ರಿಯಾದ್: ಸೌದಿ ಅರೇಬಿಯಾಕ್ಕೆ ಸಂದರ್ಶನ ವೀಸಾ ಪಡೆಯಲು ಶುಲ್ಕ ಕಡಿತ ಗೊಳಿಸಿದ ದೇಶಗಳ ಪಟ್ಟಿಯನ್ನು ಸೌದಿ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದೆ. ವೀಸಾ ಶುಲ್ಕ ಕಡಿತ ಗೊಳಿಸlಪಟ್ಟ ದೇಶಗಳ ಪಟ್ಟಿಯಲ್ಲಿ ಭಾರತವೂ ಒಳಗೊಂಡಿದೆ.
ಭಾರತೀಯರಿಗೆ 2000 ರಿಯಾಲ್ ವೀಸಾ ದರವಿದ್ದು, ಈ ತಿಂಗಳ ಆರಂಭದಲ್ಲಿ ಅದು 305 ರಿಯಾಲ್ ಆಗಿ ಕಡಿತ ಗೊಳಿಸಲಾಗಿತ್ತು. ಈ ಕುರಿತು ಮುಂಬೈ ಟ್ರಾವೆಲ್ ಏಜೆನ್ಸಿಗಳಿಗೆ ಭಾರತೀಯ ಸೌದಿ ರಾಜತಾಂತ್ರಿಕ ಕಾರ್ಯಾಲಯ ಮಾಹಿತಿ ನೀಡಿತ್ತು.ಆದರೆ ಈ ಕುರಿತು ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯದ ಅಧಿಕೃತ ಪ್ರಕಟಣೆಯು ಈಗಷ್ಟೇ ಹೊರಬಂದಿದೆ.
ಈ ಪ್ರಕಾರ ಭಾರತ ಸೇರಿದಂತೆ ರೊಮೇನಿಯಾ, ಇಂಡೋನೇಷ್ಯಾ, ಕ್ರೊಯೇಷಿಯಾ, ಐರ್ಲೆಂಡ್, ಬಲ್ಗೇರಿಯಾ, ಸೈಪ್ರಸ್ ಮತ್ತು ರಷ್ಯಾ ಸೇರಿದಂತೆ 20 ರಾಷ್ಟ್ರಗಳ ನಾಗರಿಕರಿಗೆ ವೀಸಾ ದರದಲ್ಲಿ ರಿಯಾಯ್ತಿ ಲಭಿಸಲಿದೆ.ರಷ್ಯನ್ ಪ್ರಜೆಗಳಿಗೆ 790 ರಿಯಾಲ್, ಆಸ್ಟ್ರೇಲಿಯಾದವರಿಗೆ 506 ರಿಯಾಲ್ ಆಗಿದೆ ಈಗಿನ ದರ.
ಸೌದಿ ಅರೇಬಿಯಾ ಕೆ ಭಾರತದಿಂದ ಅತೀ ಹೆಚ್ಚು ಸಂದರ್ಶಕರು ಆಗಮಿಸುತ್ತಾರೆ. ಆದ್ದರಿಂದಲೇ ಸೌದಿಯಲ್ಲಿ ಉದ್ಯೋಗದಲ್ಲಿರುವ ಭಾರತೀಯರ ಕುಟಂಬಕ್ಕೆ ಸೌದಿ ಸಂದರ್ಶನಕ್ಕೆ ಹೆಚ್ಚು ಅವಕಾಶ ಲಭಿಸಲಿದೆ ಎಂದು ಅಂದಾಜಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ