janadhvani

Kannada Online News Paper

SჄS ಕೆರೆಬಳಿ ಬ್ರಾಂಚ್ ವತಿಯಿಂದ ಡಾಕ್ಟರ್ಸ್ ಡೇ ಆಚರಣೆ

ಜುಲೈ 1 ಡಾಕ್ಟರ್ಸ್ ಡೇ ಅಂಗವಾಗಿ ಎಸ್.ವೈ.ಎಸ್ ಕೆರೆಬಳಿ ಬ್ರಾಂಚ್ ವತಿಯಿಂದ ಬೆಳಿಗ್ಗೆ 10:30 ಗಂಟೆಗೆ ಹಯಾತುಲ್ ಇಸ್ಲಾಂ ಮದರಸ ಹಾಲ್ ಕೆರೆಬಳಿಯಲ್ಲಿ ಎಸ್.ವೈ.ಎಸ್ ಕೆರೆಬಳಿ ಬ್ರಾಂಚ್ ಅಧ್ಯಕ್ಷರಾದ ಪಿ.ಹೆಚ್ ಉಸ್ಮಾನ್ ರವರ ಅಧ್ಯಕ್ಷತೆಯಲ್ಲಿ ವೈದ್ಯರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಎಂ.ಜೆ.ಎಂ ಕೆರೆಬಳಿ ಖತೀಬ್ ಜಿ.ಎಸ್ ಅನ್ಸಾರ್ ಸಖಾಫಿ ಗಣ್ಯರನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಎಸ್ಸೆಸ್ಸೆಫ್ ಮೂಡಬಿದ್ರೆ ಡಿವಿಷನ್ ಕ್ಯೂ.ಡಿ ಕನ್ವಿನರ್ ಅಝಿಮ್ ಮುಸ್ಲಿಯಾರ್ ಕುಪ್ಪೆಪದವು ಸಂದೇಶ ಭಾಷಣ ಮಾಡಿದರು. ಸಂಗಬೆಟ್ಟು ಗ್ರಾಮ‌ ಪಂಚಾಯತ್ ಅಧ್ಯಕ್ಷರಾದ ಸತೀಶ್ ಪುಜಾರಿ ಸಂದೇಶ ಭಾಷಣ ಮಾಡಿದರು, ಪ್ರಾಥಮಿಕ ಆರೋಗ್ಯ ಕೇಂದ್ರ ರಾಯಿಯ ವೈದ್ಯಾಧಿಕಾರಿ ಡಾ. ಮನೋನ್ ಮನಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಗಬೆಟ್ಟು ಗ್ರಾಮ‌ ಪಂಚಾಯತ್ ಸದಸ್ಯರಾದ ಉದಯ ಹಾಗೂ ಸುರೇಶ್ ಕುಲಾಲ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಜ್ಯೋತಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಗೀತಾ, ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಮತಿ ಆರತಿ, ಆಶಾ ಕಾರ್ಯಕರ್ತೆರಾದ ಶ್ರೀಮತಿ ಸೌಮ್ಯ, ಶ್ರೀಮತಿ ಶೋಭಾ, ಶ್ರೀಮತಿ ಸೀತಾ, ಶ್ರೀಮತಿ ಲಿಡಿಯಾ, ಶ್ರೀಮತಿ ಭಾನುಮತಿ, ಎಸ್.ವೈ.ಎಸ್ ಕೆರೆಬಳಿ ಬ್ರಾಂಚ್ ಕೋಶಾಧಿಕಾರಿ ಎಸ್.ಎಮ್ ಹುಸೈನ್, ಉಪಾಧ್ಯಕ್ಷರಾದ ಅಬ್ದುಲ್ ಕರೀಂ, ಸಂಘಟನಾ ಕಾರ್ಯದರ್ಶಿ ಉಸ್ಮಾನ್.ಕೆ, ಇಸಾಬಾ ಕಾರ್ಯದರ್ಶಿ ಫಾರೂಖ್ ಡ್ರೈವರ್, ಸದಸ್ಯರಾದ ದಾವೂದ್ ಮುಸ್ಲಿಯಾರ್, ಇಕ್ಬಾಲ್ ಹುಸೈನ್ ಮುಂತಾದ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎಸ್.ವೈ.ಎಸ್ ಕೆರೆಬಳಿ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ (ಉಳ್ಳಾಲ) ನಿರೂಪಿಸಿದರು.