ಮಂಗಳೂರು : ಇತ್ತೀಚೆಗೆ ನಡೆದ ಶಿವಮೊಗ್ಗದ ಯುವಕನ ಹತ್ಯೆ ಕೇಂದ್ರಿತ ವಿಷಯ ಮತ್ತು ದೃಶ್ಯಗಳನ್ನು ಆಧರಿಸಿ, ಪಬ್ಲಿಕ್ ಟಿವಿ ಕನ್ನಡ ನ್ಯೂಸ್ ಚಾನೆಲ್ ನಲ್ಲಿ ಅರುಣ್ ಬಡಿಗಾರ್ ಎಂಬ ಟಿವಿ ನಿರೂಪಕ ಭಾರತದ ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಅವಾಸ್ತವಿಕ ವಿಷಯಗಳನ್ನು ಪ್ರಸ್ತಾಪಿಸಿ, ಸಮಾಜದಲ್ಲಿ ಕೋಮು ಉದ್ವಿಗ್ನತೆ ಸೃಷ್ಟಿ ಯಾಗುವ ರೀತಿಯಲ್ಲಿ , ವಿದ್ವೇಷ ತುಣುಕುಗಳನ್ನು ಪ್ರಕಟಿಸಿರುವುದು ಅಕ್ಷಮ್ಮ್ಯ ಅಪರಾಧ.
ಯಾರೋ ಮತಿ ಭ್ರಮನರು ಗೀಚಿದ ನಾಲ್ಕು ಸಾಲು ಅಕ್ಷರಗಳನ್ನು ಓದುತ್ತಾ ಭಾರತದ ಮುಸ್ಲಿಮರ ಮೇಲೆ,ಇಲ್ಲ ಸಲ್ಲದ ಸುಳ್ಳುಗಳನ್ನು ಹೇಳಿ, ನೈಜ ಸತ್ಯ ಅಂಕಿ ಅಂಶವನ್ನೂ ಮರೆಮಾಚಿ,ಸಾರ್ವಜನಿಕವಾಗಿ ಮುಸ್ಲಿಮರನ್ನು ಕಂಡರೆ ಮುಸ್ಲಿಮೇತರರು ಮುಜುಗರ ವಾಗುವಂತೆ,ಮತೀಯ ಗಲಭೆ ಸೃಷ್ಟಿಸುವ ಉದ್ದೇಶದಿಂದ ಹೇಳಿಕೆ ನೀಡಿರುತ್ತಾರೆ.
ಬಡಿಗಾರ್ ಪ್ರಚುರ ಪಡಿಸಿದ ಈ ಹಲವು ಸುಳ್ಳುಗಳನ್ನು ಈಗಾಗಲೇ ಹಲವು ಕೋಮುವಾದಿ ನಾಯಕರು ಹೇಳಿದ್ದು,ವಿವಿಧ ಇತಿಹಾಸ ತಜ್ಞರು ಅದಕ್ಕೆ ತಕ್ಕುದಾದ ವೈಜ್ಞಾನಿಕ ಅಂಕಿ ಅಂಶಗಳನ್ನು ಬಹಿರಂಗ ಪಡಿಸಿ, ಈ ದೇಶಕ್ಕೆ ಮುಸ್ಲಿಮರು ನೀಡಿದ ಕೊಡುಗೆ ಏನು ಎಂದು ಸಾಬೀತು ಪಡಿಸಿದ್ದಾರೆ. ಬಡಿಗಾರ್ ಬಹುಷಃ ಹೊಸ ಪೀಳಿಗೆಯ ‘ ಪತ್ರಕರ್ತ ‘ ಆಗಿರ ಬೇಕು, ಬಡಿಗಾರ್ ಒದರಿದ ಸುಳ್ಳನ್ನು ಈ ಹಿಂದಿನ ಅವರ ಸಂತತಿಯವರು ಒದರಿ ಮಂಗಳಾರತಿ ಪಡೆದುದ್ದನ್ನು , ಈ ಬಡಿಗಾ ರ್ ಅನುಭವ ಹೊಂದಿಲ್ಲ ಎಂದು ಕಾಣುತ್ತದೆ.
ಬಡಿಗಾರ್ ಇಂತಹ ಸುಳ್ಳುಗಳನ್ನು ತನ್ನ ಸಂತತಿಯವರಿಗೆ ಮಾತ್ರ ಹಂಚಿ ಕೊಳ್ಳಲಿ,ಹೊರತು ಮುಸ್ಲಿಮರ ನೈಜ ಇತಿಹಾಸ ಅಂಕಿಅಂಶ ಗೊತ್ತಿರುವ ಸಾರ್ವಜನಿಕರು ಮತ್ತು ವೀಕ್ಷಕರಿಗೆ ಅಲ್ಲ ಎಂಬುದನ್ನು ಮೊದಲು ತಿಳಿಯಲಿ. ಬಡಿಗಾರ್ ಒಂದು ವೇಳೆ ಇದೇ ರೀತಿ ಮುಂದುವರಿದರೆ ಅವರ ಬಿತ್ತರಣೆಯ ಪರಿಣಾಮ ಸರಿ ಇರಲಿಕ್ಕಿಲ್ಲ ಎಂದು ಅರಿವು ಹೊಂದುವುದು ಒಳ್ಳೆಯದು ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ
ಕೆ.ಅಶ್ರಫ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ