ಮಲಪ್ಪುರಂ,ಮಾ.20: ಕೇರಳದ ಮಲಪ್ಪುರಂ ಜಿಲ್ಲೆಯ ಕಾಳಿಕಾವು ಪೂಂಗೋಡ್ನಲ್ಲಿ ಫುಟ್ಬಾಲ್ ಗ್ಯಾಲರಿಯೊಂದು ಕುಸಿದಿದ್ದು, ಹಲವರು ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ 9.30 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
ಅಖಿಲ ಭಾರತ ಸೆವೆನ್ಸ್ ಫುಟ್ಬಾಲ್ ಟೂರ್ನಿ ನಡೆಯುತ್ತಿರುವ ಕ್ರೀಡಾಂಗಣದ ಬಿದಿರಿನಿಂದ ನಿರ್ಮಿಸಲಾದ ತಾತ್ಕಾಲಿಕ ಗ್ಯಾಲರಿ ಕುಸಿದಿದೆ. ಆಟ ಆರಂಭವಾಗುವ ಮುನ್ನವೇ ಈ ಅವಘಡ ಸಂಭವಿಸಿದೆ. ಸುಮಾರು ಐವತ್ತು ಮಂದಿ ಗಾಯಗೊಂಡಿದ್ದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಯುನೈಟೆಡ್ ಎಫ್ ಸಿ ನೆಲ್ಲಿಕುತ್ ಮತ್ತು ರಾಯಲ್ ಟ್ರಾವೆಲ್ ಕೋಝಿಕ್ಕೋಡ್ ನಡುವಿನ ಫೈನಲ್ ಪಂದ್ಯ ಆರಂಭವಾಗುವ ಕೆಲವೇ ನಿಮಿಷಗಳ ಮುಂಚಿತವಾಗಿ ಈ ಅವಘಡ ಸಂಭವಿಸಿದೆ. ಕ್ರೀಡಾಂಗಣ ತುಂಬಿ ತುಳುಕುತ್ತಿತ್ತು. ಬಿದಿರಿನ ಗ್ಯಾಲರಿಯಲ್ಲಿ ಜನರು ತುಂಬಿಕೊಂಡಿದ್ದರಿಂದ ಜನರು ಹೊರ ಸಾಲಿನಲ್ಲೂ ಕುಳಿತಿದ್ದರು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಗ್ಯಾಲರಿ ಕುಸಿದು ಬಿದ್ದಿದೆ. ಫ್ಲಡ್ ಲೈಟ್ ಕೂಡ ನೆಲಕ್ಕುರುಳಿದೆ.
ಗಾಯಾಳುಗಳನ್ನು ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ವಂಡೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿ







