janadhvani

Kannada Online News Paper

ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳನ್ನು ಕರೆತರಲು ಸರ್ಕಾರ ಪ್ರಮಾಣೆಕ ಪ್ರಯತ್ನ ನಡೆಸಬೇಕು- ಎಸ್ಸೆಸ್ಸೆಫ್

ಶಿಕ್ಷಣಕ್ಕಾಗಿ ವಿದೇಶವನ್ನು ಅವಲಂಬಿಸುವುದು ಅನಿವಾರ್ಯತೆಯ ಭಾಗ, ಅದನ್ನು ಅಪರಾಧದ ದೃಷ್ಟಿಯಿಂದ ಕಾಣುವುದು ಮಹಾತಪ್ಪು.

ಮಂಗಳೂರು: ರಷ್ಯಾ ದಾಳಿಯಿಂದ ಜರ್ಜರಿತವಾಗಿರುವ ಉಕ್ರೇನ್ ನ ಯುದ್ದ ಭೂಮಿಯಲ್ಲಿ ನಮ್ಮ ರಾಜ್ಯದ ಹಾಗು ದೇಶದಿಂದ ವಿದ್ಯಾರ್ಜನೆಗೆ ತೆರಳಿದ ಸಾವಿರಾರು ವಿದ್ಯಾರ್ಥಿಗಳು ಸಿಲುಕಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಆ ಪೈಕಿ ನವೀನ್ ಅನ್ನುವ ವಿದ್ಯಾರ್ಥಿಯ ದುರ್ಮರಣ ಪಾಲಕರನ್ನು ನಿದ್ದೆ ಕೆಡಿಸಿದೆ. ಶಿಕ್ಷಣಕ್ಕಾಗಿ ವಿದೇಶವನ್ನು ಅವಲಂಬಿಸುವುದು ಅನಿವಾರ್ಯತೆಯ ಭಾಗ, ಅದನ್ನು ಅಪರಾಧದ ದೃಷ್ಟಿಯಿಂದ ಕಾಣುವುದು ಮಹಾತಪ್ಪು. ಉಕ್ರೇನ್ ನಲ್ಲಿರುವ ವಿದ್ಯಾರ್ಥಿ ಗಳನ್ನು ಪಾರುಮಾಡಲು ಸರ್ಕಾರ ಯಶಸ್ವಿ ಪ್ರಯತ್ನ ನಡೆಸಬೇಕು.

ನಮ್ಮ ದೇಶದಿಂದ ಯಾವುದೇ ರಾಷ್ಟ್ರಕ್ಕೆ ಶಿಕ್ಷಣ ಪಡೆಯಲು ಹೋದವರಾದರೂ ಅವರ ಸಂರಕ್ಷಣೆ ನಮ್ಮ ಕರ್ತವ್ಯ.ಉಕ್ರೇನ್ ನಲ್ಲಿರುವ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸರ್ಕಾರದ ಸ್ಪಂದನೆ ಸಾಕಾಗುತ್ತಿಲ್ಲ ಎಂಬ ಅಳಲು ವಿದ್ಯಾರ್ಥಿ ಗಳಿಂದ ಪ್ರಕಟ ವಾಗುತ್ತಿದೆ. ಅವರನ್ನು ಸುರಕ್ಷಿತ ವಾಗಿ ಹಾಗು ಅವರ ಎಲ್ಲಾ ಪ್ರಯಾಣ ವೆಚ್ಚವನ್ನು ಭರಿಸಿಕೊಂಡು ತಾಯ್ನಾಡಿಗೆ ಕರೆತರಲು ಪ್ರಮಾಣೆಕ ಪ್ರಯತ್ನ ನಡೆಸ ಬೇಕೆಂದು SSF ರಾಜ್ಯಾಧ್ಯಕ್ಷ ರಾದ ಲತೀಫ್ ಸ‌ಅದಿ ಶಿವಮೊಗ್ಗ ಇಂದಿಲ್ಲಿ ಆಗ್ರಹಿಸಿದರು.