ಕಚೇರಿ ಪ್ರಕಟಿಸಿತ್ತು. ಪ್ರಕರಣದಲ್ಲಿ ಕೆಲವು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕಾಂತಪುರಂ ಉಸ್ತಾದ್ ಸ್ಪಷ್ಟಪಡಿಸಿದ್ದರು.
ಮುಂದಿನ ಚರ್ಚೆಗಳ ಆಧಾರದ ಮೇಲೆ ಮರಣದಂಡನೆಯನ್ನು ರದ್ದುಗೊಳಿಸಲು ಮತ್ತು ಇತರ ವಿಷಯಗಳ ಬಗ್ಗೆ ನಿರ್ಧರಿಸಲು ಒಪ್ಪಿಗೆ ನೀಡಲಾಗಿದೆ. ಭಾರತೀಯ ಗ್ರಾಂಡ್ ಮುಫ್ತಿಯ ಕೋರಿಕೆಯ ಮೇರೆಗೆ ಶೈಖ್ ಉಮರ್ ಬಿನ್ ಹಫೀಝ್ ತಂಙಳ್ ನೇಮಿಸಿದ ಯೆಮೆನ್ ವಿದ್ವಾಂಸರ ನಿಯೋಗದ ಜೊತೆಗೆ, ಉತ್ತರ ಯೆಮೆನ್ ಆಡಳಿತಗಾರರು ಮತ್ತು ಅಂತರರಾಷ್ಟ್ರೀಯ ರಾಜತಾಂತ್ರಿಕರು ಭಾಗವಹಿಸಿದ್ದ ಮಧ್ಯಸ್ಥಿಕೆ ಮಾತುಕತೆಯ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಚೇರಿ ತಿಳಿಸಿತ್ತು.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ