janadhvani

Kannada Online News Paper

ದಾರುಲ್ ಹಿಕ್ಮ ಎಜುಕೇಶನ್ ಸೆಂಟರ್ ಬೆಳ್ಳಾರೆ 2025/26 ಸಾಲಿನ ಹಿಫ್ಲುಲ್ ಖುರ್ಆನ್ ದರ್ಸ್ ಉದ್ಘಾಟನೆ

ಸುಳ್ಯ ತಾಲೂಕಿನ ಬೆಳ್ಳಾರೆ ಯಲ್ಲಿ ಸಯ್ಯದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು ರವರ ಅಧ್ಯಕ್ಷತೆಯಲ್ಲಿ ಕಾರ್ಯಾಚಾರಿಸುತ್ತಿರುವ ಹೆಸರಾಂತ ವಿದ್ಯಾಸಂಸ್ಥೆ ದಾರುಲ್ ಹಿಕ್ಮ ಎಜುಕೇಶನ್ ಸೆಂಟರ್ ಇದರ 2025/26 ಸಾಲಿನ ಹಿಫ್ಲುಲ್ ಖುರ್ಆನ್ ದರ್ಸ್ 29/04/2025 ಮಂಗಳವಾರ ರಾತ್ರಿ 7.30 ಕ್ಕೆ ಹಿಕ್ಮ ಸ್ಥಾಪನೆಯಲ್ಲಿ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಮಹಮೂದ್ ಹಾಜಿ ಬಿ.ಎ ರವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಯಿತು

ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಹಸನ್ ಸಖಾಫಿ ಬೆಳ್ಳಾರೆ ದುವಾ ನೆರವೇರಿಸಿದರು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ದಾವೂದ್ ಸ ಅದಿ ಬೆಳ್ಳಾರೆ ಕಾರ್ಯಕ್ರಮಕ್ಕೆ ಬಂದ ಎಲ್ಲಾ ಅತಿಥಿಗಳಿನ್ನು ಸ್ವಾಗತಿಸಿ ಸಂಸ್ಥೆಯು ನಡೆದು ಬಂದ ಹಾದಿಯನ್ನು ಇದಕ್ಕಾಗಿ ಸಹಕರಿಸುವ ಕಷ್ಟಪಡುವ ಸಂಸ್ಥೆ ಇಲ್ಲಿಯವರೆಗೆ ಬಂದು ತಲುಪಲು ಕಾರಣವಾದ ಎಲ್ಲರನ್ನೂ ಸ್ಮರಿಸಿ ಬಹಳ ಸವಿಸ್ತಾರವಾಗಿ ಸಂಸ್ಥೆಯ ಬಗ್ಗೆ ಪರಿಚಯಿಸಿದರು

ಹಿಫ್ಲುಲ್ ಖುರ್ಆನ್ ದರ್ಸ್ ಇದರ ಉಸ್ತಾದ್ ಹಾಫಿಲ್ ಅಬ್ದುರ್ರಝ್ಝಾಕ್ ಝುಹ್ರಿ ಬಹಳ ಸುಂದರವಾಗಿ ಖಿರಾಅತ್ ಪಠಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು

ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಮ್ಮಿಂದ ಅಗಲಿದ ಮಾಮು ಹಾಜಿ,ಫಯಾಝ್ ಹಾಜಿ,ಅಬ್ದುಲ್ ಕರೀಂ ಹಾಜಿ,ಸಾರಮ್ಮ (ಇಕ್ಬಾಲ್ ಮದನಿ ಅವರ ತಾಯಿ) ಚೆನ್ನಾರ್ ಹಾಗೂ ಈ ಸಂಸ್ಥೆಗೆ ಸಹಕರಿಸಿದ ಕುಟುಂಬ ಹಾಗೂ ಅವರ ಕುಟುಂಬದಿಂದ ಮರಣಹೊಂದಿದ ಎಲ್ಲರಿಗೂ ತಹ್ಲೀಲ್ ಸಮರ್ಪಣೆ ನಡೆಸಿ ದುವಾ ಮಾಡಲಾಯಿತು

ಈ ಕಾರ್ಯಕ್ರಮಕ್ಕೆ ಆಗಮಿಸಿದ ಸಂಸ್ಥೆಯ ಪ್ರವಾಸಿ ಸಹಕಾರಿಗಳಾದ ಅಜ್ಮಾನ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಕೀಂ ಕುಂಜಾಡಿ,ಕಲಾಂ ಝುಹ್ರಿ ಬೆಳ್ಳಾರೆ, ಹನೀಫ್ ಮುಸ್ಲಿಯಾರ್ ಪೆರುವಾಜೆ,ಝಕರಿಯಾ ಗೋವ ರವರಿಗೆ ಸಂಸ್ಥೆಯ ವತಿಯಿಂದ ಕಿರು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು

ಕಾರ್ಯಕ್ರಮದಲ್ಲಿ ಸಂಸ್ಥೆಯ ಸೌದಿ ನ್ಯಾಷನಲ್ ಅಧ್ಯಕ್ಷ ರಶೀದ್ ಹಾಜಿ ಬೆಳ್ಳಾರೆ, ಸಂಸ್ಥೆಯ ಸಹಕಾರಿ K.M ರಶೀದ್ ಹಾಜಿ,ಹಿಕ್ಮ ಮದರಸ ಸದರ್ ಉಸ್ತಾದ್, ಮುಹಲ್ಲಿಂ ಉಸ್ತಾದ್, ಉಮ್ಮರ್ ಮಿಸ್ಬಾಹಿ,ಖಾಲಿದ್ ಸ ಅದಿ,ಇಬ್ರಾಹಿಂ ಉಸ್ತಾದ್, SჄS ಈಸ್ಟ್ ಜಿಲ್ಲಾ ಇಸಾಬ ಕಾರ್ಯದರ್ಶಿ ಉಸ್ಮಾನ್ ಸೋಕಿಲ,ಹಮೀದ್ ಅಲ್ಫ,ಮುಸ್ತಫ ಮಾಸ್ತಿಕಟ್ಟೆ,ಸುಲೈಮಾನ್ ಹಾಜಿ ಇಂದ್ರಾಜೆ, ಮಹಮ್ಮದ್ ಹಾಜಿ ಕರಾವಳಿ,ಜಮಾಲುದ್ದೀನ್ ಮಾಸ್ತಿಕಟ್ಟೆ, ಝುಬೈರ್ ಕರಾವಳಿ, ಶಾಕಿರ್,ಅಝೀಝ್ ಮುಸ್ಲಿಯಾರ್,ಪುತ್ತುಚ್ಚ ಸಹಿತ ಕೇಂದ್ರ ಸಮಿತಿ ಸದಸ್ಯರು,KMJ,SჄS,SSF ಸದಸ್ಯರು ಹಾಗೂ ಹಿಕ್ಮ ಹಿತೈಷಿಗಳು ಮತ್ತು ಪೋಷಕರು ಆಗಮಿಸಿದ್ದರು

ಕಾರ್ಯಕ್ರಮದಲ್ಲಿ ಬದರ್ ಮೌಲೂದು ಪಾರಾಯಣ ಮಾಡಿ ಸಂಸ್ಥೆಯ ಎಲ್ಲಾ ಸಹಾಯಿಗಳಿಗೂ ದುವಾ ಮಾಡಲಾಯಿತು

ಕಾರ್ಯಕ್ರಮಕ್ಕೆ ಬಂದ ಎಲ್ಲರಿಗೂ ಮರ್ಹೂಂ K.M ಮಾಮು ಹಾಜಿ ಬೆಳ್ಳಾರೆ ಅವರ ಹೆಸರಲ್ಲಿ ಊಟದ ವ್ಯವಸ್ಥೆ ಮಾಡಲಾಯಿತು