ಟೆಹ್ರಾನ್: ಇಸ್ರೇಲ್ ವಿರುದ್ಧ ಮೊದಲ ನೇರ ಸೇನಾ ದಾಳಿಯ ನಂತರ ಇರಾನ್, ದಾಳಿಯನ್ನು ಕೊನೆಗೂಳಿ ಸಿರುವುದಾಗಿ ಘೋಷಿಸಿದೆ. ಇನ್ನು ಮಿಲಿಟರಿ ಪ್ರತಿದಾಳಿ ನಡೆಸಿದರೆ ಘೋರ ಪರಿಣಾಮ ಎದುರಿಸಬೇಕಾದೀತು ಎಂದೂ ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೇಳಿದ್ದಾರೆ.
“ಜಿಯೋನಿಸ್ಟ್ ಆಡಳಿತ (ಇಸ್ರೇಲ್) ಅಥವಾ ಅವರ ಬೆಂಬಲಿಗರು ಏನಾದರೂ ನಮ್ಮ ಎಚ್ಚರಿಕೆಗೆ ಮನ್ನಣೆ ನೀಡದಿದ್ದರೆ ಅವರು ನಿರ್ಣಾಯಕ ಮತ್ತು ಬಲವಾದ ಪ್ರತಿಕ್ರಿಯೆಯನ್ನು ಎದುರಿಸಲಿದ್ದಾರೆ ” ಎಂದು ರೈಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅವರು ದಾಳಿ ನಡೆಸಿದ ಸೇನೆಯನ್ನು ಶ್ಲಾಘಿಸಿ ಇಸ್ರೇಲ್ ಮೇಲಿನ ದಾಳಿಯನ್ನು ಅಂತ್ಯಗೊಳಿಸುವುದಾಗಿ ಘೋಷಿಸಿದರು.
‘ಶತ್ರುಗಳಿಗೆ ತಕ್ಕ ಪಾಠ ಕಲಿಸಲಾಗಿದೆ ಮತ್ತು ಇಸ್ರೇಲಿ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇಬ್ರಾಹಿಂ ರೈಸಿ ಬಹಿರಂಗಪಡಿಸಿದ್ದಾರೆ.
ದಾಳಿಯು ತನ್ನ ಎಲ್ಲಾ ಉದ್ದೇಶಗಳನ್ನು ಸಾಧಿಸಿದೆ ಮತ್ತು ಕಾರ್ಯಾಚರಣೆಯನ್ನು ಮುಂದುವರಿಸುವ ಉದ್ದೇಶವಿಲ್ಲ ಎಂದು ಇರಾನ್ನ ಸೇನಾ ಮುಖ್ಯಸ್ಥ ಮೊಹಮ್ಮದ್ ಬಾಖರಿ ಹೇಳಿದರು.
ಒಂದು ವೇಳೆ ಇಸ್ರೇಲ್ ದಾಳಿ ನಡೆಸಿದರೆ ಇರಾನ್ನಿಂದ ದೊಡ್ಡ ಪ್ರತಿಕ್ರಿಯೆ ನೀಡಲಾಗುವುದು ಎಂದು ಬಾಖರಿ ಎಚ್ಚರಿಸಿದರು.
ಇರಾನ್ನ ಪ್ರತೀಕಾರವು ಏಪ್ರಿಲ್ 1 ರಂದು ಡಮಾಸ್ಕಸ್ ದೂತಾವಾಸವನ್ನು ಗುರಿಯಾಗಿಸಿದ್ದ ಇಸ್ರೇಲ್ ನ ಎಫ್ 35 ವಿಮಾನ ಗಳು ಹಾರಿದ್ದ ವಾಯುನೆಲೆ ಮತ್ತು “ಗುಪ್ತಚರ ಕೇಂದ್ರ” ವನ್ನು ಗುರಿಯಾಗಿಸಿಕೊಂಡಿತ್ತು ಎಂದು ಅವರು ಬಹಿರಂಗಪಡಿಸಿದರು.
ಎರಡು ಕೇಂದ್ರಗಳನ್ನು ಕೆಡವಿ ದ್ವಂಸ ಮಾಡಲಾಗಿದೆ ಎಂದೂ ಹೇಳಿಕೊಂಡಿದ್ದಾರೆ.
ಆದಾಗ್ಯೂ, ದಾಳಿಯು ಕೇವಲ ಸಣ್ಣ ಹಾನಿಯನ್ನು ಮಾತ್ರ ಉಂಟುಮಾಡಿದೆ ಎಂದು ಇಸ್ರೇಲ್ ಸಮರ್ಥಿಸಿಕೊಂಡಿದೆ.
ಏತನ್ಮಧ್ಯೆ, ಹಲವಾರು ದೇಶಗಳು ಇರಾನ್ನ ದಾಳಿಯನ್ನು ಖಂಡಿಸಿದ ನಂತರ, ಟೆಹ್ರಾನ್ನ ವಿದೇಶಾಂಗ ಸಚಿವಾಲಯವು ಫ್ರೆಂಚ್, ಬ್ರಿಟಿಷ್ ಮತ್ತು ಜರ್ಮನ್ ರಾಯಭಾರಿಗಳನ್ನು ಕರೆಸಿದೆ.
















ಇನ್ನಷ್ಟು ಸುದ್ದಿಗಳು
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
ಇರಾನ್ ಒಪ್ಪಂದ ಪಾಲಿಸದಿದ್ದರೆ ನೆತ್ತಿ ಮೇಲೆ ಬಾಂಬ್ ವರ್ಷಣ- ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ!
ಇರಾನ್-ಯುಎಸ್ ಕದನ ವಿರಾಮ: ಡೊನಾಲ್ಡ್ ಟ್ರಂಪ್ ಘೋಷಣೆ- ಇರಾನ್ನಿಂದಲೂ ದೃಢೀಕರಣ
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
“ಬೆಲೆ ಏರಿಕೆ ನನಗೆ ಇಷ್ಟ”-ಇರಾನ್ ಯುದ್ಧದ ಕಾರಣದಿಂದ ಉಂಟಾದ ಬೆಲೆ ಏರಿಕೆಯ ಬಗ್ಗೆ ಟ್ರಂಪ್ ವಿವಾದಾತ್ಮಕ ಹೇಳಿಕೆ
’60 ದಿನಗಳಲ್ಲಿ ಹೊಸ ಕೆಲಸ ಹುಡುಕಿ, ಇಲ್ಲದಿದ್ದರೆ ದೇಶ ತೊರೆಯಿರಿ’- ಭಾರತೀಯ ಉದ್ಯೋಗಿಗಳಿಗೆ ಆತಂಕ
ಗಲ್ಫ್ ನಾಯಕರ ವಿನಂತಿಗೆ ಮನ್ನಣೆ ; ಇರಾನ್ ಮೇಲಿನ ದಾಳಿ ತಾತ್ಕಾಲಿಕ ರದ್ದು- ಟ್ರಂಪ್
‘ಯುದ್ಧ ಕೊನೆಗೊಳಿಸುವುದಕ್ಕೆ ಆದ್ಯತೆ ನೀಡಬೇಕು’- ಅಮೆರಿಕದ 14 ಅಂಶಗಳ ಪ್ರಸ್ತಾವನೆಗೆ ಇರಾನ್ ಪ್ರತಿಕ್ರಿಯೆ
ಕೊಲೆ ಬೆದರಿಕೆ, ದಂಗೆಯ ಸಾಧ್ಯತೆ; ನಿವಾಸ ಬಿಟ್ಟು ಹೊರಬಾರದ ಪುಟಿನ್- ಭದ್ರತಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ