ಎಸ್.ಎಸ್.ಎಫ್ ಬೆಳ್ಳಾರೆ ಸೆಕ್ಟರ್ ಇದರ ವಾರ್ಷಿಕ ಮಹಾ ಸಭೆಯು ದಿನಾಂಕ 10/02/2022 ರಂದು ಗುರುವಾರ ಮಗ್ರಿಬ್ ನಮಾಝಿನ ಬಳಿಕ ಸುನ್ನಿ ಸೆಂಟರ್ನಲ್ಲಿ ಸೆಕ್ಟರ್ ಅಧ್ಯಕ್ಷರಾದ ರಫೀಖ್ ಅಂಜದಿ ಇಂದ್ರಾಜೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸುಳ್ಯ ಡಿವಿಶನ್ ಕಾರ್ಯದರ್ಶಿ ಜುನೈದ್ ಸಖಾಫಿ ಜೀರ್ಮುಖಿ ಕಾರ್ಯಕ್ರಮ ಉಧ್ಘಾಟಿಸಿ ಕಾರ್ಯಕರ್ತರಿಗೆ ಕೆಲವು ಹಿತವಚನಗಳನ್ನು ನೀಡಿದರು.ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಶಮೀರ್ ಕೆ.ಎಂ ವರದಿ ಹಾಗೂ ಲೆಕ್ಕಪತ್ರ ವಾಚಿಸಿದರು.
ಡಿವಿಷನ್ ನಾಯಕರೂ ಸೆಕ್ಟರ್ ಉಸ್ತುವಾರಿಗಳೂ ಆದ ನೌಷಾದ್ ಕೆರೆಮೂಲೆಯವರ ಮುಂದಾಲುತ್ವದಲ್ಲಿ ಸೆಕ್ಟರ್ ಸಮಿತಿಯನ್ನು ಬರ್ಖಾಸ್ತುಗೊಳಿಸಿ ,ನೂತನ ಸಮಿತಿಯನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ರಿಯಾನ್ ಸಹದಿ ತಂಬಿನಮಕ್ಕಿ,ಪ್ರಧಾನ ಕಾರ್ಯದರ್ಶಿಯಾಗಿ ನೌಷಾದ್ ಅಹ್ಸನಿ ಬೆಳ್ಳಾರೆ,ಕೋಶಾಧಿಕಾರಿಯಾಗಿ ಶಮೀರ್ ಪಳ್ಳಿಮಜಲ್ ರನ್ನೂ ವಿವಿಧ ಎಭಾಗಗಳಿಗೆ 8 ಕಾರ್ಯದರ್ಶಿಗಳನ್ನೂ,ಕಾರ್ಯಕಾರಿ ಸಮಿತಿ ಸದಸ್ಯರನ್ನೂ ಆಯ್ಕೆ ಮಾಡಲಾಯಿತು.ಬಳಿಕ ಡಿವಿಶನ್ ಅಧ್ಯಕ್ಷರಾದ ಫೈಝಲ್ ಝುಹ್ರಿ ಅವರಿಂದ ಸಂಘಟನಾ ತರಗತಿ ನಡೆಯಿತು.ಡಿವಿಶನ್ ನಾಯಕರಾದ ಹಸೈನಾರ್ ನೆಲ್ಲಿಕ್ಕಟ್ಟೆ,ಕೆ.ಸಿ .ಎಫ್ ನಾಯಕರಾದ ಲತೀಫ್ ಬಿಸ್ಮಿಲ್ಲಾ ಬೆಳ್ಳಾರೆ ಮುಂತಾದ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ರಿಯಾನ್ ಸಹದಿ ಸ್ವಾಗತಿಸಿ ನೂತನ ಪ್ರಧಾನ ಕಾರ್ಯದರ್ಶಿ ನೌಷಾದ್ ಅಹ್ಸನಿ ಧನ್ಯವಾದ ಹೇಳಿದರು.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ