ಪ್ರವಾದಿ ನಿಂದನೆಗೈದ ನೂಪುರ್ ಶರ್ಮಾ ರನ್ನು ಬೆಂಬಲಿಸಿ ಹೇಳಿಕೆ ನೀಡಿದ ಕನ್ನಯ್ಯ ಲಾಲ್ ನನ್ನು ಇತ್ತೀಚೆಗೆ ರಾಜಸ್ತಾನದ ಉದಯಪುರದಲ್ಲಿ ಹತ್ಯೆ ಮಾಡಿದ ಆರೋಪಿಗಳು ಸ್ಥಳೀಯ ಬೀಜೇಪಿ ಅಲ್ಪ ಸಂಖ್ಯಾತ ಮೋರ್ಚಾದ ಸದಸ್ಯರು ಆಗಿದ್ದು,ಅಂತಹ ಖಂಡನಾರ್ಹ ಕೃತ್ಯ ವೆಸಗಿದ ವ್ಯಕ್ತಿಗಳಿಗೂ ಅಥವಾ ಮುಸ್ಲಿಮ್ ನಾಮಧಾರಿ ಹೆಸರನ್ನು ಒಳಗೊಂಡ ವ್ಯಕ್ತಿಗಳಿಗೂ ಮುಸ್ಲಿಮರಿಗೂ ಯಾವುದೇ ಸಂಭಂದ ವಿಲ್ಲ. ಇಸ್ಲಾಮ್ ಧರ್ಮ ಇಂತಹ ನಾಮಧಾರಿ ಮುಸ್ಲಿಮರನ್ನು ಒಳಗೊಂಡಿಲ್ಲ.
ಈ ಕೃತ್ಯಕ್ಕೆ ಸಂಬಂಧಿಸಿದಂತೆ ದೇಶದ ಮುಸ್ಲಿಮರ ವಿರುದ್ಧ ಆರೋಪ ಹೊರಿಸಿ, ವಿದ್ವೇಶ ಸೃಷ್ಟಿಸ ಬಾರದು. ಕನ್ನಯ್ಯ ಲಾಲ್ ಕೊಲೆಯಲ್ಲಿ ಬೀಜೇಪಿಯ ವ್ಯವಸ್ಥಿತ ಗೂಡಾ ಲೋಚನೆ ಅಡಗಿದೆ. ನೂಪುರ್ ಶರ್ಮಾ ಹೇಳಿಕೆ, ಕನ್ನಯ್ಯ ಲಾಲ್ ಹೇಳಿಕೆ ಮತ್ತು ಆನಂತರದ ರಿಯಾಝ್ ಅಕ್ತರಿ ಯನ್ನು ರಾಜಸ್ತಾನದ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ಬಳಸಿ ಇಡೀ ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸುವ ಷಡ್ಯಂತ್ರ ರೂಪಿಸಿದೆ. ಈ ಸರ್ವ ಕೃತ್ಯಗಳು ಏಕ ಪಕ್ಷೀಯ ವಾಗಿದೆ. ಇಲ್ಲಿನ ಸಂಗ್ಹೀ ಮಾದ್ಯಮಗಳು ಈ ಕೃತ್ಯದ ಹೊಣೆಯನ್ನು ದೇಶದ ಮುಸ್ಲಿಮರ ಮೇಲೆ ಹೊರಿಸಿದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಬೇಕಾಗುತ್ತದೆ.
ಕೃತ್ಯದ ದುಷ್ಕರ್ಮಿಗಳನ್ನು ಕಠಿಣ ಕಾನೂನು ಕ್ರಮ ಕ್ಕೆ ಒಳಪಡಿಸಿ ಶಿಕ್ಷಿಸಿ. ಅದರ ಬದಲಾಗಿ ದೇಶದ .ಮುಸ್ಲಿಮರ ಮೇಲೆ, ಇಸ್ಲಾಮ್ ಧರ್ಮದ ಮೇಲೆ, ಈ ದೇಶದ ನೈತಿಕ ಪಾಠ ಕೇಂದ್ರವಾದ ಮದರಸ ಶಿಕ್ಷಣ ವ್ಯವಸ್ಥೆ ಮೇಲೆ ಹರಿಹಾಯ್ದರೆ ಅದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ. ಈ ಬಗ್ಗೆ ಸಂಘಟನೆಗಳು ಖುದ್ದು ಮನವರಿಕೆ ಹೊಂದುವುದು ಒಳಿತು. ಮಂಗಳೂರಿನಲ್ಲಿ ನ ಕೆಲವು ಧರ್ಮಗಳ ಗುತ್ತಿಗೆ ಪಡೆದ ಸ್ಥಳೀಯ ನಾಯಕರು ಇತ್ತೀಚೆಗೆ ಮದರಸ ಬಗ್ಗೆಗಿನ ತಮ್ಮ ಹೇಳಿಕೆಯನ್ನು ಉದುರುವಾಗ ನಾಲಗೆ ಹದ್ದು ಬಸ್ತಿನಲ್ಲಿ ಇಟ್ಟು ಮಾತನಾಡುವುದು ಒಳಿತು. ಪ್ರಚೋದಿತ ಕೃತ್ಯಗಳನ್ನು ತಾವೇ ಹೆಣೆದು ಮುಸ್ಲಿಮರ ತಲೆ ಮೇಲೆ ಕಟ್ಟುವಾಗ ಮುಂಜಾಗ್ರತೆ ವಹಿಸುವುದು ಒಳಿತು.
ಮಾನ್ಯ ಸುಪ್ರೀಮ್ ಕೋರ್ಟ್ ಸಲಹೆಯಂತೆ ನೂಪುರ್ ಶರ್ಮಾ ಪ್ರವಾದಿ ನಿಂದನೆಯ ವಿಷಯದಲ್ಲಿ ದೇಶದ ಜನತೆಯ ಕ್ಷಮೆ ಯಾಚಿಸಲಿ. ಈ ಬಗ್ಗೆ ಇಲ್ಲಿನ ಸರ್ವ ಸಂಸ್ಕೃತಿ ಸಂಘಟನೆಗಳು ನೂಪುರ್ ಶರ್ಮಾ ಳಿಗೆ ದೇಶದ ಜನತೆಯ ಕ್ಷಮೆ ಯಾಚಿಸಲು ಸಲಹೆ ನೀಡಲಿ. ಅಂದು ಹಿಜಾಬ್ ಇಸ್ಲಾಮಿನಲ್ಲಿ ಕಡ್ಡಾಯವಲ್ಲ ಎಂಬ ಕರ್ನಾಟಕ ಉಚ್ಛ ನ್ಯಾಯಾಲಯದ ತೀರ್ಪನ್ನು ವಿಮರ್ಶಿಸಿ ಮುಸ್ಲಿಮರು ಸ್ವಯಂ ಪ್ರೇರಿತ ಶಾಂತಿಯುತ ವ್ಯವಹಾರ ಸ್ಥಗಿತ ಗೊಳಿಸಿ ಒಂದು ದಿವಸ ತಮ್ಮ ಧಾರ್ಮಿಕ ಪದ್ಧತಿಗೆ ಸಂಭವಿಸಿದ ನೋವನ್ನು ಪ್ರಕಟ ಪಡಿಸಿದಾಗ,ನ್ಯಾಯಾಲಯದ ತೀರ್ಪನ್ನು ಮುಸ್ಲಿಮರು ಗೌರವಿಸುವುದಿಲ್ಲ ಎಂಬಿತ್ಯಾದಿಯಾಗಿ ಮಾಧ್ಯಮಗಳಲ್ಲಿ ಬೊಬ್ಬೆ ಹಾಕಿದ ವ್ಯಕ್ತಿಗಳು ನಾಯಕರು ಪ್ರಸ್ತುತ ಸುಪ್ರೀಮ್ ಕೋರ್ಟಿನ ಸಲಹೆಯನ್ನು ಪಾಲಿಸಲು ನೂಪುರ್ ಶರ್ಮಾಳಿಗೆ ಜನರ ಕ್ಷಮೆ ಯಾಚಿಸಲು ಸಲಹೆ ನೀಡಲಿ.
ಕೆ.ಅಶ್ರಫ್.
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ