ಅಪರಾಧಿಗಳಿಗೆ ತೊಂಬತ್ತಲ್ಲ ಮೂವತ್ತು ದಿನಗಳಲ್ಲಿ ಶಿಕ್ಷೆ ನೀಡುವ ನ್ಯಾಯವ್ಯವಸ್ಥೆಯು ಜಾರಿಗೆ ಬರುವುದಾದರೆ ಅದು ಸ್ವಾಗತಾರ್ಹ. ಇದರಿಂದ ಅಪರಾಧಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯೂ ಇದೆ.
ಆದರೆ ಅದು ಕೋಮು ಆಧಾರಿತವಾಗಿರಕೂಡದು. ನಿರ್ದಿಷ್ಠ ಕೋಮಿನ ಆರೋಪಿಗಳಿಗೆ ಮಾತ್ರ ಶೀಘ್ರ ಶಿಕ್ಷೆ ಹಾಗೂ ಮಿಕ್ಕಿದವರಿಗೆ ಅದರಿಂದ ವಿನಾಯಿತಿ ನೀಡುವ ಪ್ರಸ್ತಾಪವು ಮುನ್ನಲೆಗೆ ಬರುವುದು ನ್ಯಾಯೋಚಿತವಲ್ಲ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಅಭಿಪ್ರಾಯಪಟ್ಟಿದೆ.
ಹುಬ್ಬಳ್ಳಿಯ ನೇಹಾ ಕೊಲೆಯು ಖಂಡನಾರ್ಹ. ಆದರೆ ಆ ವಿಚಾರದಲ್ಲಿ ಶೀಘ್ರ ಶಿಕ್ಷೆ ಎಂಬ ರಾಜ್ಯ ಕಾಂಗ್ರೇಸ್ ನ ಉಸ್ತುವಾರಿ ನಾಯಕರೊಬ್ಬರ ಹೇಳಿಕೆಯು ತೀವ್ರ ಬಾಲಿಶ ವಾದುದು ಎಂದು ಅಸಮಾಧಾನ ವ್ಯಕ್ತಪಡಿಸಿರುವ ಮುಸ್ಲಿಂ ಜಮಾಅತ್ ಶೀಘ್ತ ನ್ಯಾಯ ವಿಲೇವಾರಿಯು ದೇಶದ ಎಲ್ಲ ನಾಗರಿಕರಿಗೂ ಒಂದೇ ರೀತಿಯಲ್ಲಿರಬೇಕೆ ಹೊರತು ಧರ್ಮಾದಾರಿತವಾಗಿರಕೂಡದೆಂದು ಆಗ್ರಹಿಸಿದೆ.
ನ್ಯಾಯಾಂಗ ಪ್ರಕ್ರಿಯೆ ಯು ತಮ್ಮ ನಿಯಂತ್ರಣದಲ್ಲಿದೆಯೆಂಬಂತೆ ಹೇಳಿ ಕೆ ಕೊಡುವ ಮೂಲಕ ಕಾನೂನು ಪ್ರಕ್ರಿಯೆಗಳಿಗೆ ಅಪಚಾರ ಎಸಗುವವ ರ ಬಗ್ಗೆ ಪಕ್ಷ ವು ಎಚ್ಚರ ದಲ್ಲಿರಬೇಕು. ಎಲ್ಲರಿಗೂ ಸಮಾನ ನ್ಯಾಯದ ಪರಿಕಲ್ಪನೆಯನ್ನು ಪ್ರತಿಪಾದಿಸುವ ಕಾಂಗ್ರೇಸ್ ಪಕ್ಷದ ಜಬಾಬ್ದಾರಿಯುತ ನಾಯಕರಿಂದ ಈ ರೀತಿಯ ಬೇಜವಾಬ್ದಾರಿಯುತ ಹೇಳಿಕೆಯು ಬಂದಿರುವುದು ದುರದೃಷ್ಟಕರ ಎಂದು ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಕಳುಹಿಸಿರುವ ಈ ಮೇಲ್ ಸಂದೇಶದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ತಿಳಿಸಿದೆ.
















ಇನ್ನಷ್ಟು ಸುದ್ದಿಗಳು
ಎಸ್ಸೆಸ್ಸೆಫ್ ಸೌಹಾರ್ದ ನಡಿಗೆ ಸಮಾರೋಪ ಸಮಾರಂಭ ಬೆಂಗಳೂರಿನಲ್ಲಿ
ಸದಾ ಸಮುದಾಯದ ಪರ ಧ್ವನಿಯೆತ್ತುವ ಅಲ್ಪಸಂಖ್ಯಾತ ಸಚಿವರು ಕರಾವಳಿಗೆ ಭೇಟಿ ನೀಡದಿರಲು ಕಾರಣವೇನು?
ಎಸ್ ಎಸ್ ಎಫ್ ಜಯನಗರ ಡಿವಿಷನ್ ಗೆ ನವ ಸಾರಥ್ಯ
ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಸಾಹಿತ್ಯೋತ್ಸವದ ಪಾತ್ರ ಅಪಾರ-ಅನಸ್ ಸಿದ್ದೀಖಿ
SSF ಮೆಜೆಸ್ಟಿಕ್ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ಪ್ರೌಢ ಸಮಾಪ್ತಿ
ಎಸ್ ಎಸ್ ಎಫ್ ಜಯನಗರ ಡಿವಿಷನ್ ಸಾಹಿತ್ಯೋತ್ಸವ: ಯಾರಬ್ ನಗರ ಶಾಖೆ ಪ್ರಥಮ
ಬೆಂಗಳೂರು ಸಂಯುಕ್ತ ಜಮಾಅತ್ ಖಾಝಿಯಾಗಿ ಇಂಡಿಯನ್ ಗ್ರಾಂಡ್ ಮುಫ್ತಿ ಎ.ಪಿ.ಉಸ್ತಾದ್
ಕಾರ್ಯಕರ್ತರು ಸೇವಾ ಮನೋಭಾವದೊಂದಿಗೆ ಕಾರ್ಯಚರಿಸಬೇಕು-ಅನಸ್ ಅಮಾನಿ
ಅಲಿ ಭಾಫಖಿ ತಂಗಳರಿಗೆ ಬೆಂಗಳೂರಿನಲ್ಲಿ ಗೌರವಾರ್ಪಣೆ
ಜ.30: ಬೆಂಗಳೂರು ಸಅದಿಯ್ಯಾ ಫೌಂಡೇಷನ್- 20ನೇ ವಾರ್ಷಿಕ ಉದ್ಘಾಟನೆ ಹಾಗೂ 2ನೇ ಸನದುದಾನ ಸಂಗಮ