✍️ಅಬೂಶಝ
19/12/2021
ತನ್ನನ್ನೇ ತಾನು ಸ್ಪೋಟಿಸಿ ಆತ್ಮಹತ್ಯೆಗೆಯ್ಯುವ ಉಗ್ರವಾದಿಯ ಕುರಿತು ಚಿಂತಿಸಿದ್ದೆ…
ಅದೇಗೆ ಅವರಿಗೆ ಆ ಗಟ್ಟಿ ಮನಸ್ಸು ಬರುತ್ತದೆ?
ಸ್ವಂತವಾಗಿ ಉರಿದು ಭಸ್ಮವಾಗುವಾಗುತ್ತೇವೆಂದು ಗೊತ್ತಿದ್ದರೂ ಸೊಂಟದಲ್ಲಿ ಬಾಂಬ್ ಕಟ್ಟಿ ಓಡಾಡುವ ಉಗ್ರನನ್ನು ನೆನೆಸಿ ಕನಿಕರವಾಗುತ್ತಿತ್ತು. ಕೆಲವರಲ್ಲಿ ನಾನು ಕೇಳಿದೆ ಯಾಕೆ ಹೀಗೆ….?
ಉತ್ತರ ಬಂತು ಅವರ ಬಡತನ ದಾರಿದ್ರ್ಯ ಅಸಾಹಯಕತೆಯನ್ನು ದುರುಪಯೋಗ ಮಾಡುವುದು…!
ನಂತರ ನಾವು ನೋಡಿದ್ದು ಪ್ರತಿಭಾವಂತ ಎಜ್ಯುಕೇಟಡ್ ವ್ಯಕ್ತಿಯನ್ನು,….
ಅತ್ಯಗತ್ಯ ಸಂಪತ್ತು ಇದೆ. ಶ್ರೀಮಂತರು, ಡಾಕ್ಡರ್ಸ್,ಇಂಜಿನಿಯರ್ಸ್,ಟೋಟಲಿ ಕಲಿತವರು…!
ಅವರು ಕೂಡಾ ಇದೇ ಹುಚ್ಚಾಟಕ್ಕೆ ಬಲಿಯಾಗಿ ತಮ್ಮನ್ನೇ ಸ್ಪೋಟಿಸಲು ತಯ್ಯಾರಾದಾಗ ಮತ್ತಷ್ಟು ದಂಗಾಗಿದ್ದೆ!
ತಮ್ಮ ಸ್ವಂತ ನಾಡನ್ನು ಬಿಟ್ಟು ದೂರದ ಯಮನ್ ರಾಜ್ಯಕ್ಕೆ ಜಿಹಾದ್‌ಗೆಂದು ಹೋದವರೆಲ್ಲರೂ ಪ್ರೊಫೆಷನಲ್ ಗ್ರಾಜುವೇಟರ್ಸ್…!
ನಂತರ ಸ್ವಲ್ಪ ದಿನ ಕಳೆದು ಗುಂಡಿಗೆ ಬಲಿಯಾಗಿ ಶಹೀದಾದರು ಎಂಬ ವಾರ್ತೆಯಲ್ಲಿ ಚಾಪ್ಟರ್ ಕ್ಲೋಸ್..! ತಂದೆ ತಾಯಿ ಮೈಮುರಿದು ದುಡಿದು ಲಕ್ಷಾಂತರ ರೂಪಾಯಿ ಸುರಿದು ಕಲಿಸಿದ್ದು ನೀರಿನಲ್ಲಿ ಇಟ್ಟ ಹೋಮದಂತೆ ಮಂಗ ಮಾಯ….!
ಶಹೀದ್‌ಗಳ ಪ್ರೊಡೆಕ್ಟ್ಸ್‌ಗಳು ದಿನಕಳೆದಂತೆ ಮೊಳೆಯುತ್ತಿದೆ, ಬೆಳೆಯುತ್ತಿದೆ.
ಯಾ ಶಹೀದ್ ಟ್ರೆಂಡ್ ಅಪಾಯಕಾರಿಯಾಗಿ ಏರುತ್ತಿದೆ!
ಇದೆಲ್ಲದರ ಹಿನ್ನೆಲೆ ಜಮಾತೇ ಇಸ್ಲಾಮೀ ಸಳಪಿಯಾದಿ ಮತಾಂಧ ಸಂಘಟೆನೆಗಳ ಹುನ್ನಾರ ಎಂಬುದು ಸ್ಪಷ್ಟ. ಇಸ್ಲಾಮನ್ನು ತಪ್ಪಾಗಿ ಅರ್ಥೈಸಿ ಕೊಟ್ಟು ಯುವಕರ ಬ್ರೈನ್ ವಾಷ್ ಮಾಡುವುದರಲ್ಲಿ ನೂತನವಾದಿಗಳದ್ದು ಎತ್ತಿದ ಕೈ.
ರಾಜಕೀಯ ಮೇಳಾಟಕ್ಕೆ ಬೇಕಾಗಿ ಈಜಿಪ್ಟ್‌ನಲ್ಲಿ ಇಖ್‌ವಾನ್ ಸಂಘಟನೆ ಮಾಡಿದ ಅದೇ ಶೈಲಿ ನಮ್ಮ ದೇಶದಲ್ಲಿ ಪ್ರಯೋಗಿಸಲ್ಪಡುತ್ತಿದೆ.
ತಮ್ಮ ಕೊಳಕು ರಾಜಕೀಯಕ್ಕೆ ಬೇಕಾಗಿ ಹತ್ಯೆಗೆಯ್ಯಲ್ಪಟ್ಟದ್ದನ್ನು ಶಹೀದ್ ಎಂದು ಬಿಂಬಿಸಿ ರಾಜಕೀಯಕ್ಕೆ ಧರ್ಮದ ಲೇಪ ಹಚ್ಚಲಾಗುತ್ತಿದೆ…!
ಇದು ಮತ್ತಷ್ಟು ಅಪಾಯಕಾರಿ.
ಇಸ್ತ್ರೀ ಸುರುಟಿಗಟ್ಟಿದ ಬಟ್ಟೆಬರೆಗಳನ್ನು ನೀಟಾಗಿಸಬಹುದು, ಆದರೆ ಅದೇ ಇಸ್ತ್ರಿ ನೆರಿಗಟ್ಟಿದ ಅಜ್ಜಿಯ ಮುಖ ನೀಟಾಗಿಸಲು ಬಳಸಿದರೆ ಅಜ್ಜಿಗೆ ಮುಖವೇ ಇಲ್ಲವಾಗಬಹುದು!
ಅದೇ ರೀತಿ ಶಹೀದ್ ಎಂಬುದು ಧರ್ಮ ಸಮರದ ಟ್ರೆಂಡ್. ಅದನ್ಮು ನೀಚ ರಾಜಕೀಯ ಹತ್ಯೆಗೆ ಬಳಸಿದರೆ ಪವಿತ್ರ ಧರ್ಮದ ಬೆಳಕೇ ಆರಬಹುದು.
ಭಾರತದಂತಹ ಜಾತ್ಯಾತೀತ ದೇಶಗಳಲ್ಲಿ ಮುಸ್ಲಿಮರು ಯಾವ ರೀತಿ ಬದುಕಬೇಕು ಎಂಬುದನ್ನು ಇಸ್ಲಾಂ ಕಲಿಸಿಕೊಟ್ಟಿದೆ
ಶಿಕ್ಷಣವೇ ನಮ್ಮ ಆಯುಧವಾಗಬೇಕು. ಶಿಕ್ಷಣದಿಂದಲೇ ಎಲ್ಲವನ್ನು ಸಾಧಿಸಬೇಕು. ಶಿಕ್ಷಣವೇ ನಮ್ಮ ಮುಖ್ಯ ಗುರಿಯಾಗಬೇಕು ಶಿಕ್ಷಣ ಪಡೆದೇ ಸರಕಾರದ ಆಯಕಟ್ಟಿನ ಜಾಗ ಭದ್ರ ಪಡಿಸಿ ಈ ಉಮ್ಮತಿನ ಪ್ರತಿನಿಧಿಯಾಗಿ ಸರ್ವರಿಗೂ ಮಾದರಿಯಾಗಿ ಖಲೀಫಾ ಉಮರ್ ಬಿನ್ ಖತ್ತಾಬ್ (ರ) ರವರ ಆಡಳಿತ ಪರಿಚಯಿಸಬೇಕು.
ಧರ್ಮದ ಹೆಸರಲ್ಲಿ ತುಂಡು ತುಂಡು ರಾಜಕೀಯ ಪಕ್ಷ ಕಟ್ಟಿ ಯುವಕರು ಆವೇಶದ ಹುಳುಗಳಾಗಿ ಅಲ್ಪಾಯುಷಿಗಳಾಗ ಬಾರದು.ಶಿಕ್ಷಣ ಪಡೆದು ಉನ್ನತ ದರ್ಜೆ ಏರಬೇಕಾದ ಸಮಯ ಸೆರೆಮನೆಗಳಲ್ಲಿ ಕೊಳೆಯುವಂತಾಗಬಾರದು. ನಮ್ಮ ಉಲಮಾಗಳು ಪ್ರವಾದಿಗಳ ವಾರಿಸುದಾರರು. ಅವರು ಶಿಕ್ಷಣ ಮತ್ತು ಧರ್ಮನಿಷ್ಠೆಯನ್ನು ಸೂಫಿಸಂನೊಂದಿಗೆ ನೀಡುತ್ತಿದ್ದಾರೆ.ಅದು ಅವುಲಿಯಾಗಳ ಸೂಫಿ ಸಂತರ ದಾರಿ ಕೂಡಾ.
ಧರ್ಮ ನಿಷ್ಠೆ ಮತಾಂಧತೆ ಆಗಬಾರದು.
ಎಸಿ ,ಡಿಸಿ ಕಛೇರಿ ಮುಂದೆ ಧರಣಿ ಕುಳಿತುಕೊಳ್ಳುವುದನ್ನೇ ವಾಡಿಕೆ ಮಾಡದೆ ಎಸಿ,ಡಿಸಿ ಕಛೇರಿಯ ಕುರ್ಚಿಯಲ್ಲಿ ಕುಳಿತುಕೊಂಡು ನಿಯಂತ್ರಿಸುವಷ್ಟು ನಮ್ಮ ಯುವಕರು ಬೆಳೆಯಬೇಕು.
ಆದರೆ ಅನಗತ್ಯ ಆವೇಶ ತಂತ್ರಗಾರಿಕೆ ,ಯಾವುದೂ ಇಲ್ಲದೆ ಸಿಲ್ಲಿ ರಾಜಕೀಯಕ್ಕೆ ಬೇಕಾಗಿ ಧರ್ಮದ ಲೇಬಲಲ್ಲಿ ತಕ್ಬೀರ್ ಮೊಳಗಿಸಿ ಯುವಕರ ಭವಿಷ್ಯತ್ತನ್ನು ನಾಶದ ಕೂಪಕ್ಕೆ ತಳ್ಳುವ ಇಂತಹ ಅನಾಗರಿಕ ಸಂಸ್ಕೃತಿಗೆ ಅಂತ್ಯ ಹಾಡುವಲ್ಲಿ ಎಲ್ಲರೂ ಕೈ ಜೋಡಿಸಬೇಕು.ಇದೆಲ್ಲವೂ ಧರ್ಮಕ್ಕೆಅಪಚಾರಗೆಯ್ಯುವ ಜಮಾತೇ ಇಸ್ಲಾಮೀ ಸಳಪಿಯಾದಿ ತಬ್ಲೀಗ್ ನೂತನವಾದದ ಪರಿಣಿತ ಫಲ ಎಂಬುದನ್ನು ಯಾರೂ ಮರೆಯಬಾರದು.
ತಬ್ಲೀಗ್, ಉಗ್ರವಾದದ ರಹದಾರಿ ಎಂಬುದನ್ನು ಮುಸ್ಲಿಂ ರಾಷ್ಟ್ರವಾದ ಸೌದಿ ಒಪ್ಪಿಕೊಂಡಿದೆ. ಆದರೆ ಸೌದಿ ಸರಕಾರ ಫತ್ವಾ ಹೊರಡಿಸುವ 50/60 ವರ್ಷಕ್ಕೆ ಮುಂಚೆಯೇ ನಮ್ಮ ಸುನ್ನೀ ಉಲಮಾಗಳು ತಬ್ಲೀಗ್ ಡೇಂಜರ್ ಎಂದು ಸಾರಿ ಹೇಳಿದ್ದನ್ನು ನೆನೆಸುವಾಗ ನಮ್ಮ ಉಲಮಾಗಳ ಧೀರ್ಘದೃಷ್ಠಿ ಶತಮಾನಗಳ ದೂರಕ್ಕೆ ಇದೆ ಎಂಬುದನ್ನು ನಾವು ಮರೆಯಬಾರದು. ಕಾರಣ ಅವರು ಪ್ರವಾದಿಗಳ ಉತ್ತರಾಧಿಕಾರಿಗಳು! ಅದೇ ರೀತಿ ನಮ್ಮ ಉಲಮಾಗಳು ಸಳಪಿಯಾದಿ ಸರ್ವ ನೂತನವಾದಗಳನ್ನು ಮತ್ತು ಅವರು ತಂತ್ರಪೂರ್ವಕವಾಗಿ ನಮ್ಮ ಯುವಕರಿಗೆ ಮತಾಂಧತೆ ಆವೇಶ ಹಾಕಿ ದುರುಪಯೋಗಗೊಳಿಸುವುದನ್ನು ವಿರೋಧಿಸುತ್ತಾ ಬಂದಿದ್ದಾರೆ. ಆದರೆ ನಮ್ಮ ನವತಲೆಮಾರಿನ ಯುವಕರಿಗೆ ಅದು ಅರ್ಥವಾಗುವುದಿಲ್ಲ ಪಥ್ಯವಾಗುದಿಲ್ಲ ಎಂಬುದೇ ಖೇದಕರ ಸಂಗತಿ.
ಇನ್ಶಾಅಲ್ಲಾ, ನಮ್ಮ ಉಲಮಾಗಳು ಹೇಳಿದ್ದೇ ಸರಿ ಎಂದು ಹೇಳುವ ಕಾಲವೊಂದು ಬರಲಿದೆ.ಅವಾಗ ಬೆರಳು ಕಚ್ವಿ ಪ್ರಯೋಜನ ಇರಲಾರದು.
ಉಲಮಾಗಳ ನೇತೃತ್ವ ಯಾವತ್ತೂ ನಿಮ್ಮನ್ನು ಗಂಡಾತರಕ್ಕೆ ಸಿಲುಕಿಸದು ಅವರ ಕಾರ್ಯಚರಣೆ ನಿಮಗೆ ಇಂದು ಪಥ್ಯವಾಗಲಾರದು ಆದರೆ ಒಂದಿಲ್ಲೊಂದು ದಿನ ಅವರದ್ದೆ ಸರಿ ಎಂದು ಕಾಲ ಹೇಳುತ್ತದೆ. ಈಗ ಸೌದಿ ಸರಕಾರ ಹೇಳಿದ ಹಾಗೆ……
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ