janadhvani

Kannada Online News Paper

ಹಿಜಾಬ್: ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ಕೋರಿ ಸುನ್ನೀ ಮೇನೇಜ್ಮೆಂಟ್ ನಿಂದ ಮನವಿ

ಮಂಗಳೂರು, ಫೆ.26: ಇತ್ತೀಚೆಗೆ ರಾಜ್ಯದಲ್ಲಿ ಹಿಜಾಬ್ ವಿವಾದದಿಂದ ಧಾರ್ಮಿಕ ಸ್ವಾತಂತ್ರ್ಯಕ್ಕೆ ದಕ್ಕೆ ಉಂಟಾದ ಕಾರಣ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಲು ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ಕೋರಿ ಕರ್ನಾಟಕ ರಾಜ್ಯ ಸುನ್ನೀ ಮೇನೇಜ್ಮೆಂಟ್ ಅಸೋಸಿಯೇಶನ್ನ ವೆಸ್ಟ್ ಜಿಲ್ಲಾ ವತಿಯಿಂದ ದ.ಕ. ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಅವನ್ನು ಭೇಟಿಮಾಡಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಜಿಲ್ಲಾ ಉಪಾಧ್ಯಕ್ಷ ಮೂಸ ಹಾಜಿ ಸಾಂಬರತೋಟ, ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ ತೆಕ್ಕಾರು, ಕೋಶಾಧಿಕಾರಿ ಬಶೀರ್ ಅಹ್ಮದ್ ಪಂಜಿಮೊಗರು, ಕಾರ್ಯದರ್ಶಿ ಇಸ್ಮಾಯೀಲ್ ಕಿನ್ಯ, ರಾಜ್ಯ ನಾಯಕ ಇಕ್ಬಾಲ್ ಸುರತ್ಕಲ್, ಜಿಲ್ಲಾ ನಾಯಕರಾದ ರಫೀಕ್ ಝುಹ್ರಿ ಮಂಚಿ, ಸತ್ತಾರ್ ಸಖಾಫಿ ಅಡ್ಯಾರ್ ಪದವು ಉಪಸ್ಥಿತರಿದ್ದರು.