ಕನ್ನಡದ ನೆಲದಲ್ಲಿ ಧಾರ್ಮಿಕ ಸೇವಾ ರಂಗದಲ್ಲಿ
ಅತ್ಯಪೂರ್ವ ಸಾಧನೆಗೈದವರಿಗಾಗಿ ಮೈಮನ್ ಅಕಾಡೆಮಿ ಹಾಗೂ ವಿಸ್ಡಮ್ ವರ್ಲ್ಡ್ ಪ್ರೀ ಸ್ಕೂಲ್ ನೆಟ್ವರ್ಕ್ ಕರ್ನಾಟಕ ನೀಡುತ್ತಿರುವ ಹೋಲಿ ಖುರ್ಆನ್ ಪುರಸ್ಕಾರಕ್ಕೆ ತೋಕೆ ಸಖಾಫಿ ಉಸ್ತಾದ್ ಆಯ್ಕೆಯಾಗಿದ್ದಾರೆ.
ಖುರ್ಆನ್ನ ಮೊದಲ ಕಾಂಡದ ವ್ಯಾಖ್ಯಾನ ಸಹಿತ ಸುನ್ನೀ ಕರ್ನಾಟಕಕ್ಕೆ ಇವರು ನೀಡಿದ ಅನನ್ಯ ಸಾಹಿತ್ಯ ಸೇವೆ ಹಾಗೂ ಇಸ್ಲಾಮೀ ಜ್ಞಾನ ದೀವಿಗೆಯ ವಿವಿಧ ಮಜಲುಗಳಲ್ಲಿ ಆಳ ಅಧ್ಯಯನ, ವಿಶೇಷವಾಗಿ ಇಸ್ಲಾಮಿಕ್ ತತ್ವ ಮತ್ತು ಕರ್ಮ ಶಾಸ್ತ್ರದಲ್ಲಿ ವಿಶಿಷ್ಟ ಸಾಧನೆಯನ್ನು
ಪರಿಗಣಿಸಿ ಈ ಆಯ್ಕೆ ನಡೆದಿದೆ.
ಎಪ್ರಿಲ್ 8 ರಂದು ಮಂಗಳೂರು ‘ಟೌನ್ ಹಾಲ್’ ನಲ್ಲಿ ನಡೆಯುವ ಮೈಮನ್ ಅಕಾಡೆಮಿ ಹಾಗೂ ವಿಸ್ಡಮ್ ವರ್ಲ್ಡ್ ಪ್ರೀ ಸ್ಕೂಲ್ ನೆಟ್ವರ್ಕ್ ಕರ್ನಾಟಕ ಇದರ 7 ನೇ ವಾರ್ಷಿಕ ಹಾಗೂ ಐದನೇ ಗ್ರಾಜ್ಯುವೇಶನ್ ಪ್ರೋಗ್ರಾಂ ಪ್ರಯುಕ್ತ ಹಮ್ಮಿಕೊಳ್ಳಲಾದ ಸಯ್ಯಿದತ್ ನಫೀಸತುಲ್ ಮಿಸ್ರಿಯಾ ಕೊಮೆಮೊರೇಶನ್ ಕಾನ್ಫರೆನ್ಸ್ ನಲ್ಲಿ ಈ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು.
ಚೆಯರ್ಮಾನ್ ಸಯ್ಯಿದ್ ಶರಫುದ್ದೀನ್ ತಂಙಳ್ ಫರೀದ್ ನಗರ ನೇತೃತ್ವದಲ್ಲಿ ಬೆಳಿಗ್ಗೆ 9 ಗಂಟೆಗೆ ಆರಂಭಗೊಳ್ಳುವ ಈ ಕಾರ್ಯಕ್ರಮದಲ್ಲಿ
ಮೋಹಕ ವಾಗ್ಝರಣಿಯ ಅನುಗ್ರಹೀತ ಉಪನ್ಯಾಸಕ ಅನಸ್ ಅಮಾನಿ ಪುಷ್ಪಗಿರಿ, ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಎಚ್.ಐ ಅಬೂ ಸುಫ್ಯಾನ್ ಮದನಿ, ಕರ್ನಾಟಕ ವಕ್ಪ್ ಬೋರ್ಡ್ ಇದರ ನಿಕಟಪೂರ್ವ ಅಧ್ಯಕ್ಷರಾದ ಮೌಲಾನಾ ಶಾಫಿ ಸಅದಿ ಭಾಗವಹಿಸಲಿದ್ದಾರೆಂದು ಮ್ಯಾನೇಜಿಂಗ್ ಡೈರೆಕ್ಟರ್: ಎಂ.ಎ ಸಿದ್ದೀಕ್ ಮದನಿ ಮೆದು ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ