ದಮ್ಮಾಮ್ ಸೌತ್ ಸೆಕ್ಟರಿನ ಇಫ್ತಾರ್ ಹಾಗು ಅಭಿನಂದನಾ ಕಾರ್ಯಕ್ರಮ ಖತೀಫ್ ಇಸ್ಥಿರಾದಲ್ಲಿ ತಾ 8.4.2022 ಶುಕ್ರವಾರ ನಡೆಯಿತು. ನೂರಾರು ಜನರು ಭಾಗವಹಿಸಿ ಯಶಸ್ವಿಯಾಗಿ ನಡೆಯುವಂತೆ ಮಾಡಿದರು.
ಮುಖ್ಯ ಅಥಿತಿಗಳಾಗಿ ರಾಷ್ಟ್ರೀಯ ಅಧ್ಯಕ್ಶರಾದ ಯೂಸುಫ್ ಸಖಾಫಿ ಬೈತಾರ್, ಝೋನ್ ಅಧ್ಯಕ್ಷರಾದ ಫಾರೂಕ್ ಮುಸ್ಲಿಯಾರ್ ಕುಪ್ಪೆಟ್ಟಿ, ಝೋನ್ ಕಾರ್ಯದರ್ಶಿಯಾದ ತಮೀಮ್ ಕುಳೂರ್,ಝೋನ್ ಕೋಶಾಧಿಕಾರಿಯಾದ ಇಬ್ರಾಹಿಂ ವಳವೂರ್, ರಿಲೀಫ್ ಚೇರ್ಮೆನ್ ಭಾಷಾ ಗಂಗಾವಳಿ ಭಾಗವಹಿಸಿದ್ದರು.

ಹೊಸ ಯೂನಿಟ್ ಖತೀಫ್ ನ ಕಾರ್ಯಕರ್ತರೆಲ್ಲರೂ ಭಾಗವಹಿಸಿ ಇಫ್ತಾರಿಗೆ ಬೇಕಾದ ಸಹಾಯ ಸಹಕಾರವನ್ನು ನೀಡಿದರು. ಪ್ರತ್ಯೇಕವಾಗಿ ಸಯ್ಯದ್ ಮೀರಾ ಸಾಬ್, ಶೌಕತ್ ಅಲಿ ರವರ ಸೇವೆ ಪ್ರಶಂಸನೀಯ.
ಇಫ್ತಾರಿಗೂ ಮೊದಲು ರಾಷ್ಟ್ರೀಯ ಅಧ್ಯಕ್ಷರು KCF ನ ಕಾರ್ಯ ಚಟುವಟಿಕೆಗಳ ಬಗ್ಗೆ ಹ್ರಸ್ವವಾಗಿ ವಿವರಿಸಿದರು.
ಮಗ್ರಿಬ್ ನಮಾಝಿನ ನಂತರ ನಡೆದ ಅಭಿನಂದನಾ ಸಮಾರಂಭಕ್ಕೆ ಬಹು ಸಲೀಂ ಮದನಿ ಸ್ವಾಗತ ಕೋರಿದರು.D.P ಬೈತಾರ್ ಸಖಾಫಿ ಉದ್ಘಾಟಿಸಿದರು. ನಂತರ ನೂತನ ದಮ್ಮಾಮ್ ಝೋನ್ ಸಮಿತಿಗೆ ಆಯ್ಕೆಯಾದ ಪ್ರದಾನ ಮೂರು ಪದಾಧಿಕಾರಿಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಅಧ್ಯಕ್ಷರಿಗೆ D.P. ಉಸ್ತಾದ್, ಕಾರ್ಯದರ್ಶಿ ಯವರಿಗೆ ಮೀರಾ ಸಾಬ್, ಕೋಶಾಧಿಕಾರಿಗೆ ಕಾಸಿಂ ಹಾಜಿ ಯವರು ಶಾಲು ಹೊದಿಸಿದರು. ಹಾಗೆಯೆ ಭಾಷಾ ಗಂಗಾವಳಿ, ಶೌಕತ್ ಅಲಿ ಯವರಿಗೂ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಝೋನ್ ಅಧ್ಯಕ್ಷರು ಚುಟುಕು ವಾಕ್ಯಗಳಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸಿದರು. ಕಾರ್ಯದರ್ಶಿ ತಮೀಮ್ ಹಾಗು ಕೋಶಾಧಿಕಾರಿ ಇಬ್ರಾಹಿಂ ತಮ್ಮ ಅಶಂಸ ಭಾಷಣದಲ್ಲಿ, ಇನ್ನು ಮುಂದೆಯೂ KCF ಗೆ ಹೆಚ್ಚಿನ ಸಹಕಾರವನ್ನು ಕೋರಿದರು. ಹಾಗೆಯೆ, ಭಾಷಾ ಭಾಯ್, ಸಯ್ಯದ್ ಮೀರಾ ಭಾಯ್, ಶೌಕತ್ ಅಲಿ, ಖತೀಫ್ ಯೂನಿಟ್ ನ ಕಾರ್ಯದರ್ಶಿ ಅಬ್ದುಲ್ ಮಜೀದ್ ಶುಭಾಶಯಗಳನ್ನು ಕೋರಿದರು.
ಝೋನ್ ನೇತಾರ ಅಶ್ರಫ್ ನಾವುಂದ ಕಾರ್ಯಕ್ರಮ ನಿರೂಪಿಸಿದರು. ಜಲಾಲುದ್ದೀನ್ ಬಾ ಹಸನಿ ಧನ್ಯವಾದ ಗೈದರು. ಮುಹಿಯುದ್ದೀನ್ ಝುಹ್ರಿ ಯಾ ಅಕ್ರಮ ಬೈಥ್ ನ್ನು ಬಹಳ ಇಂಪಾಗಿ ಹಾಡಿ ಮನ ಸೂರೆಗೊಂಡರು.







