janadhvani

Kannada Online News Paper

ಕೂಡಾರ ತಾಜುಲ್ ಫುಖಹಾಅ್ ಮದ್ರಸ: ಮೀಲಾದ್ ಸಮಾವೇಶ- ಸ್ವಾಗತ ಸಮಿತಿ ಅಸ್ತಿತ್ವಕ್ಕೆ

ಎಲಿಮಲೆ ಅಬ್ಬಾಸ್ ಹಾಜಿ, ಕೂಡಾರ ಅಬ್ದುಲ್ ಖಾದರ್, ಮುಹಮ್ಮದ್ ಹನೀಫ್ ಸಾರಥ್ಯ

ಪುಣ್ಯ ಪ್ರವಾದಿ (ﷺِ) ರ 1500 ನೇ ಅನುಗ್ರಹೀತ ಪವಿತ್ರ ಜನ್ಮ ತಿಂಗಳ ಪ್ರಯುಕ್ತ ಕೂಡಾರ ತಾಜುಲ್ ಫುಖಹಾಅ್ ಮದ್ರಸ ವಿದ್ಯಾರ್ಥಿ(ನಿ)ಗಳ ಮೀಲಾದ್ ಸಾಂಸ್ಕೃತಿಕ ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿಗೆ ರೂಪು ಕೊಡಲಾಯಿತು.
ಎಲಿಮಲೆ ಅಬ್ಬಾಸ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸ್ಥಳೀಯ ಮಸ್ಜಿದ್ ಇಮಾಂ ಅಬೂಬಕರ್ ಸಖಾಫಿ ಉದ್ಘಾಟಿಸಿದರು.
ವಿ.ಎ ಮುಹಮ್ಮದ್ ಅಲ್ ಹಮದಾನಿ ಸ್ವಾಗತಿಸಿ ಮಹ್ಬೂಬ್ ಸಖಾಫಿ ಕಿನ್ಯ ವಿಷಯ ಮಂಡಿಸಿ ಮಾತನಾಡಿದರು.

ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಎಲಿಮಲೆ ಅಬ್ಬಾಸ್ ಹಾಜಿ, ಪ್ರಧಾನ ಕಾರ್ಯದರ್ಶಿಯಾಗಿ ಮಂಜನಾಡಿ ಪಂಚಾಯತ್ ಸದಸ್ಯ ಅಬ್ದುಲ್ ಖಾದರ್, ಕೋಶಾಧಿಕಾರಿಯಾಗಿ ಮುಹಮ್ಮದ್ ಹನೀಫ್ ಅವರನ್ನು ಆಯ್ಕೆ ಮಾಡಲಾಯಿತು.
ಸಲಹಾ ಸಮಿತಿಗೆ ವಿ.ಎ ಮುಹಮ್ಮದ್ ಅಲ್ ಹಮದಾನಿ,ಮುಹಮ್ಮದ್ ರಝ್ವಿ ಉಕ್ಕುಡ, ಅಶ್ರಫ್ ಸಖಾಫಿ, ಮಹ್ಬೂಬ್ ಸಖಾಫಿ ಕಿನ್ಯ ರವರನ್ನು ಆರಿಸಲಾಯಿತು.

ಉಪಾಧ್ಯಕ್ಷರಾಗಿ ಅಬ್ದುಲ್ಲಾ, ಜೊತೆ ಕಾರ್ಯದರ್ಶಿಯಾಗಿ ಶಮೀರ್ ಹಾಜಿ, ಸಂಚಾಲಕರಾಗಿ ಅಶ್ರಫ್ MMP,ಅಬೂಬಕರ್ ಟಿಂಬರ್,ಕಡಲ್ಪು ಅಬೂಬಕರ್,ಅಬ್ದುಲ್ ಕರೀಂ,ಅಶ್ರಫ್ ಎಸ್ ರವರನ್ನು ನೇಮಕ ಮಾಡಲಾಗಿದೆ.
ಕಾರ್ಯಕಾರಿಣಿ ಸದಸ್ಯರಾಗಿ ಎಸ್.ಎ ಮುಹಮ್ಮದ್, ಇಬ್ರಾಹೀಂ ಬೀಡಿ, ಇಸ್ಮಾಈಲ್, ಅಬ್ಬಾಸ್ ಒ.ಪಿ, ಇಬ್ರಾಹೀಂ JCB, ಅಬ್ದುಲ್ ಹಮೀದ್, ಇಕ್ಬಾಲ್, ಸಾಮಣಿಗೆ ಅಬ್ದುಲ್ ಮಜೀದ್, ಸನಾವುಲ್ಲಾಹ್, ಉಮರ್,ಅಬ್ದುಲ್ ರಝಾಕ್ (ಅಬ್ಬುಚ್ಚ), ಅಬೂಸ್ವಾಲಿಹ್ ರಝ್ವಿ, ರಫೀಖ್ ರಿಕ್ಷಾ, ಅಬ್ದುಲ್ ಅಝೀಝ್ ಕೂಡಾರ, ಅಶ್ರಫ್ ರವರನ್ನು ಆಯ್ಕೆ ಮಾಡಲಾಯಿತು.