ಮೊಬೈಲ್ ಫೋನ್ ಗಳ ಸಂರಕ್ಷಣೆಗಾಗಿ ಕವರ್(ಪೌಚ್) ಗಳನ್ನು ಬಳಸುವುದು ಸರ್ವೇ ಸಾಮಾನ್ಯವಾಗಿದೆ.ಆದರೆ ಇದು ಮೊಬೈಲ್‌ಗಳಿಗೆ ಸುರಕ್ಷಿತೆಯನ್ನು ನೀಡುತ್ತಾ ನಮ್ಮ ಸುರಕ್ಷತೆಗೆ ಅಪಾಯವನ್ನುಂಟುಮಾಡಿದರೆ ಹೇಗೆ ? ಇಂತಹ ಅಧ್ಯಯನವೊಂದು ಇತ್ತೀಚೆಗೆ ಹೊರಬಿದ್ದಿದೆ.
ಚೀನಾದ ಶೆನ್ಜೆನ್ ಕನ್ಸ್ಯೂಮರ್ ಕೌನ್ಸಿಲ್ ಮೊಬೈಲ್ ಸಂಸ್ಥೆಯು, ಫೋನ್ ಕವರ್ ಗಳು ದೊಡ್ಡ ಪ್ರಮಾಣದ ವಿಷಾಂಶವನ್ನು ಹೊಂದಿದೆ ಎಂಬುದನ್ನು ಕಂಡುಹಿಡಿದಿದೆ.ಅಗ್ರ ಸ್ಮಾರ್ಟ್ ಫೋನ್ ತಯಾರಕರಾದ ಆ್ಯಪಲ್, ಸ್ಯಾಮ್ಸಂಗ್, ಹುವಾಯಿ, ಶಿಯೋಮಿ ಮುಂತಾದ ಕಂಪನಿಗಳು ಹೊರತಂದ ಕವರ್ ಗಳಲ್ಲಿ ಈ ಅಪಾಯ ಅಡಗಿದೆ.
28 ಕಂಪೆನಿಗಳು ಹೊರತಂದಿರುವ 30 ವಿಧ ಮೊಬೈಲ್ ಕವರ್‌ಗಳನ್ನು ಶೆನ್ಜೆನ್ ಕನ್ಸ್ಯೂಮರ್ ಕೌನ್ಸಿಲ್ ಅಧ್ಯಯನಕ್ಕೆ ಬಳಸಿತ್ತು.ಈ ಪೈಕಿ ಐದು ಬ್ರಾಂಡ್ ಗಳಲ್ಲಿ ವಿಷಾಂಶವನ್ನು ಪತ್ತೆ ಹಚ್ಚಲಾಗಿದೆ.ಇದು ಆ್ಯಪಲ್ ಅಥವಾ ಶಿಯೋಮಿ ಮುಂತಾದವುಗಳ ಅಧಿಕೃತ ವೆಬ್ಸೈಟ್ ಮೂಲಕ ಮಾರಾಟವಾಗುವ ಕವರ್ ಗಳೂ ಒಳಗೊಂಡಿದೆ.
ಮನುಷ್ಯ ಶರೀರಕ್ಕೆ ಅತ್ಯಂತ ಅಪಾಯಕಾರಿಯಾದ ವಿಷ ಪದಾರ್ಥಗಳಾದ ಲಿಡ್, ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೆಡ್ರೋ ಕಾರ್ಬನ್ ಮತ್ತು ಪ್ಲಾಸ್ಟಿ ಸೈಝರ್ ಗಳು ಹೆಚ್ಚು ಅಪಾಯಕಾರಿಯಾಗಿದೆ.ಇವು ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ ರೋಗಗಳಿಗೆ ಕಾರಣವಾಗುವ ರಾಸಾಯನಿಕಗಳಾಗಿವೆ. ಇದು ಚರ್ಮ, ಶ್ವಾಸಕೋಶ ಮತ್ತು ಮೂತ್ರಾಶಯ ರೋಗಗಳಿಗೆ ಕಾರಣವಾಗಬಹುದು.
ಈ ರಾಸಾಯನಿಕವು ಬಳಸಬಹುದಾದ ಮಿತಿಗಿಂತ 47 ಪಟ್ಟು ಹೆಚ್ಚಿನದ್ದಾಗಿದೆ ಎಂದು ಅಧ್ಯಯನ ಹೇಳುತ್ತದೆ