ಶಾರ್ಜಾ: ಶಾರ್ಜಾದ ಬಹು ಮಹಡಿ ಕಟ್ಟಡದ 13 ನೇ ಮಹಡಿಯಲ್ಲಿ ಕಿಟಕಿಯಲ್ಲಿ ನೇತಾಡುತ್ತಿದ್ದ ಐದು ವರ್ಷದ ಬಾಲಕನನ್ನು ರಕ್ಷಿಸಲು ಸಹಾಯ ಮಾಡಿದ ಕಟ್ಟಡದ ವಾಚ್‌ಮ್ಯಾನ್ ಮತ್ತು ನಿವಾಸಿಯನ್ನು ಶಾರ್ಜಾ ಪೊಲೀಸರು ಗೌರವಿಸಿದರು.
ಶಾರ್ಜಾ ಪೊಲೀಸ್ ಮುಖ್ಯಸ್ಥರು ಮತ್ತು ಇತರ ಉನ್ನತ ಅಧಿಕಾರಿಗಳು ಎಮಿರೇಟ್‌ನಲ್ಲಿ ವಸತಿ ಕಟ್ಟಡದ ಕಾವಲುಗಾರನಾಗಿ ಕೆಲಸ ಮಾಡುವ ನೇಪಾಳ ಮೂಲದ ಮುಹಮ್ಮದ್ ರಹ್ಮತುಲ್ಲಾ ಮತ್ತುಅದೇ ಕಟ್ಟಡದಲ್ಲಿ ವಾಸಿಸುವ ಆದಿಲ್ ಅಬ್ದುಲ್ ಹಫೀಜ್ ಅವರನ್ನು ಸನ್ಮಾನಿಸಿದರು.
ಶಾರ್ಜಾದ ಅಲ್ ತಾವೂನ್ ಪ್ರದೇಶದಲ್ಲಿ ಬುಧವಾರ ಈ ಘಟನೆ ನಡೆದಿದೆ. ಫ್ಲಾಟ್‌ನಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕ ಕಿಟಕಿಯಿಂದ ಹೊರ ಜಿಗಿದಿದ್ದು, ರಸ್ತೆಯಲ್ಲಿ ನಿಂತಿದ್ದ ಅಕ್ಕಪಕ್ಕದ ಕೆಲವರು ಕಿಟಕಿಯಲ್ಲಿ ಮಗು ನೇತಾಡುತ್ತಿರುವುದನ್ನು ಕಂಡಿದ್ದಾರೆ. ಗಾಬರಿಗೊಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಮಗುವನ್ನು ರಕ್ಷಿಸಲು ಯತ್ನಿಸಿದ್ದಾಗಿ ಅದೇ ಕಟ್ಟಡದ ನಿವಾಸಿ ಆದಿಲ್ ಅಬ್ದುಲ್ ಹಫೀಜ್ ಅವರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದರು.
ಅಪಾಯದ ಅರಿವಾದ ಕೂಡಲೇ ವಾಚ್‌ಮನ್‌ಗೆ ಮಾಹಿತಿ ನೀಡಿ ಅವರ ಜೊತೆಗೆ ಕಟ್ಟಡದ 13ನೇ ಮಹಡಿಗೆ ಧಾವಿಸಿದ್ದಾರೆ. ಫ್ಲಾಟ್‌ನ ಬಾಗಿಲು ತಟ್ಟಿದರು ಆದರೆ ಯಾರೂ ಬಾಗಿಲು ತೆರೆಯಲಿಲ್ಲ. ಇದೇ ವೇಳೆ ಮಗುವಿನ ತಂದೆಗೆ ದೂರವಾಣಿ ಕರೆ ಮಾಡಿ ಬಾಗಿಲು ಒಡೆದು ಮಗುವನ್ನು ರಕ್ಷಿಸಬೇಕೆಂದು ತಿಳಿಸಿದರು. ಇಬ್ಬರು ಬಾಗಿಲು ಮುರಿದು ಒಳ ಪ್ರವೇಶಿಸಿ ಕಿಟಕಿಯ ಒಂದು ಬದಿಯಲ್ಲಿ ನೇತಾಡುತ್ತಿದ್ದ ಮಗುವಿನ ಕೈ ಹಿಡಿದುಕೊಂಡು ಮೇಲೆತ್ತಿದ್ದಾರೆ. ಮಗು ಕಾಲಿನ ಹೆಬ್ಬೆರಳನ್ನು ಮಾತ್ರ ನೆಲಕ್ಕೆ ತಾಗಿಸಿ ಕಷ್ಟಪಟ್ಟು ನಿಂತಿದೆ ಎಂದರು.
ಮಗುವನ್ನು ರಕ್ಷಿಸಿದ ಕೆಲವೇ ಸೆಕೆಂಡುಗಳಲ್ಲಿ, ಆರು ಪೊಲೀಸ್ ಗಸ್ತು ತಂಡಗಳು ಮತ್ತು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ತಲುಪಿದವು. ಅದೇ ವೇಳೆ ಮಗುವಿನ ತಾಯಿ ಕೂಡ ಆಗಮಿಸಿದರು. ಬಳಿಕ ಮಗುವನ್ನು ರಕ್ಷಿಸಿದವರು ಠಾಣೆಗೆ ಬಂದು ಹೇಳಿಕೆ ನೀಡಿದ್ದಾರೆ. ಮಗು ಕೆಳಗೆ ಬೀಳಬಹುದೆಂಬ ಭಯದಿಂದ ಅಕ್ಕಪಕ್ಕದ ಮನೆಯವರಿಗೆ ಕಂಬಳಿ ಮತ್ತು ಹಾಸಿಗೆಗಳನ್ನು ನೆಲಕ್ಕೆ ಹರಡುವಂತೆ ಹೇಳಲಾಗಿದೆ ಎಂದು ಕಟ್ಟಡದ ಕಾವಲುಗಾರ ಹೇಳಿದರು.
ಬಹುಮಹಡಿ ಕಟ್ಟಡದ ಕಿಟಕಿಯಲ್ಲಿ ಮಗು ಸಿಲುಕಿಕೊಂಡಿದೆ ಎಂಬ ಮಾಹಿತಿ ಬಂದ ತಕ್ಷಣ ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದರು, ಆದರೆ ಅವರು ಅಲ್ಲಿಗೆ ಬರುವಷ್ಟರಲ್ಲಿ ಮಗುವನ್ನು ರಕ್ಷಿಸಲಾಗಿತ್ತು ಎಂದು ಶಾರ್ಜಾ ಸಿವಿಲ್ ಡಿಫೆನ್ಸ್ ಮಾಹಿತಿ ನೀಡಿದ್ದಾರೆ.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ