janadhvani

Kannada Online News Paper

ಉಮ್ರಾ ಯಾತ್ರಾರ್ಥಿಗಳಿಗೆ ‘ಜಬಲ್ ನೂರ್’ಸಂದರ್ಶನಕ್ಕೆ ತಡೆ

ರಿಯಾದ್: ಉಮ್ರಾ ಯಾತ್ರಾರ್ಥಿಗಳ ಪ್ಯಾಕೇಜ್ ನಲ್ಲಿ ಐತಿಹಾಸಿಕ ಜಬಲ್ ನೂರ್ ಭೇಟಿ ಅಳವಡಿಸಬಾರದು ಎಂದು ಹಜ್ ಉಮ್ರಾ ಸಚಿವಾಲಯ ತಿಳಿಸಿದೆ.
ಉಮ್ರಾ ಸರ್ವಿಸ್ ಏಜೆನ್ಸಿಗಳಿಗೆ ಕಳುಹಿಸಲಾದ ಕರಡು ಪ್ರತಿಯಲ್ಲಿ ಈ ವಿಷಯ ಸ್ಪಷ್ಟಪಡಿಸಲಾಗಿದೆ.

ಜಬಲ್ ನೂರ್ ಪರ್ವತವು ಮಸ್ಜಿದುಲ್ ಹರಮ್ ನಿಂದ 3 ಕಿ.ಮೀ ದೂರದಲ್ಲಿದೆ.
ಪ್ರವಾದಿ ಮುಹಮ್ಮದ್ (ಸ.ಅ) ಅವರು ಅಲ್ಲಾಹನ ಸಂದೇಶವನ್ನು(ಖುರ್ ಆನ್)ಪ್ರಥಮವಾಗಿ ಜಬಲ್ ನೂರಿನ ಹಿರಾ ಗುಹೆಯಲ್ಲಿ ಸ್ವೀಕರಿಸಿದ್ದರು ಎಂಬುದು ಇತಿಹಾಸವಾಗಿದೆ. ಆದರೆ, ಯಾತ್ರಿಕರು ಗುಹೆಯನ್ನು ಭೇಟಿ ಮಾಡಿದಾಗ ಇಸ್ಲಾಮಿನ ನಂಬಿಕೆಗಳಿಗೆ ವಿರುದ್ಧವಾಗಿ ನಡೆಯವ ಕಾರಣಕ್ಕಾಗಿ ಇಲಾಖೆಯು ಜಬಲ್ ನೂರ್ ಭೇಟಿಯನ್ನು ತಡೆಯುವಂತೆ ಕೇಳಿಕೊಂಡಿದೆ ಎನ್ನಲಾಗಿದೆ.

ಬೆಟ್ಟದ ಮೇಲಿನ ಹಿರಾ ಗುಹೆಯು 3.5 ಮೀಟರ್ ಉದ್ದ ಮತ್ತು 1.5 ಮೀ ಅಗಲವಿದೆ.
ಪರ್ವತವನ್ನು ಏರುವ ಸಮಯದಲ್ಲಿ ಯಾತ್ರಿಕರು ಬಿದ್ದು ಮರಣ ಹೊಂದಿದ ಮತ್ತು ಗಾಯಗೊಂಡ ಸಂದರ್ಭಗಳು ಕೂಡ ಬಹಳಷ್ಟಿವೆ.

ಮಕ್ಕಾ ಗವರ್ನೇಟ್ ಮತ್ತು ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯದ ಶಿಫಾರಸುಗಳ ಪ್ರಕಾರ, ಉಮ್ರಾ ಸೇವಾ ಸಂಸ್ಥೆಗಳಿಗೆ ಸರ್ಕ್ಯುಲರ್ ನೀಡಲಾಗಿದೆ ಎಂದು ಹಜ್ ಉಮ್ರಾ ಸಚಿವಾಲಯದ ಕಾರ್ಯದರ್ಶಿ ಅಬ್ದುಲ್ ಅಝೀಝ್ ಬಿನ್ ಅಬ್ದುರ್ರಹೀಂ ವಸ್ಸಾನ್ ಹೇಳಿದರು.

ತಾಯಿಫ್‌ನ ಕೆಲವು ಐತಿಹಾಸಿಕ ಸ್ಥಳಗಳಿಗೂ ಹಜ್ ಉಮ್ರಾ ಯಾತ್ರಾರ್ಥಿಗಳಿಗೆ ನಿಷೇಧ

error: Content is protected !! Not allowed copy content from janadhvani.com