ಕುವೈತ್ ಸಿಟಿ: ಡಿಕೆಎಸ್ಸಿ ಇದರ ಕುವೈತ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಾಲ್ಮಿಯ ಸುನ್ನಿ ಸೆಂಟರ್ ನಲ್ಲಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು ಯೂಸುಫ್ ಅಬ್ಬಾಸ್ ಬಾರೂದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗೌರವಾಧ್ಯಕ್ಷರಾದ ಶಫೀಕ್ ಅಹ್ಸನಿ ಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು DKSC ಕೇಂದ್ರ ಸಮಿತಿ ವೀಕ್ಷಕರಾಗಿ ಆಗಮಿಸಿದ್ದ , *DKSC ವಿಷನ್ ’30* ಇದರ ಚೇರ್ಮನ್ ಹಾತಿಂ ಹಾಜಿ ಕೂಳೂರು ಉದ್ಘಾಟಿಸಿದರು.
ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡನೆ ಬಳಿಕ ಸಭೆಯ ಅಂಗೀಕಾರ ಪಡೆಯಲಾಯಿತು.
DKSC ಕುವೈತ್ ಇದರ ರಾಯಭಾರಿಯಾಗಿ ಆಗಮಿಸಿದ್ದ ಅಝೀಝ್ ಮೂಳೂರು ನೇತೃತ್ವದಲ್ಲಿ ಸಮಿತಿ ಬರ್ಕಾಸ್ತು ಗೊಳಿಸಿ ಹೊಸ ಸಮಿತಿ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಯೂಸುಫ್ ಅಬ್ಬಾಸ್ ಬಾರುದ್ ಅವರನ್ನು ಅಧ್ಯಕ್ಷರಾಗಿ ಮರು ಆಯ್ಕೆ ಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಲಿಯಾಕತ್ ಗಂಗಾವಳಿ ಹಾಗೂ ಕೋಶಾಧಿಕಾರಿಯಾಗಿ ಇಂತಿಯಾಝ್ ಸೂರಿಂಜೆ
ಅವರನ್ನು ಆರಿಸಲಾಯಿತು.
15 ಮಂದಿ ಕಾರ್ಯಕಾರಿ ಸಮಿತಿಯನ್ನು ಒಳಗೊಂಡ ನೂತನ ಸಮಿತಿಯನ್ನು ರಚಿಸಲಾಯಿತು.
DKSC ಸಂಸ್ಥೆಯ ಹ್ರಸ್ವ ಪರಿಚಯ ಮಾಡುವ ವಿಡಿಯೋ ವನ್ನು ಪ್ರದರ್ಶನ ಮಾಡಲಾಯಿತು.
ಅತಿಥಿಗಳನ್ನು ಸನ್ಮಾನಿಸಿ ಕೇಂದ್ರ ಸಮಿತಿ ಯ ಕಳೆದ ವರ್ಷ ದ ಪ್ರಮುಖ ಯೋಜನೆಗಳನ್ನು ಸಭೆಗೆ ತಿಳಿಸಲಾಯಿತು. ಕುವೈತ್ ನಲ್ಲಿರುವ ಪ್ರಮುಖ ಸಂಘಟನೆಯ ನೇತಾರರ ಅಭಿನಂದನಾ ಭಾಷಣ ಮುಗಿದ ಬಳಿಕ ಗೌರವಾಧ್ಯಕ್ಷರಾದ ಅಬ್ದುರ್ರಹ್ಮಾನ್ ಸಖಾಫಿ ದುಆ ನೆರವೇರಿಸಿದರು. ಶಫೀಕ್ ಅಹ್ಸನಿ ಸ್ವಾಗತಿಸಿ ಳಿಯಾಕತ್ ಗಂಗಾವಳಿ ವಂದಿಸಿದರು. ಕಾರ್ಯಕ್ರಮ ವನ್ನು ಹೈದರ್ ಉಚ್ಚಿಲ ನಿರೂಪಿಸಿದರು.
















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ