ಇತ್ತೀಚಿನ ವರದಿ ಪ್ರಕಾರ,ಸೌದಿ ಅರೇಬಿಯಾದಲ್ಲಿ ಶವ್ವಾಲ್ ಚಂದ್ರದರ್ಶನ ವಾಗಿದ್ದು, ನಾಳೆ ಮಾ.30 ರಂದು ಈದುಲ್ ಫಿತರ್ ಹಬ್ಬ ಆಚರಿಸಲಾಗುತ್ತದೆ. ಒಮಾನ್ ಹೊರತುಪಡಿಸಿ ಎಲ್ಲಾ ಗಲ್ಫ್ ರಾಷ್ಟ್ರಗಳಲ್ಲಿ ನಾಳೆ ಈದುಲ್ ಫಿತರ್ ಹಬ್ಬಾಚರಣೆ ಎಂದು ಆಯಾ ರಾಷ್ಟ್ರಗಳ ಧಾರ್ಮಿಕ ವ್ಯವಹಾರಗಳ ಇಲಾಖೆ ಪ್ರಕಟಿಸಿದೆ.
ರಿಯಾದ್, ಮಾ.29: ಇಂದು ಸೂರ್ಯಗ್ರಹಣ ಸಂಭವಿಸುವುದರಿಂದ ಅರಬ್ ದೇಶಗಳಲ್ಲಿ ಶವ್ವಾಲ್ ಚಂದ್ರದರ್ಶನ ಸಾಧ್ಯವಿಲ್ಲ ಎಂದು ಖಗೋಳಶಾಸ್ತ್ರಜ್ಞರು ಹೇಳಿದ್ದಾರೆ.
ಸೂರ್ಯಾಸ್ತದ ಮೊದಲು ಚಂದ್ರಾಕಾರವು ಮುಳುಗುತ್ತದೆ ಮತ್ತು ಸೂರ್ಯಾಸ್ತದ ನಂತರ ಅದರ ಸಂಯೋಗ ಸಂಭವಿಸುತ್ತದೆ ಎಂದು ಸೌದಿ ಖಗೋಳಶಾಸ್ತ್ರಜ್ಞ ಬಾದರ್ ಅಲ್ ಒಮೈರಾ ವಿವರಿಸಿದ್ದಾರೆ, ಇದರಿಂದಾಗಿ ಬರಿಗಣ್ಣಿನಿಂದ, ದೂರದರ್ಶಕಗಳಿಂದ ಅಥವಾ ಯಾವುದೇ ಇತರ ವಿಧಾನಗಳಿಂದ ಅದನ್ನು ಗುರುತಿಸುವುದು ಅಸಾಧ್ಯವಾಗಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಸೌದಿ ಅರೇಬಿಯಾ ಮತ್ತು ಇತರ ಅರಬ್ ಮತ್ತು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಶವ್ವಾಲ್ ಆರಂಭವನ್ನು ಗುರುತಿಸಲು ಚಂದ್ರ ವೀಕ್ಷಣೆ ಅಗತ್ಯವಿರುವುದರಿಂದ, ಚಂದ್ರದರ್ಶನ ಆಗದೇ ಇದ್ದಲ್ಲಿ ಸೌದಿ, ಯುಎಇ, ಖತಾರ್, ಕುವೈತ್, ಬಹ್ರೇನ್ ಗಳಲ್ಲಿ ರಂಜಾನ್ 30 ಪೂರ್ಣ ಗೊಳಿಸಿ, ಈದ್-ಉಲ್-ಫಿತರ್ ಸೋಮವಾರ (ಮಾರ್ಚ್ 31) ರಂದು ಆಚರಿಸಲಾಗುತ್ತದೆ. ಆದಾಗ್ಯೂ, ಇಂದು ಶವ್ವಾಲ್ ಚಂದ್ರ ಕಾಣಿಸಿಕೊಂಡರೆ, ನಾಳೆ (ಮಾರ್ಚ್ 30) ಈದ್ ಆಚರಿಸಲಾಗುತ್ತದೆ.
ಅಬುಧಾಬಿಯಲ್ಲಿರುವ ಅಂತರರಾಷ್ಟ್ರೀಯ ಖಗೋಳ ಕೇಂದ್ರವು ಕಳೆದ ವಾರ ಶವ್ವಾಲ್ ಚಂದ್ರಾಕಾರವನ್ನು ಪ್ರಪಂಚದ ಪೂರ್ವ ಭಾಗದಿಂದ ಮತ್ತು ಅರಬ್ ಮತ್ತು ಇಸ್ಲಾಮಿಕ್ ಪ್ರದೇಶಗಳಲ್ಲಿ ಯಾವುದೇ ವೀಕ್ಷಣಾ ಸಾಧನಗಳನ್ನು ಬಳಸಿಕೊಂಡು ವೀಕ್ಷಿಸಲು ಅಸಾಧ್ಯವೆಂದು ದೃಢಪಡಿಸಿತ್ತು.
ಮಾರ್ಚ್ 31 ರಂದು ಕರಾವಳಿ ಕರ್ನಾಟಕ ಮತ್ತು ಕೇರಳದಲ್ಲೂ ಈದುಲ್ ಫಿತರ್ ಆಗುವ ಸಾಧ್ಯತೆ ಹೆಚ್ಚಾಗಿದೆ.