janadhvani

Kannada Online News Paper

ಸಂಪಾಜೆ: CWF ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

ಕಮ್ಯೂನಿಟಿ ವೆಲ್ ಫೇರ್ ಫೌಂಡೇಷನ್(ಸಿಡಬ್ಲ್ಯೂಎಫ್)
ಸಂಪಾಜೆ ವತಿಯಿಂದ 2022 ನೇ ಸಾಲಿನ ಪದವಿ, ಡಿಪ್ಲೊಮಾ ಮತ್ತು ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ದಿನಾಂಕ 22-04-2022 ರಂದು ಕಲ್ಲುಗುಂಡಿಯ ಎಂ ಜೆ ಎಂ ಆವರಣದಲ್ಲಿ ನಡೆಯಿತು.

ಸಂಸ್ಥೆಯ ಅಧ್ಯಕ್ಷರಾದ ನಿಝಾಮ್ ಕಡೆಪಾಲ ಇವರು ವಿದ್ಯಾರ್ಥಿವೇತನದ ಚೆಕ್ ವಿತರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ಶುಭಹಾರೈಸಿದರು. ಕಾರ್ಯಕ್ರಮದ ಸಹಕಾರಕ್ಕಾಗಿ ಹಾರಿಸ್ ಸಿ ಕೆ ಯವರಿಗೆ ಧನ್ಯವಾದ ಸಮರ್ಪಿಸಲಾಯಿತು.

ಸಂಸ್ಥೆಯ ಸ್ಥಾಪಕರಾದ ಮುಹಮ್ಮದ್ ಗೌಸ್, ಸದಸ್ಯರಾದ ಹಾಶಿಂ ಹಂಝ, ಮುಹಮ್ಮದ್ ಹಿಶಾಮ್, ಅಬ್ದುಲ್ ಅಫೀದ್, ಮುಹಮ್ಮದ್ ತಾಶೀರ್, ಮುಹಮ್ಮದ್ ಶಕೀಲ್ ಉಪಸ್ಥಿತರಿದ್ದರು.