ಕಲ್ಲಡ್ಕ : ಆಯಿಷಾ ಇಬ್ರಾಹಿಂ ಜುಮಾ ಮಸ್ಜಿದ್ ಕೆ.ಸಿ ರೋಡ್ ವತಿಯಿಂದ ಲೋಕ ಪ್ರವಾದಿ ಮಹಮ್ಮದ್ ಮುಸ್ತಫ (ಸ ಅ) ಹೆಸರಿನಲ್ಲಿ ಪ್ರತೀ ವರ್ಷ ಆಚರಿಸಿಕೊಂಡು ಬರುವ ಇಶಲ್ ಮಿಲಾದ್ ಫೆಸ್ಟ್ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು.


ದಿನಾಂಕ 27 ರಂದು ನೂರುಲ್ ಉಲೂಮ್ ಮದ್ರಸ ಕೆ.ಸಿ ರೋಡ್ ವಿದ್ಯಾರ್ಥಿನಿಗಳಿಂದ ಪ್ರತಿಭಾ ಪ್ರದರ್ಶನ ಹಾಗು ಹಲವು ಧಾರ್ಮಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ದಿನಾಂಕ 28 ರಂದು ಆಯಿಷಾ ಜುಮಾ ಮಸ್ಜಿದ್ ಕೆ.ಸಿ ರೋಡ್ ಇದರ ಅಧ್ಯಕ್ಷರಾದ ಎಫ್ .ಕೆ ಖಾದರ್ ಇವರ ಅಧ್ಯಕ್ಷತೆಯಲ್ಲಿ ಮತ್ತು ಖತೀಬ್ ಉಸ್ತಾದ್ ಯಾಹ್ಯಾ ದಾರಿಮಿ ಯವರ ದುವಾದೊಂದಿಗೆ ಆರಂಭವಾದ ಕಾರ್ಯಕ್ರಮ ನೂರುಲ್ ಉಲೂಮ್ ಮದ್ರಸ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಹಾಗೂ ಬುರ್ದಾ ಮಜ್ಲಿಸ್. ದಫ್ ಪ್ರದರ್ಶನ ಅದರಲ್ಲೂ ವಿಶೇಷವಾಗಿ ಪುಟಾಣಿ ಮಕ್ಕಳ ದಫ್ ಪ್ರದರ್ಶವಂತೂ ವರ್ಣಿಸಲಸಾದ್ಯ ವೇದಿಕೆಯಲ್ಲಿ ಪಿ.ಎಚ್ ಶೇಖಬ್ಬ ಕೆ.ಸಿ ರೋಡ್ ,ವಿ ಕೆ ಖಾದರ್ , ಕುಂಞ ಮೋನು ಹಾಜಿ , ರಹಿಮಾನ್ campco , ಚೆರೆಮೋನಾಕ , ಉಸ್ತಾದ್ ಜಾಫರ್ ಷರೀಫ್ , ಉಸ್ತಾದ್ ಅಬ್ಬಾಸ್ ಮುಸ್ಲಿಯಾರ್ , ಉಸ್ತಾದ್ ಅಬ್ದುಲ್ಲಾ ಮುಸ್ಲಿಯಾರ್ , ಹಲವಾರು ಘಣ್ಯ ಅತಿಥಿಗಳ ಉಪಸ್ಥಿತಿಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.


ದಿನಾಂಕ 29 ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ , ಧಾರ್ಮಿಕ ಸಭಾ ಕಾರ್ಯಕ್ರಮ ಹಾಗು ದುವಾ ಮಜ್ಲಿಸ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಕೇಂದ್ರಬಿಂದು ವಿಶೇಷ ಅತಿಥಿಯಾಗಿ ಸಯ್ಯದ್ ಕುಟುಂಬದ ಕಣ್ಮಣಿ ಬಹುಮಾನ್ಯರಾದ ಅಸ್ಸಯ್ಯದ್ ಇಬ್ರಾಹಿಂ ತಂಙಳ್ ಆನೆಕಲ್ಲು ರವರು ನೂರುಲ್ ಉಲೂಮ್ ಮದ್ರಸ ಮಕ್ಕಳ ದಫ್ ನೊಂದಿಗೆ ವೇದಿಕೆಗೆ ಆಗಮಿಸಿದರು.
ವೇದಿಕೆಯಲ್ಲಿ ಸಭಾಧ್ಯಕ್ಷರಾಗಿ MJM ಇದರ ನೂತನ ಅಧ್ಯಕ್ಷರಾದ ಅಬ್ದುಲ್ಲಾ ಕೋಡಿ ಅದೇ ರೀತಿ ಕೆ.ಸಿ ರೋಡ್ ಮಸ್ಜಿದ್ ಇದರ ಖತೀಬರಾದ ಯಾಹ್ಯಾ ದಾರಿಮಿ , ಪ್ರಾಸ್ತಾವಿಕ ಭಾಷಣಗಾರಾಗಿ ಬಹುಮಾನ್ಯರಾದ ಉಸ್ಮಾನ್ ದಾರಿಮಿ ಖತೀಬರು ಕಲ್ಲಡ್ಕ , ಕಾರ್ಯಕ್ರಮದಲ್ಲಿ ಬಹುಮಾನ್ಯರಾದ ಉಸ್ತಾದ್ ಅಬ್ದುಲ್ ಹಮೀದ್ ದಾರಿಮಿ ಖತೀಬರು ಗೋಳ್ತಮಜಲ್ ರವರು ಚುಟುಕು ಸಂದೇಶವನ್ನು ನೀಡಿದರು ವೇದಿಕೆಯಲ್ಲಿ ಸಿದ್ದೀಕ್ ಪನಾಮ MJM ಕಾರ್ಯದರ್ಶಿ , ಕೆ.ಎಂ ಶಾಫಿ ಹಾಜಿ ,ಇಕ್ಬಾಲ್ ಕೆ.ಸಿ ರೋಡ್ , ಇಬ್ರಾಹಿಂ ಸರಪಾಡಿ , ಮಜೀದ್ ಉಸ್ತಾದ್ ಕೆ.ಸಿ ರೋಡ್ ,ಅದೇ ರೀತಿ MJM ಇದರ ನೂತನ ಸದಸ್ಯರಾದ ದಾವೂದ್ ಮಾಣಿಮಜಲ್ , ಪಿ ಎಚ್ ಲತೀಫ್ ಕೆ.ಸಿ ರೋಡ್ , ಜವಾಝ್ ಕಲ್ಲಡ್ಕ , ಝಕಾರಿಯಾ ಗೋಳ್ತಮಜಲ್ , ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಸಂಶುದ್ದೀನ್ ನಿರೂಪಿಸಿದರೆ ಫವಾಝ್ ಸನ್ಲೈಟ್ ವಂದಿಸಿದರು
ವರದಿ : ಕೆ.ಕೆ ಜಬ್ಬಾರ್ ಕಲ್ಲಡ್ಕ
















ಇನ್ನಷ್ಟು ಸುದ್ದಿಗಳು
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್