ಕೊಡಗು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಪೆಢರೇಶನ್ ಎಸ್ಸೆಸ್ಸೆಫ್ ರಾಜ್ಯ ವಾರ್ಷಿಕ ಕೌನ್ಸಿಲ್ ಕೊಡಗು ಜಿಲ್ಲೆಯ ಕೊಡ್ಲಿಪೇಟೆಯಲ್ಲಿ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್.ವೈ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಫೀಳ್ ಸಅದಿ ಕೊಡಗು ಕೌನ್ಸಿಲ್ ನ್ನು ಉದ್ಘಾಟಿಸಿದರು.
ವೀಕ್ಷಕರಾಗಿ ಆಗಮಿಸಿದ ಕರ್ನಾಟಕ ರಾಜ್ಯ ಸುನ್ನೀ ಜಂಇಯ್ಯತುಲ್ ಉಲಮಾ ನಾಯಕರಾದ ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ,ಎಸ್ಸೆಸ್ಸೆಫ್ ರಾಷ್ಟ್ರೀಯ ನಾಯಕರಾದ ರಾಶಿದ್ ಬುಖಾರಿ,ಉಬೈದುಲ್ಲಾ ಸಖಾಫಿ ರವರು ತರಗತಿ ನಡೆಸಿದರು.
ವಿವಿಧ್ಲ ವಿಭಾಗಗಳ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ವಾಚಿಸಿದ ನಂತರ ಮುಂದಿನ ಯೋಜನೆಗಳ ಬಗ್ಗೆ ಸಮಗ್ರ ಚರ್ಚೆ ನಡೆಯಿತು.
ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ, ರಾಜ್ಯ ಕೋಶಾಧಿಕಾರಿ ಹಾಫಿಳ್ ಸುಫ್ಯಾನ್ ಸಖಾಫಿ,ಕಾರ್ಯದರ್ಶಿ ಕೆ.ಎಂ ಮುಸ್ತಫಾ ನಈಮಿ ಶುಭಸಂದೇಶಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಸಫ್ವಾನ್ ಚಿಕ್ಕಮಂಗಳೂರು.ಮುನೀರ್ ಅಹ್ಮದ್ ಕಾಮಿಲ್ ಸಖಾಫಿ,ಶರೀಫ್ ಕೊಡಗು,ಎನ್.ಸಿ ರಹೀಂ ಹೊಸ್ಮಾರ್,ಮುಬಶ್ಶಿರಿ ಅಹ್ಸನಿ, ರವೂಫ್ ಖಾನ್ ಕುಂದಾಪುರ,ಮಹಮ್ಮದಲಿ ತುರ್ಕಳಿಕೆ,ಅಝೀಝ್ ಸಖಾಪಿ ಕೊಡ್ಲಿಪೇಟೆ,ಕೊಡಗು ಜಿಲ್ಲಾಧ್ಯಕ್ಷ ಶಾಫಿ ಸಅದಿ ಸೋಮವಾರಪೇಟೆ,ಕೊಡ್ಲಿಪೇಟೆ ಎಸ್. ವೈ.ಎಸ್ ನಾಯಕರಾದ ಇಸ್ಮಾಯಿಲ್ ಎಂ.ಎಂ,ಖಲಂದರ್ ಅಂಜದಿ,ರಹೀಂ ಅಶ್ರಫ್,ಎಸ್ಸೆಸ್ಸೆಫ್ ನಾಯಕರಾದ ಸ್ವಾಲಿಹ್ ರಹ್ಮಾನಿ,ಇಸ್ಮಾಯಿಲ್ ,ಹಾರೂನ್ ರಶೀದಿ ಮೊದಲಾದವರು ಉಪಸ್ಥಿತರಿದ್ದರು..
ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಸ್ವಾಗತಿಸಿ,ಕೊನೆಗೆ ಧನ್ಯವಾದಗೈದರು.







