ರಿಯಾದ್: ಸೌದಿ ಅರೇಬಿಯಾ(Saudi Arabia) ದಿಂದ ರಜೆಯ ಮೇಲೆ ತೆರಳಿರುವ ವಲಸಿಗರಿಗೆ, ಮರು ಪ್ರವೇಶ ವೀಸಾ(Re Entry Visa) ವಿಸ್ತರಣೆ ಶುಲ್ಕವನ್ನು ದ್ವಿಗುಣಗೊಳಿಸಿದೆ. ನಿವಾಸ ವೀಸಾ(Iqama) ಹೊಂದಿರುವವರು ಈಗ ವಿದೇಶದಲ್ಲಿ ತಮ್ಮ ಮರು-ಪ್ರವೇಶದ ಅವಧಿಯನ್ನು ವಿಸ್ತರಿಸಲು ದುಪ್ಪಟ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಪರಿಷ್ಕೃತ ದರಗಳಿಗೆ ಸೌದಿ ಆಡಳಿತಾಧಿಕಾರಿ(King Salman) ಅನುಮೋದನೆ ನೀಡಿದ್ದಾರೆ.
ಪ್ರಸ್ತುತ ಮರುಪ್ರವೇಶ ಶುಲ್ಕ ಎರಡು ತಿಂಗಳಿಗೆ 200 ರಿಯಾಲ್ಗಳು ಮತ್ತು ಪ್ರತಿ ಹೆಚ್ಚುವರಿ ತಿಂಗಳಿಗೆ 100 ರಿಯಾಲ್ಗಳು. ದೇಶದ ಹೊರಗಿದ್ದರೆ, ಮರು-ಪ್ರವೇಶದ ಅವಧಿಯನ್ನು ವಿಸ್ತರಿಸಲು ಮಾಸಿಕ ಶುಲ್ಕ 200 ರಿಯಾಲ್ಗಳಿಗೆ ಹೆಚ್ಚಿಸಲಾಗುತ್ತದೆ.
ಪ್ರಸ್ತುತ, ಬಹು ಮರುಪ್ರವೇಶ ವೀಸಾ (Multiple Entry Visa) ಶುಲ್ಕ ಮೂರು ತಿಂಗಳಿಗೆ 500 ರಿಯಾಲ್ಗಳು ಮತ್ತು ಪ್ರತಿ ಹೆಚ್ಚುವರಿ ತಿಂಗಳಿಗೆ 200 ರಿಯಾಲ್ಗಳು.ದೇಶದ ಹೊರಗಿದ್ದರೆ, ಪ್ರತಿ ತಿಂಗಳಿಗೆ ವಿಸ್ತರಣಾ ಶುಲ್ಕವು ಪ್ರಸ್ತುತ ದರಕ್ಕಿಂತ ಎರಡು ಪಟ್ಟು(400 ರಿಯಾಲ್ಗಳು) ಇರುತ್ತದೆ.
ಇಕಾಮಾ ಮಾನ್ಯವಾಗಿದ್ದರೆ ಮಾತ್ರ ಮರು ಪ್ರವೇಶ ವೀಸಾವನ್ನು ವಿಸ್ತರಿಸಲು ಸಾಧ್ಯ. ವಿದೇಶದಲ್ಲಿದ್ದು ಇಖಾಮಾ ನವೀಕರಣೆಗೂ ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ. ಇದು ಅವಲಂಬಿತ ವೀಸಾ ಹೊಂದಿರುವವರ ಮರುಪ್ರವೇಶ ವೀಸಾಗಳಿಗೂ ಅನ್ವಯಿಸುತ್ತದೆ. ಅವಲಂಬಿತರು ದೇಶದ ಹೊರಗಿದ್ದರೆ, ಗೃಹ ಸಚಿವಾಲಯದ ಎಲೆಕ್ಟ್ರಾನಿಕ್ ಪೋರ್ಟಲ್ ಮೂಲಕ ಇಖಾಮಾ ನವೀಕರಣದ ಶುಲ್ಕವನ್ನು ದ್ವಿಗುಣಗೊಳಿಸಲಾಗುತ್ತದೆ. ಪರಿಷ್ಕೃತ ಕಾನೂನಿಗೆ ಆಡಳಿತಗಾರ ಕಿಂಗ್ ಸಲ್ಮಾನ್ ಅನುಮೋದನೆ ನೀಡಿದರು. ಆದೇಶವು ಜಾರಿಗೆ ಬಂದ ನಂತರ ಶುಲ್ಕ ರಚನೆಯು ಬದಲಾಗುತ್ತದೆ.
ಇನ್ನು ಮುಂದೆ ಸ್ವದೇಶಕ್ಕೆ ತೆರಳುವಾಗ ರಜೆಯನ್ನು ಸರಿಯಾಗಿ ನಿರ್ಧರಿಸಿ ಮರು ಪ್ರವೇಶ ಪಡೆದರೆ ಹೆಚ್ಚುವರಿ ಶುಲ್ಕ ಪಾವತಿಸುವುದನ್ನು ತಪ್ಪಿಸಬಹುದು.
















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಮಂಗಳೂರಿನ MRPL ಘಟಕದಲ್ಲಿ ಭಾರೀ ಸ್ಫೋಟ: ದಟ್ಟ ಹೊಗೆ, ಸುತ್ತಮುತ್ತಲಿನ ಮನೆಗಳಿಗೆ ಹಾನಿ- ಹಲವರಿಗೆ ಗಾಯ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಗಂಟೆಗಟ್ಟಲೆ ರೀಲ್ಸ್ ಸ್ಕ್ರೋಲಿಂಗ್- ದೇಹದ ಮೇಲೆ ಪರಿಣಾಮ!
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ