ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ವೆಸ್ಟ್ ಜಿಲ್ಲೆಯ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷರಾಗಿದ್ದ ಹಿರಿಯ ನಾಯಕ ಅಲಿಕುಂಞಿ ಹಾಜಿ ಪಾರೆಯವರನ್ನು ಇತ್ತೀಚೆಗೆ ಮಂಗಳೂರು ಪಡೀಲ್ ನಲ್ಲಿರುವ ಇಲ್ಮ್ ಸೆಂಟರ್ ನಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಹಲವಾರು ವರ್ಷಗಳಿಂದ ವಿವಿಧ ಸುನ್ನೀ ಸಂಘ ಸಂಸ್ಥೆಗಳಲ್ಲಿ ಅಲಿಕುಂಞಿ ಹಾಜಿ ಯವರು ಸಕ್ರಿಯರಾಗಿದ್ದಾರೆ.
ಜಿಲ್ಲಾ ಉಪಾಧ್ಯಕ್ಷ ಎಂ ಪಿ ಎಂ ಅಶ್ರಫ್ ಸಅದಿ ಮಲ್ಲೂರುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕೆಕೆಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ಸುರಿಬೈಲು ಉದ್ಘಾಟಿಸಿದರು.
ಇತ್ತೀಚೆಗೆ ಅಗಲಿದ ಸಾಮಾಜಿಕ, ಧಾರ್ಮಿಕ ಮುಂದಾಳು ಹಾಜಿ ಮುಮ್ತಾಜ್ ಅಲಿಯವರಿಗಾಗಿ ಪ್ರಾರ್ಥಿಸಲಾಯಿತು. ಸಭೆಯಲ್ಲಿ ಜಿಲ್ಲಾ ಕೋಶಾಧಿಕಾರಿ ಎಸ್ ಕೆ ಅಬ್ದುಲ್ ಖಾದರ್ ಹಾಜಿ ಮುಡಿಪು,ಕಾರ್ಯದರ್ಶಿಗಳಾದ ಬಶೀರ್ ಹಾಜಿ ಕುಂಬ್ರ, ಇಸ್ಮಾಯಿಲ್ ಕಿನ್ಯ, ಬಿ ಎ ಇಖ್ಬಾಲ್ ಕೃಷ್ಣಾಪುರ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಅನ್ವರ್ ಹಾಜಿ ಗೂಡಿನಬಳಿ,ಎ ಎಂ ಇಸ್ಮಾಯಿಲ್ ಸಅದಿ ಉರುಮನೆ, ಬದ್ರುದ್ದೀನ್ ಹಾಜಿ ಬಜ್ಪೆ, ಸಾಮನಿಗೆ ಮದನಿ, ಸಿದ್ದೀಖ್ ಸಖಾಫಿ ಸಹಿತ ಜಿಲ್ಲಾ ನಾಯಕರು ಭಾಗವಹಿಸಿದ್ದರು.
ನವೆಂಬರ್ 02 ಶನಿವಾರ ಬೆಳಿಗ್ಗೆ 09:30 ಘಂಟೆಗೆ ಮಸ್ಜಿದುತ್ತಖ್ವಾ ಪಂಪ್ ವೆಲ್ ನಲ್ಲಿ ನಮ್ಮನ್ನಗಲಿದ ಹಾಜಿ ಬಿ ಎಂ ಮುಮ್ತಾಜ್ ಅಲಿಯವರಿಗಾಗಿ ಪ್ರತ್ಯೇಕ ದುಆಃ ಮಜ್ಲಿಸ್ ನಡೆಸಲು ತೀರ್ಮಾನಿಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಹೀಮ್ ಸಅದಿ ಖತರ್ ಸ್ವಾಗತಿಸಿ ಕಾರ್ಯದರ್ಶಿ ಅಬ್ದುಲ್ ಜಲೀಲ್ ಬ್ರೈಟ್ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್