janadhvani

Kannada Online News Paper

KCF ಒಮಾನ್ ಸೊಹಾರ್ ಝೋನ್: ನೂತನ ಸಾರಥಿಗಳ ಆಯ್ಕೆ

ಸೊಹಾರ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೊಹಾರ್ ಝೋನ್ ಇದರ ವಾರ್ಷಿಕ ಮಹಾಸಭೆಯ ಅಶ್ರಫ್ ಕುತ್ತಾರ್ ಇವರ ಅಧ್ಯಕ್ಷತೆಯಲ್ಲಿ ಮುಲ್ತಕ ಮಜ್ಲಿಸ್ ನಲ್ಲಿ ನಡೆಯಿತು.

ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಝುಬೈರ್ ಸಅದಿ ಪಾಟ್ರುಕೋಡಿವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ರಾಷ್ಟ್ರೀಯ ಮೀಡಿಯಾ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ ಸುಳ್ಯ ಹಾಗೂ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ಸಾಂತ್ವನ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಎರ್ಮಾಳ್ ಇವರು ಸಂದರ್ಭೋಚಿತವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವೀಕ್ಷಕರಾಗಿ (RO) ಆಗಮಿಸಿದ ಇರ್ಫಾನ್ ಕೂರ್ನಡ್ಕರವರ. ಸಮ್ಮುಖದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ನೂತನ ಅಧ್ಯಕ್ಷರಾಗಿ ಫಾರೂಕ್ ಕುಕ್ಕಾಜೆ, ಕಾರ್ಯದರ್ಶಿಯಾಗು ಮುಬೀನ್ ಜೋಕಟ್ಟೆ, ಕೋಶಾಧಿಕಾರಿಯಾಗಿ ಅಝೀಝಿ ಉಪ್ಪಳ, ಸಂಘಟನಾಧ್ಯಕ್ಷರಾಗಿ ಅಶ್ರಫ್ ಕುತ್ತಾರ್, ಸಂಘಟನಾ ಕಾರ್ಯದರ್ಶಿಯಾಗಿ ರಮೀಝ್ ನ್ಯೂ ಪಡ್ಪು, ಶಿಕ್ಷಣ ವಿಭಾಗದ ಅಧ್ಯಕ್ಷರಾಗಿ ಇಕ್ಬಾಲ್ ಮದನಿ, ಕಾರ್ಯದರ್ಶಿಯಾಗಿ ಅಲಿ ಹಿಮಮಿ, ಸಾಂತ್ವನ ವಿಭಾಗದ ಅಧ್ಯಕ್ಷರಾಗಿ ಆರಿಫ್ ಮದಕ, ಕಾರ್ಯದರ್ಶಿಯಾಗಿ ಕರೀಂ ಕೂರತ್, ಪ್ರಕಾಶನ ವಿಭಾಗದ ಅಧ್ಯಕ್ಷರಾಗಿ ಜಬ್ಬಾರ್ ಸಖಾಫಿ ಕನ್ಯಾನ ಕಾರ್ಯದರ್ಶಿಯಾಗಿ ನಝೀರ್ ಸಾರ್ಯ, ಆಡಳಿತ & ಸಾರ್ವಜನಿಕ ಸಂಪರ್ಕ ಇಲಾಖೆಯ ಅಧ್ಯಕ್ಷರಾಗಿ ಅಝೀಝ್ ಆನೆಕಲ್, ಕಾರ್ಯದರ್ಶಿಯಾಗಿ ನಿಝಾಂ ಮಲ್ಲೂರು, ಇಹ್ಸಾನ್ ವಿಂಗ್ ಇದರ ಅಧ್ಯಕ್ಷರಾಗಿ ಸೂಫಿ ಇಬ್ರಾಹೀಂ ಕೋಡಿ ಕಾರ್ಯದರ್ಶಿಯಾಗಿ ಅಝೀಝ್ ಪರ್ಕೋಡಿ, ಐ ಟೀಂ ಇದರ ಕೋರ್ಡಿನೇಟರ್ ಶರೀಫ್ ಮಾಚಾರ್, ಮೀಡಿಯಾ ಕೋರ್ಡಿನೇಟರ್ ಶಫೀಕ್ ಎಲಿಮಲೆ, ಉರ್ದು ವಿಂಗ್ ಕೋರ್ಡಿನೇಟರಾಗಿ ನಿಸಾರ್ ಜೆಪ್ಪು ಹಾಗೂ ಎಕ್ಸಿಕ್ಯುಟಿವ್ ಸದಸ್ಯರುಗಳಾಗಿ ಇಕ್ಬಾಲ್ ಎರ್ಮಾಳ್, ಸಿದ್ದೀಕ್ ಮಾಂಬ್ಳಿ ಸುಳ್ಯ, ಹೈದರ್ ಬಂಟ್ವಾಳ, ಶಬ್ಬೀರ್ ಅಲಂಕಾರ್,ರಷೀದ್ ಕೊಂಡಗೇರಿ, ಅಶ್ರಫ್ ಕರೋಪಾಡಿ, ಅಲಿ ಕರೋಪಾಡಿ ಇವರುಗಳನ್ನು ಆರಿಸಲಾಯಿತು.

ಝೋನ್ ಪ್ರಧಾನ ಕಾರ್ಯದರ್ಶಿ ಮುಬೀನ್ ಜೋಕಟ್ಟೆ ಯವರು ಸಭೆಯನ್ನು ಸ್ವಾಗತಿಸಿದರು. ನೂತನ ಮೀಡಿಯಾ ಕಾರ್ಯದರ್ಶಿ ಶಫೀಖ್ ಎಲಿಮಲೆ ಸುಳ್ಯ ವಂದಿಸಿದರು.