ಕೋಝಿಕ್ಕೋಡ್ ಪೂನೂರ್ ಮದೀನತುನೂರ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ಹಾಫಿಲ್ ಮುಹಮ್ಮದ್ ಶಾಮಿಲ್ ಮಿನ್ಹಾಜ್ (ಕೆ.ಸಿ. ರೋಡ್) ಬರೆದು ಮರ್ಕಝ್ ಗಾರ್ಡನ್ ಪ್ರಕಾಶನ ಸಂಸ್ಥೆ ‘ಗ್ಲೋಕಲ್ ಮೀಡಿಯಾ’ ಪ್ರಕಟಿಸಿದ ಇಂಗ್ಲಿಷ್ ಪುಸ್ತಕ
“The essence of being; soul, mind and consciousness”(ಅಸ್ತಿತ್ವ, ಆತ್ಮ, ಮನಸ್ಸು ಮತ್ತು ಪ್ರಜ್ಞೆಯ ಸಾರ) ಇದರ ಬಿಡುಗಡೆ ಸಮಾರಂಭವು ಇತ್ತೀಚಿಗೆ ಮರ್ಕಝ್ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು.
ಮದೀನತುನೂರ್ ಸೀನಿಯರ್ ಮುದರ್ರಿಸ್ ಮುಹ್ಯಿದ್ದೀನ್ ಸಖಾಫಿ ಕಾವನೂರ್ ಪುಸ್ತಕ ಬಿಡುಗಡೆ ಮಾಡಿದರು ಮರ್ಕಝ್ ಗಾರ್ಡನ್ ಆಡಳಿತಾಧಿಕಾರಿ ಅಬೂಸ್ವಾಲಿಹ್ ಸಖಾಫಿ ಪ್ರಥಮ ಪ್ರತಿಯನ್ನು ಸ್ವೀಕರಿಸಿದರು
ಮಂಗಳೂರು ತಲಪಾಡಿ -ಕೆಸಿ ರೋಡ್ ನಿವಾಸಿಯಾದ ಶಾಮಿಲ್, ಮುಹಿಮ್ಮಾತ್ ನಲ್ಲಿ ಖುರ್ಆನ್ ಹಿಫ್ಜ್ ಜತೆಗೆ ಎಸ್ಸೆಸ್ಸೆಲ್ಸಿ ಹಾಗೂ ಕಾಂತಪುರಂ ರಬ್ಬಾನಿ ಕ್ಯಾಂಪಸ್ ನಲ್ಲಿ ಪಿಯುಸಿ ಮುಗಿಸಿ ಇದೀಗ ಪೂನೂರ್ ಮರ್ಕಝ್ ಗಾರ್ಡನ್ ನಲ್ಲಿ ಬಿ. ಎ. ಸೈಕಾಲಜಿ ಅಂತಿಮ ವರ್ಷದ ‘ನೂರಾನಿ’ ವಿದ್ಯಾರ್ಥಿಯಾಗಿದ್ದಾರೆ.

ರಾಜಸ್ಥಾನದ ಗಗ್ವಾನದಲ್ಲಿ ಹಿಫ್ಲುಲ್ ಖುರ್ಆನ್ ದೌರಾ ಪೂರ್ತಿಮಾಡಿದ ಇವರು ಅನೇಕ ರಾಷ್ಟ್ರೀಯ ಮಟ್ಟದ ಸೆಮಿನಾರ್ ಗಳಲ್ಲಿ ಮನಶ್ಶಾಸ್ತ್ರೀಯ ಪ್ರಬಂಧಗಳನ್ನು ಮಂಡಿಸಿದ್ದಾರೆ ಎಸ್.ವೈ.ಎಸ್. ಮೂವತ್ತನೇ ವಾರ್ಷಿಕ ಸಮ್ಮೇಳದಲ್ಲಿ ಹೊರತಂದ ಇಪ್ಪತ್ತು ಪುಸ್ತಕಗಳ ಪೈಕಿ ‘ಆಲಾ ಹಝ್ರತ್’ ಎಂಬ ಕನ್ನಡ ಪುಸ್ತಕ ಇವರು ಬರೆದದ್ದಾಗಿತ್ತು.
ಭಾಷಣ, ಬರಹ, ಗಾಯನ ರಂಗದ ಮೇರು ಪ್ರತಿಭೆಯಾದ ಇವರು ಸುನ್ನೀ ಸಂಘಟನಾ ಮುಂದಾಳು ಡಾ. ಎಮ್ಮೆಸ್ಸೆಂ.ಝೖನೀ ಕಾಮಿಲ್ ಹಾಗೂ ಕೆ.ಸಿ. ರೋಡ್ ಮಿನ್ ಹಾಜ್ ಮಹಿಳಾ ಕಾಲೇಜು ಪ್ರಿನ್ಸಿಪಾಲ್ ಸಈದ ಫಾತಿಮಾ ಅಲ್ ಮಾಹಿರ ದಂಪತಿಯ ಹಿರಿಯ ಮಗ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮರ್ಕಝ್ ಗಾರ್ಡನ್ ಪ್ರೊ ಡೈರೆಕ್ಟರ್ ಆಸಫ್ ನೂರಾನಿ, ಮುದರ್ರಿಸರಾದ ಮುಹ್ಯಿದ್ದೀನ್ ಸಖಾಫಿ ತಳೀಕೆರೆ, ಹುಸೈನ್ ಫೈಝಿ, ಅಬೂಬಕ್ಕರ್ ನೂರಾನಿ, ಉರ್ದು ವಿಭಾಗದ ಮುಖ್ಯಸ್ಥ ಇಮ್ತಿಯಾಜ್ ನೂರಾನಿ ಮುಂತಾದವರು ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ