ದುಬೈ: ಕೇರಳದ ತರಕಾರಿಗಳ ಆಮದನ್ನು ಸ್ಥಗಿತ ಗೊಳಿಸಿದ ಬಳಿಕ ಯಾತ್ರಾ ನಿಷೇಧವನ್ನು ಏರ್ಪಡಿಸಲಾಗುವುದೇ ಎಂದು ಗಲ್ಫ್ ನಲ್ಲಿರುವ ವಲಸಿಗರು ಶಂಕೆ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕುವೈತ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.ನಿಪಃ ವೈರಸ್ ನ ಕಾರಣದಿಂದಾಗಿ ಕೇರಳದಿಂದ ಹಣ್ಣುಗಳ ಆಮದನ್ನು ಸ್ಥಗಿತಗೊಳಿಸಲು ಇತ್ತೀಚೆಗೆ ಗಲ್ಫ್ ರಾಷ್ಟ್ರಗಳು ನಿರ್ಧರಿಸಿದ್ದವು.
ಬಾವಲಿ ಕಚ್ಚಿದ ಹಣ್ಣುಗಳಿಂದಾಗಿ ನಿಪಃ ವೈರಸ್ ತಗುಲಿದೆ ಎನ್ನುವ ಕಾರಣಕ್ಕಾಗಿ ಕೇರಳದ ಹಣ್ಣು ತರಕಾರಿಗಳ ಅಮದನ್ನು ತಡೆ ಹಿಡಿಯಲಾಗಿದೆ.
ಗಲ್ಫ್ ದೇಶಗಳಲ್ಲಿರುವ ಕೇರಳೀಯರು, ಕೇರಳಕ್ಕೆ ಪ್ರಯಾಣ ನಿಷೇಧಿಸಲಿದ್ದಾರೆ ಎನ್ನುವ ಬಗ್ಗೆ ಆತಂಕದಲ್ಲಿದ್ದಾರೆ.ಬಹ್ರೈನ್ ಮತ್ತು ಯುಎಇ ಈಗಾಗಲೇ ಕೇರಳಕ್ಕೆ ತಾತ್ಕಾಲಿಕವಾಗಿ ಪ್ರಯಾಣವನ್ನು ಬೆಳೆಸದಂತೆ ನಿರ್ದೇಶಿಸಿವೆ.ಬಹ್ರೈನ್‌ನ ಮುಂಬೈ ಕಾನ್ಸುಲೇಟ್ ಮತ್ತು ಯುಎಇಯ ತಿರುವನಂತಪುರಂ ಕಾನ್ಸುಲೇಟ್ ಈ ನಿರ್ದೇಶನವನ್ನು ನೀಡಿದೆ.
ಹೆಚ್ಚಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಯೋಜಿಸಲಾಗುತ್ತಿದೆ ಎಂದು ಕುವೈತ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಲಾಗಿದೆ ಎಂದು ಕುವೈತ್ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಊರಿಗೆ ತೆರಳಿದ ಹಲವರು ಕಾಲಾವಧಿಯ ಮುನ್ನವೇ ಗಲ್ಫ್ ಗೆ ಹಿಂದಿರುಗಿದ್ದಾರೆ.ಕೇರಳಕ್ಕೆ ತೆರಳಲು ಬಯಸಿದವರಲ್ಲಿ ಅನೇಕರು ತಮ್ಮ ಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ