ಬದ್ರಿಯಾ ಜಮಾಅತ್ ಕಮಿಟಿ ಎಲಿಮಲೆ ಸುಳ್ಯ ತಾಲೂಕು ಇದರ ವತಿಯಿಂದ ಆಧ್ಯಾತ್ಮಿಕ ನೇತಾರ ಸೈಯಿದ್ ಕುಂಜಿಲಂ ತಂಙಳ್ ಇವರ ನೇತೃತ್ವದಲ್ಲಿ ನಡೆಸಿಕೊಂಡು ಬರುತ್ತಿರುವ ಮಾಸಿಕ ಸ್ವಲಾತ್ ಇದರ ವಾರ್ಷಿಕೋತ್ಸವ , ಹಿಫ್ಲುಲ್ ಕುರ್ಆನ್ ಉದ್ಘಾಟನೆ ಹಾಗೂ ಇಕ್ರಾಮುಸ್ಸುನ್ನ ದರ್ಸ್ ಇದರ ಶೈಕ್ಷಣಿಕ ವರ್ಷದ ಉದ್ಘಾಟನೆಯು ಇಂದು ದಿನಾಂಕ ಮೇ 2 ರಂದು ಮಗ್ರಿಬ್ ನಮಾಝಿನ ಬಳಿಕ ಎಲಿಮಲೆ ಮಸೀದಿ ವಠಾರದಲ್ಲಿ ನಡೆಯಲಿದೆ.
ಜಮಾಅತ್ ಕಮಿಟಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಪಾಣಾಜೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಅಪ್ರತಿಮ ಪಂಡಿತರೂ ಧಾರ್ಮಿಕ ನೇತಾರರೂ ಆಗಿರುವ ಸೈಯಿದ್ ಝೈನುಲ್ ಆಬಿದೀನ್ ತಂಗಳ್ ದುಗಲಡ್ಕ ಇವರುಗಳು ಉದ್ಘಾಟನೆ ಮಾಡಲಿದ್ದಾರೆ.
ಹಿಫ್ಳುಲ್ ಕುರ್ಆನ್ ಉಧ್ಘಾನೆಯನ್ನು ಸೈಯಿದ್ ಕುಂಜಿಲಂ ತಂಙಳ್ ರವರು ನೆರವೇರಿಸಲಿದ್ದಾರೆ.
ಸ್ವಲಾತ್ ಮಜ್ಲಿಸ್ ಹಾಗೂ ಪ್ರಾರ್ಥನಾ ಕೂಟದ ನೇತೃತ್ವವನ್ನು ಅಪ್ರತಿಮ ವಿಧ್ವಾಂಸರೂ ಆಧ್ಯಾತ್ಮಿಕ ಮುಸ್ಲಿಂ ನಾಯಕರೂ ಆದ ಬಾಯಾರ್ ತಂಙಳ್ ರವರು ವಹಿಸಲಿದ್ದಾರೆ.
ಸುಪ್ರಸಿದ್ಧ ವಾಗ್ಮಿ ಸಮದ್ ಸಖಾಫಿ ಮಾಯನಾಡು ಧಾರ್ಮಿಕ ಉಪನ್ಯಾಸ ನೀಡುವ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಮತಪಂಡಿತರೂ ಸಾಮಾಜಿಕ -ಧಾರ್ಮಿಕ ನೇತಾರರೂ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿರುತ್ತಾರೆ