“ಮುತ್ತು ರಸೂಲುಲ್ಲಾಹ್ (ﷺِ) ರವರ ಚರ್ಯೆಯನ್ನು ಜೀವಂತಗೊಳಿಸಿರಿ” ಎಂಬ ಘೋಷವಾಕ್ಯದೊಂದಿಗೆ ಹಬೀಬ್ (ﷺِ) ರವರ 1500 ನೇ ಜನ್ಮ ದಿನದ ಪ್ರಯುಕ್ತ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಕೆಸಿಎಫ್ ಬಹರೈನ್ ಹಮ್ಮಿಕೊಂಡಿದೆ.
ಇದರ ಭಾಗವಾಗಿ ಮಹಬ್ಬ – 2025 ಗ್ರಾಂಡ್ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮವು ದಿನಾಂಕ 29-08-2025 ರಂದು ರಾತ್ರಿ 7-30 ಕ್ಕೆ ಕನ್ನಡ ಭವನದಲ್ಲಿ ನಡೆಯಲಿರುವುದು. ಪ್ರಸ್ತುತ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗಾರರಾಗಿ ಬಹರೈನಿಗೆ ಪ್ರಥಮ ಬಾರಿ ಆಗಮಿಸಲಿರುವ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ಗುರುವಾಯನಕೆರೆ ಅವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಯಶಸ್ವಿಗಾಗಿ ಮೀಲಾದ್ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಚೇರ್ಮಾನ್:
ಅಬ್ದುಲ್ ಮಜೀದ್
ಝುಹುರಿ ಸುಳ್ಯ
ಕನ್ವೀನರ್: ಇಕ್ಬಾಲ್ ಮಂಜನಾಡಿ
ವೈಸ್ ಚೇರ್ಮಾನ್:
ಸಮದ್ ಉಜಿರೆಬೆಟ್ಟು
ಫೈನಾನ್ಸ್ ಕಂಟ್ರೋಲರ್:
ಲತೀಫ್ ಪೆರೋಲಿ
ಹಾಗೂ 33 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಕ ಮಾಡಲಾಯಿತು.
ಸಭೆಯಲ್ಲಿ ಕೆಸಿಎಫ್ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುಆಝ್ ಉಜಿರೆ, ಸಂಘಟನಾ ಅಧ್ಯಕ್ಷ ಮನ್ಸೂರ್ ಬೆಳ್ಮ, ಕಾರ್ಯದರ್ಶಿ ಸೂಫಿ ಪೈಂಬಚಾಲ್, ಶಿಕ್ಷಣ ಇಲಾಖೆ ಅಧ್ಯಕ್ಷ ಸುಹೈಲ್ ಬಿಸಿ ರೋಡ್ ಕಾರ್ಯದರ್ಶಿ ಅಶ್ರಫ್ ರೆಂಜಾಡಿ, ಸಾಂತ್ವನ ಕಾರ್ಯದರ್ಶಿ ಅಶ್ರಫ್ ಕಿನ್ಯ, ಕಾರ್ಯದರ್ಶಿ ರಝಾಕ್ ಆನೆಕಲ್ಲು, ಪ್ರಕಾಶನ ಇಲಾಖೆ ಅಧ್ಯಕ್ಷ ಫಝಲ್ ಸುರತ್ಕಲ್, ಪಬ್ಲಿಕೇಶನ್ ವಿಂಗ್ ಕಾರ್ಯದರ್ಶಿ ಸಿದ್ದೀಖ್ ಎಣ್ಮೂರು, ಝೋನಲ್ ಹಾಗೂ ಸೆಕ್ಟರ್ ಪ್ರತಿನಿಧಿಗಳು ಭಾಗವಹಿಸಿದ್ದರು. ಸ್ವಾಗತ ಸಮಿತಿ ಚೇರ್ಮಾನ್ ಮಜೀದ್ ಝುಹ್ರಿ ಉಸ್ತಾದರು ದುಆ ಗೈದರು. ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ಸ್ವಾಗತಿಸಿದರು. ಸ್ವಾಗತ ಸಮಿತಿ ವೈಸ್ ಚೇರ್ಮಾನ್ ಸಮದ್ ಉಜಿರೆಬೆಟ್ಟು ಧನ್ಯವಾದ ಸಮರ್ಪಿಸಿದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ