ರಿಯಾದ್: ಒಮಾನ್ ಹೊರತುಪಡಿಸಿ ಗಲ್ಫ್ ರಾಷ್ಟ್ರಗಳಲ್ಲಿ ನಾಳೆ ಈದುಲ್ ಫಿತರ್ ಹಬ್ಬ ಆಚರಣೆ. ಸೌದಿ ಅರೇಬಿಯಾದಲ್ಲಿ ಶವ್ವಾಲ್ ಚಂದ್ರದರ್ಶನದೊಂದಿಗೆ ವಿಶ್ವಾಸಿಗಳು ರಂಜಾನ್ 29 ಮುಗಿದ ನಂತರ ನಾಳೆ ಹಬ್ಬವನ್ನು ಆಚರಿಸುತ್ತಾರೆ. ಆದರೆ ಒಮಾನ್ನಲ್ಲಿ ಸೋಮವಾರ ಈದ್ ಆಗಿರುತ್ತದೆ.
ಸೌದಿ ಅರೇಬಿಯಾವನ್ನು ಅನುಸರಿಸುವ ಯುಎಇ, ಕುವೈತ್, ಕತಾರ್ ಮತ್ತು ಬಹರೈನ್ ದೇಶಗಳಲ್ಲಿ ನಾಳೆ ಈದುಲ್ ಫಿತರ್ ಹಬ್ಬ ಆಚರಿಸಲಾಗುತ್ತದೆ.
ಪವಿತ್ರ ರಮಳಾನ್ ತಿಂಗಳು ಮುಸಲ್ಮಾನರ ಮಟ್ಟಿಗೆ ಅತ್ಯಂತ ಪವಿತ್ರವಾದ ತಿಂಗಳಾಗಿದೆ. ಈ ತಿಂಗಳಿನಲ್ಲಿ ಕಠಿಣ ವೃತವನ್ನು ಆಚರಿಸಿ, ಅಲ್ಲಾಹನ ಇಷ್ಟ ದಾಸರ ಸಾಲಿನಲ್ಲಿ ಸೇರುವ ಉದ್ದೇಶದಿಂದ ಎಲ್ಲಾ ವಿಧ ಕೆಡುಕುಗಳಿಂದಲೂ ದೂರ ಸರಿದು ಹೆಚ್ಚೆಚ್ಚು ಒಳಿತನ್ನು ಮಾಡುತ್ತಾ ಉತ್ತಮ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಲು ಶ್ರಮಿಸುತ್ತಾರೆ.
ರಮಳಾನ್ ತಿಂಗಳ ಕಡ್ಡಾಯ ವೃತವನ್ನು ಕೊನೆಗೊಳಿಸುವ ದಿನದಂದು ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ. ರಮಳಾನ್ 29 ನೇ ಉಪವಾಸ ತೊರೆದ ಬಳಿಕ ಶವ್ವಾಲ್ ಚಂದ್ರ ದರ್ಶನವಾದಲ್ಲಿ ಮರುದಿನ ಈದ್ ಆಚರಿಸಲಾಗುತ್ತದೆ. ಚಂದ್ರ ದರ್ಶನವಾಗದಿದ್ದಲ್ಲಿ ರಮಳಾನ್ 30 ಪೂರ್ತೀಕರಿಸಿದ ನಂತರ ಈದ್ ಆಚರಿಸಲಾಗುತ್ತದೆ.
ಈದ್ ದಿನದಂದು ಯಾವೊಬ್ಬನೂ ಹಸಿವಿನಿಂದ ಇರಕೂಡದು ಎಂಬ ಉದ್ದೇಶದಿಂದ,ಆ ದಿನದಲ್ಲಿ ಫಿತರ್ ಝಕಾತ್ ಸಂಪ್ರದಾಯವನ್ನು ಕಡ್ಡಾಯಗೊಳಿಸಲಾಗಿದೆ. ಆಯಾ ಊರಿನಲ್ಲಿ ಸಾಮಾನ್ಯವಾಗಿ ಸೇವಿಸಲ್ಪಡುವ ಧಾನ್ಯಗಳನ್ನು ನಿರ್ದಿಷ್ಟ ಅಳತೆಯಲ್ಲಿ ಫಿತರ್ ಝಕಾತ್ ರೂಪದಲ್ಲಿ ನೀಡಬೇಕು.ಈದ್ ಎಂಬುದು ಪರಸ್ಪರ ಸ್ನೇಹ, ಸಹಬಾಳ್ವೆ ಸೌಹಾರ್ಧತೆಯನ್ನು ಸಾರುವ ಸಂಕೇತವಾಗಿದೆ.
















ಇನ್ನಷ್ಟು ಸುದ್ದಿಗಳು
ಮಾದಕ ವಸ್ತು ‘ಖಾತ್’ ಮಾರಾಟ: ಭಾರತೀಯ ಪ್ರಜೆ ಸೌದಿಯಲ್ಲಿ ಬಂಧನ
ಅನಿವಾಸಿಗಳಿಗೆ ಶುಭ ಸುದ್ದಿ: ಕುವೈತ್ನಿಂದ ಭಾರತೀಯ ವಿಮಾನ ಸೇವೆಗಳು ಪುನರಾರಂಭ
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ