ಜೆಡ್ಡಾ: ಸೌದಿ ಅರೇಬಿಯಾದ ಕರೆನ್ಸಿ ರಿಯಾಲ್ ಗೆ ಏಕೀಕೃತ ಚಿಹ್ನೆ. ಹೊಸ ಚಿಹ್ನೆಗೆ ದೊರೆ ಸಲ್ಮಾನ್ ಅನುಮೋದನೆ ನೀಡಿದ್ದಾರೆ. ಇದು ದೇಶದ ರಾಷ್ಟ್ರೀಯ ಕರೆನ್ಸಿಯ ಗುರುತನ್ನು ಬಲಪಡಿಸುವ ಮಹತ್ವದ ನಿರ್ಧಾರವಾಗಿದೆ. ಹೊಸ ಚಿಹ್ನೆಯ ಅನುಮೋದನೆಗೆ ನೇತೃತ್ವ ನೀಡಿದ ಕಿಂಗ್ ಸಲ್ಮಾನ್, ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನ ಮಂತ್ರಿ ಅಮೀರ್ ಮುಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಸೌದಿ ಸೆಂಟ್ರಲ್ ಬ್ಯಾಂಕ್ (SAMA) ಗವರ್ನರ್ ಅಯ್ಮನ್ ಅಲ್ ಸಯಾರಿ ಅವರು ತಮ್ಮ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಈ ನಿರ್ಧಾರವು ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸೌದಿ ಅರೇಬಿಯಾದ ಆರ್ಥಿಕ ಗುರುತನ್ನು ಎತ್ತಿ ತೋರಿಸಲು ಸಹಾಯ ಮಾಡುತ್ತದೆ ಎಂದು ಅವರು ಒತ್ತಿ ಹೇಳಿದರು. ವಿವಿಧ ಇಲಾಖೆಗಳೊಂದಿಗೆ ಹಣಕಾಸು ಮತ್ತು ವಾಣಿಜ್ಯ ವಹಿವಾಟುಗಳಲ್ಲಿ ರಿಯಾಲ್ನ ಅಧಿಕೃತ ಚಿಹ್ನೆಯನ್ನು ಕ್ರಮೇಣ ಅಳವಡಿಸಲಾಗುವುದು ಎಂದು ಅಲ್ ಸಯಾರಿ ಹೇಳಿದ್ದಾರೆ.
ರಾಷ್ಟ್ರೀಯ ಗುರುತನ್ನು ಉತ್ತೇಜಿಸಲು, ಸಾಂಸ್ಕೃತಿಕ ಪಾಲುದಾರಿಕೆಗಳನ್ನು ಬಲಪಡಿಸಲು ಮತ್ತು ಪ್ರಮುಖ ಜಾಗತಿಕ ಕರೆನ್ಸಿಗಳಲ್ಲಿ, ವಿಶೇಷವಾಗಿ G20 ದೇಶಗಳ ಆರ್ಥಿಕ ಚೌಕಟ್ಟಿನೊಳಗೆ ಸೌದಿ ರಿಯಾಲ್ ಅನ್ನು ಪ್ರಮುಖವಾಗಿರಿಸುವ ಸಲುವಾಗಿ ಅಧಿಕೃತ ಚಿಹ್ನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೈಲೈಟ್ ಮಾಡಿದರು,
ಸಂಸ್ಕೃತಿ ಸಚಿವಾಲಯ, ಮಾಧ್ಯಮ ಸಚಿವಾಲಯ ಮತ್ತು ಸೌದಿ ಮಾನದಂಡಗಳು ಮತ್ತು ಮಾಪನಶಾಸ್ತ್ರ ಸಂಸ್ಥೆ ಸೇರಿದಂತೆ ಚಿಹ್ನೆಯನ್ನು ಅಭಿವೃದ್ಧಿಪಡಿಸುವಲ್ಲಿ ಪಾತ್ರವಹಿಸಿದ ಎಲ್ಲಾ ಸಂಸ್ಥೆಗಳಿಗೆ ಗವರ್ನರ್ ಧನ್ಯವಾದ ಅರ್ಪಿಸಿದರು. ಅತ್ಯುನ್ನತ ತಾಂತ್ರಿಕ ಮಾನದಂಡಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾದ ಸೌದಿ ರಿಯಾಲ್ ಚಿಹ್ನೆಯು ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಈ ಚಿಹ್ನೆಯು ಅರೇಬಿಕ್ ಕ್ಯಾಲಿಗ್ರಫಿಯಿಂದ ಪಡೆದ ವಿನ್ಯಾಸವಾಗಿದೆ, ಇದನ್ನು ರಾಷ್ಟ್ರೀಯ ಕರೆನ್ಸಿ ‘ರಿಯಾಲ್’ ಎಂದು ಓದಬಹುದು. ಹೊಸ ಚಿಹ್ನೆಯು ಸೌದಿ ರಿಯಾಲ್ನ ಪ್ರಾತಿನಿಧ್ಯವನ್ನು ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ಹಣಕಾಸು ಮತ್ತು ವಾಣಿಜ್ಯ ವಹಿವಾಟುಗಳಲ್ಲಿ ಸುವ್ಯವಸ್ಥಿತಗೊಳಿಸುವ ನಿರೀಕ್ಷೆಯಿದೆ.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ