janadhvani

Kannada Online News Paper

ರಾಜ್ಯದಲ್ಲಿ ಸದ್ಯಕ್ಕೆ ಟಫ್ ರೂಲ್ಸ್ ಇಲ್ಲ-ಸಿಎಂ: ಮುಸ್ಲಿಮರ ಹಬ್ಬವನ್ನು ಟಾರ್ಗೆಟ್ ಮಾಡಿದ್ದ ಮಾಧ್ಯಮಗಳಿಗೆ ನಿರಾಸೆ

ಅನವಶ್ಯಕವಾಗಿ ಯಾವುದೇ ನಿರ್ಬಂಧ ಹೇರಿಕೆ ಬೇಡ. ಅಗತ್ಯವಿರುವೆಡೆ ನಿರ್ಬಂಧ ಹೇರಿಕೆ ಅಗತ್ಯ ಎಂದು ಮೋದಿ ತಿಳಿಸಿದ್ದಾರೆ.

ಬೆಂಗಳೂರು,ಏ.27: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿ ಹಾಗೂ ಪ್ರಮುಖ ಸಚಿವರ ಜೊತೆ ಮಹತ್ವದ ಮಾತುಕತೆ ನಡೆಸಿದರು.

ಸಭೆ ಬಳಿಕ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ.. ರಾಜ್ಯದಲ್ಲಿ ಸದ್ಯಕ್ಕೆ ಟಫ್ ರೂಲ್ಸ್ ಜಾರಿಯಿಲ್ಲ. ಅನವಶ್ಯಕವಾಗಿ ಯಾವುದೇ ನಿರ್ಬಂಧ ಹೇರಿಕೆ ಬೇಡ. ಅಗತ್ಯವಿರುವೆಡೆ ನಿರ್ಬಂಧ ಹೇರಿಕೆ ಅಗತ್ಯ ಎಂದು ಮೋದಿ ತಿಳಿಸಿದ್ದಾರೆ. ಲಸಿಕೆ ನೀಡಲು ಶಾಲೆಗಳಲ್ಲಿ ಅಭಿಯಾನ ಮಾಡುತ್ತೇವೆ. ಟೆಸ್ಟ್, ಟ್ರೀಟ್, ಟ್ರ್ಯಾಕ್‌, ಲಸಿಕೆ ಅನುಸರಿಸಲು ಹೇಳಿದ್ದಾರೆ ಎಂದು ತಿಳಿಸಿದರು.

ನಾಲ್ಕು ಸೂತ್ರಗಳನ್ನು ಅನುಸರಿಸಲು ಮೋದಿ ಹೇಳಿದ್ದಾರೆ. ಕೋವಿಡ್‌ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಹೇಳಿದ್ದಾರೆ. ವ್ಯಾಕ್ಸಿನೇಷನ್ ವೇಗ ಹೆಚ್ಚಿಸಲು ಸೂಚನೆ ನೀಡಿದ್ದಾರೆ. ಸಾರ್ವಜನಿಕರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಜೀವನ ನಡೆಸಬೇಕು. ಏರ್‌ಪೋರ್ಟ್‌ಗಳಲ್ಲಿ ಟೆಸ್ಟಿಂಗ್‌ ಹೆಚ್ಚಳ ಮಾಡುತ್ತೇವೆ ಎಂದು ತಿಳಿಸಿದರು.

ರಾಜ್ಯದ ಕೆಲವು ಮಾಧ್ಯಮಗಳು ಮುಸ್ಲಿಮರ ಹಬ್ಬವನ್ನು ಟಾರ್ಗೆಟ್ ಮಾಡಿ ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣವನ್ನು ಜಾರಿಗೆ ತರುತ್ತಿದೆ ಎಂದು ಜನರು ಭಾವಿಸುವ ರೂಪದಲ್ಲಿ ಪ್ರಚಾರ ಪಡಿಸಿ, ಮುಸ್ಲಿಮರ ರಂಜಾನ್ ಹಬ್ಬಾಚರಣೆಗೆ ಮಸೀದಿಗಳಲ್ಲಿ ಅವಕಾಶವಿಲ್ಲ ಎಂಬಿತ್ಯಾದಿ ಊಹಾಪೋಹಗಳನ್ನು ಬಿತ್ತರಿಸಿ ವಿಕೃತ ಆನಂದ ಪಡುತ್ತಿದ್ದ ಮತಾಂಧ ಟಿವಿ ಮಾಧ್ಯಮದವರಿಗೆ ಸಿ.ಎಂ. ಹೇಳಿಕೆಯು ನಿರಾಸೆಯನ್ನು ತಂದಿದೆ.