janadhvani

Kannada Online News Paper

ಏರ್ ಇಂಡಿಯಾ ರಮಝಾನ್ ಪ್ರಯುಕ್ತ ಪ್ರಮೋಷನ್

ದುಬೈ: ಏರ್ ಇಂಡಿಯಾ ರಮಝಾನ್ ಪ್ರಯುಕ್ತ ಪ್ರಮೋಷನ್ ಪ್ರಕಟಿಸಿದೆ.ಮೇ 31 ರವರೆಗೆ ಯುಎಇ ಯಿಂದ ಭಾರತಕ್ಕೆ ವಿಮಾನಯಾನ ನಡೆಸುವವರು 40 ಕೆ.ಜಿ. ಬ್ಯಾಗೇಜ್ ಕೊಂಡೊಯ್ಯಬಹುದಾಗಿದೆ.ವ್ಯಾಪಾರ ವರ್ಗದ (ಬಿಸ್ನೆಸ್ ಕ್ಲಾಸ್) ಪ್ರಯಾಣಿಕರಿಗೆ 50 ಕೆಜಿ ಕೊಂಡೊಯ್ಯಬಹುದು.

ದುಬೈನಿಂದ ಕೊಚ್ಚಿ ಮತ್ತು ಕೋಝಿಕ್ಕೋಡ್‌ಗೆ ಮತ್ತು ಶಾರ್ಜಾದಿಂದ ಕೋಝಿಕ್ಕೋಡ್‌ ಗೆ ಸೌಲಭ್ಯ ಲಭ್ಯವಿರುತ್ತದೆ.ಅದಲ್ಲದೆ ದುಬೈನಿಂದ ಮುಂಬೈ, ಹೈದರಾಬಾದ್, ದೆಹಲಿ ಮತ್ತು ಚೆನ್ನೈಗೆ ಪ್ರಯಾಣಿಸುವವರು ಈ ಪ್ರಯೋಜನ ಪಡೆಯಬಹುದು.

ಈದುಲ್ ಫಿತರ್‌ಗೆ ಊರಿಗೆ ಪ್ರಯಾಣಿಸುವವರಿಗೆ ಇದು ಪ್ರಯೋಜನಕಾರಿಯಾಗಲಿದೆ.