ಕಾಟಿಪಳ್ಳ, ಎಪ್ರಿಲ್ 01 : “ಸಂವಿಧಾನ, ಧರ್ಮ, ರಾಜಕೀಯ” ಎನ್ನುವ ಧ್ಯೇಯ ವಾಕ್ಯದೊಂದಿಗೆ ಹಮ್ಮಿಕೊಂಡ ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಕಾನ್ಫರೆನ್ಸ್ ಡಿವಿಷನ್ ಅಧ್ಯಕ್ಷರಾದ ಹನೀಫ್ ಅಹ್ಸನಿ ಕಾಮಿಲ್ ಸಖಾಫಿ ಶೇಡಿಗುರಿಯವರ ಅಧ್ಯಕ್ಷತೆಯಲ್ಲಿ ಕಾಟಿಪಳ್ಳ ಜಂಕ್ಷನ್ ನಡೆಯಿತು.
ಮುಹ್ಯುದ್ದೀನ್ ಜುಮಾ ಮಸೀದಿ ಪಣಂಬೂರು ಮುಸ್ಲಿಂ ಜಮಾಅತ್ ಕಾಟಿಪಳ್ಳ ಇದರ ಖತೀಬರಾದ ವಿ.ಯು ಅಬ್ದುನ್ನಾಸಿರ್ ಮದನಿ ಸೂರಿಂಜೆ ದುಆ ನೆರವೇರಿಸಿದರು.ಎಸ್ಸೆಸ್ಸೆಫ್ ದ.ಕ ಜಿಲ್ಲೆ ವೆಸ್ಟ್ ಸಿ.ಸಿ ಕಾರ್ಯದರ್ಶಿ ಉಮರುಲ್ ಫಾರೂಕ್ ಸಖಾಫಿ ಕಾಟಿಪಳ್ಳ ಉದ್ಘಾಟಿಸಿದರು.
ಕರ್ನಾಟಕ ಸುನ್ನೀ ಜಂಯ್ಯತುಲ್ ಉಲಮಾ ಕಾರ್ಯದರ್ಶಿ ಟಿ.ಎಮ್ ಮುಹ್ಯಿಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಫಿನಾನ್ಸ್ ಸೆಕ್ರೆಟರಿ ಸುಫ್ಯಾನ್ ಸಖಾಫಿ ಕಾವಲಕಟ್ಟೆ ಮುಖ್ಯ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಮುಹ್ಯುದ್ದೀನ್ ಜುಮಾ ಮಸೀದಿ ಪಣಂಬೂರು ಮುಸ್ಲಿಂ ಜಮಾಅತ್ ಕಾಟಿಪಳ್ಳ ಇದರ ಅಧ್ಯಕ್ಷರಾದ ಅಯ್ಯುಬ್ ಕಾಟಿಪಳ್ಳ ಹಾಗೂ ಉಪಾಧ್ಯಕ್ಷರಾದ ಪಿ. ಅಹ್ಮದ್ (ಮೋನ್), ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ರೀಡ್ ಪ್ಲಸ್ ಕಾರ್ಯದರ್ಶಿ ಹುಸೈನ್ ಸಅದಿ ಹೊಸ್ಮಾರ್, ಕ್ಯಾಬಿನೆಟ್ ಕಾರ್ಯದರ್ಶಿ ಸಫ್ವಾನ್ ಚಿಕ್ಕಮಂಗಳೂರು ಹಾಗೂ ರಾಜ್ಯ ಸಮಿತಿ ಸದಸ್ಯರಾದ ಹೈದರ್ ಅಲಿ 4ನೇ ಬ್ಲಾಕ್, ಎಸ್ಸೆಸ್ಸೆಫ್ ದ.ಕ ಜಿಲ್ಲೆ ವೆಸ್ಟ್ ಅಧ್ಯಕ್ಷರಾದ ನವಾಝ್ ಸಖಾಫಿ ಅಡ್ಯಾರ್ ಪದವು, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಮಾಜಿ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಪ್ರಿಂಟೆಕ್, ಎಸ್ಸೆಸ್ಸೆಫ್ ದ.ಕ ಜಿಲ್ಲೆ ಮಾಜಿ ಕ್ಯಾಂಪಸ್ ಕಾರ್ಯದರ್ಶಿ ಹಾಜಿ ಮುಹಮ್ಮದ್ ಆಸಿಫ್ ಕೃಷ್ಣಾಪುರ, ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಕಾನ್ಫರೆನ್ಸ್ ಸ್ವಾಗತ ಸಮಿತಿ ಚೇರ್‌ಮ್ಯಾನ್ ಆರೀಫ್ ಝುಹುರಿ ಮುಕ್ಕ ಸ್ವಾಗತಿಸಿ. ಹಸನ್ ಝುಹ್ರಿ ಮಂಗಳಪೇಟೆ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ