ಕೆಸಿಎಫ್ ಬಹರೈನ್ ಮುಹರ್ರಕ್ ಸೆಕ್ಟರ್ ಅಧೀನದಲ್ಲಿ ಹಿದ್ದ್, ಗಲಾಲಿ ಹಾಗೂ ಕಸೀನಾ ಯುನಿಟ್’ಗಳ ರೂಪೀಕರಣ ಸಭೆಯು ಮುಹರ್ರಕ್ ಸೆಕ್ಟರ್ ಅಧ್ಯಕ್ಷರಾದ ಹಾರಿಸ್ ಒಕ್ಕೆತ್ತೂರು ಅವರ ಅಧ್ಯಕ್ಷತೆಯಲ್ಲಿ ಜಾಮಿಯಾ ಮಸೀದಿ ಅರಾದಿನಲ್ಲಿ ನಡೆಯಿತು.
ಸೌತ್ ಝೋನ್ ಕಾರ್ಯದರ್ಶಿ ಔಫ್ ಸಅದಿ ಉಸ್ತಾದರು ದುಆ ಗೈದರು. ನೋರ್ತ್ ಝೋನ್ ಅಧ್ಯಕ್ಷರಾದ ಅಹ್ಮದ್ ಉಸ್ತಾದರು ಯುನಿಟ್’ಗಳ ರೂಪೀಕರಣಕ್ಕೆ ಚಾಲನೆ ನೀಡಿದರು. ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ರವರು ಸಂಘಟನಾ ತರಬೇತಿಯನ್ನು ನೀಡಿ, ಕೆಸಿಎಫ್ ಮುಹರ್ರಕ್ ಸೆಕ್ಟರ್ ಮಾದರೀ ಯೋಗ್ಯವಾದ ಕಾರ್ಯಾಚರಣೆಯನ್ನು ನಡೆಸುತ್ತಿರುವುದು ಶ್ಲಾಘನೀಯ.ಇದೀಗ ಯುನಿಟ್ ಗಳನ್ನು ರಚನೆ ಮಾಡುವುದರ ಮೂಲಕ ಸೆಕ್ಟರ್ ಇನ್ನಷ್ಟು ಬಲಿಷ್ಠಗೊಳ್ಳಲಿದೆ ಎಂದರು.
ಅಲ್ಲಾಹು ನಮಗೆ ನೀಡಿದ ಬಿಡುವಿನ ಸಮಯಗಳನ್ನು ವ್ಯರ್ಥ ಮಾಡದೆ ನಮ್ಮ ಜೀವನವನ್ನು ಪಾವನಗೊಳಿಸಲು ಕೆ.ಸಿ.ಎಫ್ ನಮಗೆ ವರದಾನವಾಗಿದೆ ಎಂದರು.

ನೂತನ ಯುನಿಟ್ ಗಳು ಮತ್ತು ಸಾರಥಿಗಳು
ಹಿದ್ದ್ ಯುನಿಟ್
ಅಧ್ಯಕ್ಷರು:
ಇಬ್ರಾಹೀಂ ಬೆಳ್ಮ
ಪ್ರಧಾನ ಕಾರ್ಯದರ್ಶಿ: ಹಾರಿಸ್ ಪೈಂಬಚ್ಚಾಲ್
ಕೋಶಾಧಿಕಾರಿ:
ಯೂನುಸ್ ಕುಂಬ್ಳೆ
ಉಪಾಧ್ಯಕ್ಷರು:
ಹನೀಫ್ ಕಾಟಿಪಳ್ಳ
ಕಸೀನಾ ಯುನಿಟ್
ಅಧ್ಯಕ್ಷರು: ಅಶ್ರಫ್ ಈಶ್ವರ ಮಂಗಿಲ
ಪ್ರಧಾನ ಕಾರ್ಯದರ್ಶಿ:
ಸಾಜಿದ್ ಮಂಜನಾಡಿ
ಕೋಶಾಧಿಕಾರಿ:
ಹಬೀಬ್ ದೇರಳಕಟ್ಟೆ
ಉಪಾಧ್ಯಕ್ಷರು:
ಹಾರಿಸ್ ಅಡ್ಯಾರ್
ಗಲಾಲಿ ಯುನಿಟ್
ಅಧ್ಯಕ್ಷರು:
ಖಲೀಲ್ ತಲಪಾಡಿ
ಪ್ರಧಾನ ಕಾರ್ಯದರ್ಶಿ:
ಶಕೀಲ್ ಬೆಳ್ಳಾರೆ
ಕೋಶಾಧಿಕಾರಿ:
ಅಝೀಝ್ ಸುಳ್ಯ
ಉಪಾಧ್ಯಕ್ಷರು:
ಶಾಕಿರ್ ಬಜ್ಪೆ
ಸಿದ್ದೀಖ್ ಉಸ್ತಾದ್ ಮಂಜನಾಡಿ ಹಾಗೂ ಅಬೂಬಕರ್ ಮದನಿ ಮಂಚಿ ಉಸ್ತಾದರ ನೇತೃತ್ವದಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ನಡೆಯಿತು. ಸಭೆಯಲ್ಲಿ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುಹಾಝ್ ಉಜಿರೆ, ಸಾಂತ್ವನ ಇಲಾಖೆ ಕಾರ್ಯದರ್ಶಿ ರಝಾಕ್ ಆನೆಕಲ್ಲು, ಶಿಕ್ಷಣ ಇಲಾಖೆ ಕಾರ್ಯದರ್ಶಿ ಅಶ್ರಫ್ ತರೆಂಜಾಡಿ, ನೋರ್ತ್ ಝೋನ್ ಸಂಘಟನಾ ಕಾರ್ಯದರ್ಶಿ ರಶೀದ್ ಈಶ್ವರಮಂಗಲ, ಮುಹರ್ರಕ್ ಸೆಕ್ಟರ್ ಕೋಶಾಧಿಕಾರಿ ಜವಾದ್ ಉಳ್ಳಾಲ ಮುಂತಾದವರು ಉಪಸ್ಥಿತರಿದ್ದರು.
ನೋರ್ತ್ ಝೋನ್ ಕಾರ್ಯದರ್ಶಿ ಮುಹಮ್ಮದ್ ಅಲಿ ವೇಣೂರು ಸ್ವಾಗತಿಸಿದರು. ಸಂಘಟನಾ ಇಲಾಖೆ ಅಧ್ಯಕ್ಷರಾದ ಮನ್ಸೂರ್ ಬೆಳ್ಮ ಕಾರ್ಯಕ್ರಮ ನಿರೂಪಿಸಿದರು. ಮುಹರ್ರಕ್ ಸೆಕ್ಟರ್ ಕಾರ್ಯದರ್ಶಿ ಸಿದ್ದೀಖ್ ಉಳ್ಳಾಲ ಧನ್ಯವಾದ ಸಮರ್ಪಿಸಿದರು.
✍️M.A. Venoor
KCF Bahrain







